ಬೆಂಗಳೂರು: ಕರ್ನಾಟಕ ವೈದ್ಯಕೀಯ, ಎಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್-ಕೆ) ಎಂಜಿನಿಯರಿಂಗ್ ಕೋರ್ಸ್‌ಗಳ ಸೀಟು ಹಂಚಿಕೆಗೆ ನಡೆಸಿದ ಪ್ರವೇಶ ಪರೀಕ್ಷೆಯಲ್ಲಿ ಕರ್ನಾಟಕದ ಐದು ವಿದ್ಯಾರ್ಥಿಗಳು ಮೊದಲ ಹತ್ತು ರ್‍ಯಾಂಕ್ ವಿಜೇತರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಖಾಸಗಿ ಎಂಜಿನಿಯರಿಂಗ್ ಕಾಲೇಜು ಹಾಗೂ ಖಾಸಗಿ ವಿಶ್ವವಿದ್ಯಾಲಯಗಳ ಎಂಜಿನಿಯರಿಂಗ್ ಸೀಟುಗಳ ಹಂಚಿಕೆಗೆ ದೇಶಾದ್ಯಂತ ನಡೆಸಿದ 2019- 20ನೇ ಸಾಲಿನ ಕಾಮೆಡ್-ಕೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದೆ.
ಮೊದಲ ಎರಡು ಸ್ಥಾನಗಳನ್ನು ಉತ್ತರ ಪ್ರದೇಶ, 3 ಮತ್ತು 8ನೇ ಸ್ಥಾನ ಆಂಧ್ರ ಪ್ರದೇಶ ಪಡೆದಿದ್ದು, 4,5,7,9 ಮತ್ತು 10ನೇ ಸ್ಥಾನ ಕರ್ನಾಟಕದ ಪಾಲಾಗಿದೆ. 6ನೇ ಸ್ಥಾನವನ್ನು ಮಹಾರಾಷ್ಟ್ರ ವಿದ್ಯಾರ್ಥಿ ಪಡೆದಿದ್ದಾರೆ.
180 ಅಂಕಗಳಿಗೆ 169 ಅಂಕ ಪಡೆದಿರುವ ಉತ್ತರ ಪ್ರದೇಶದ ಅಮಿತ್ ಕುಮಾರ್ ಪ್ರಥಮ, 168 ಅಂಕ ಪಡೆದಿರುವ ಅಕ್ಷಯ್ ಕುಮಾರ್ ಚೌರಾಸಿಯಾ ದ್ವಿತೀಯ ಹಾಗೂ 166 ಅಂಕ ಪಡೆದಿರುವ ಆಂಧ್ರ ಪ್ರದೇಶದ ಮನುಬೋಲು ನರೈನ್ ಶ್ರೀಹಿತ್ ತೃತೀಯ ಸ್ಥಾನ ಪಡೆದಿದ್ದಾರೆ. ಮೊದಲ 100 ರ್‍ಯಾಂಕ್‌ನಲ್ಲಿ ರಾಜ್ಯದ 37, ಮೊದಲ ಸಾವಿರ ರ್‍ಯಾಂಕ್‌ನಲ್ಲಿ 255 ವಿದ್ಯಾರ್ಥಿಗಳು ಸ್ಥಾನ ಪಡೆದಿದ್ದಾರೆ.
4, 5, 7, 9, 10ನೇ ಸ್ಥಾನ ಕರ್ನಾಟಕದ ಪಾಲು.