ಕರಾಚಿ: ನ್ಯೂಜಿಲ್ಯಾಂಡ್ ಎದುರಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ಥಾನ ಅಂತಿಮ ವಿಕೆಟ್ ಉಳಿಸಿಕೊಂಡು ಸೋಲಿನಿಂದ ಪಾರಾಗಿದೆ. ಗೆಲುವಿಗೆ 319 ರನ್ ಗುರಿ ಪಡೆದ ಪಾಕ್, ಪಂದ್ಯ ಕೊನೆಗೊಳ್ಳುವ ವೇಳೆ 9 ವಿಕೆಟಿಗೆ 304 ರನ್ ಗಳಿಸಿತ್ತು.
41 ರನ್ ಮುನ್ನಡೆ ಪಡೆದಿದ್ದ ನ್ಯೂಜಿಲ್ಯಾಂಡ್ ದ್ವಿತೀಯ ಸರದಿಯಲ್ಲಿ 5ಕ್ಕೆ 277 ರನ್ ಗಳಿಸಿ ಡಿಕ್ಲೇರ್ ಮಾಡಿತು. ಒಂದು ಹಂತದಲ್ಲಿ ವಿಕೆಟ್ ಕೀಪರ್ ಸರ್ಫರಾಜ್ ಅಹ್ಮದ್ ಕಿವೀಸ್ ಸವಾಲನ್ನು ದಿಟ್ಟ ರೀತಿಯಲ್ಲೇ ಸ್ವೀಕರಿಸಿದರು.
ಶತಕದೊಂದಿಗೆ ಮುನ್ನುಗ್ಗಿದರು. ಅವರು ಕ್ರೀಸ್‌ನಲ್ಲಿರುವಷ್ಟು ಹೊತ್ತು ಪಾಕ್ ಗೆಲುವಿನ ನಿರೀಕ್ಷೆಯಲ್ಲಿತ್ತು. ಆದರೆ 118 ರನ್ ಬಾರಿಸಿದ ಸಫìರಾಜ್ 9ನೇ ವಿಕೆಟ್ ರೂಪದಲ್ಲಿ ಪೆವಿಲಿಯನ್ ಸೇರಿಕೊಂಡಾಗ ಪಂದ್ಯ ನ್ಯೂಜಿಲ್ಯಾಂಡ್ ಕಡೆ ತಿರುಗಿತು. ಕೊನೆಯಲ್ಲಿ ನಸೀಮ್ ಶಾ ಮತ್ತು ಅಬ್ರಾರ್ ಅಹ್ಮದ್ 3.3 ಓವರ್‌ಗಳನ್ನು ನಿಭಾಯಿಸಿ ಪಂದ್ಯಕ್ಕೆ ಡ್ರಾ ಮುದ್ರೆ ಒತ್ತಿದರು. ಇದರೊಂದಿಗೆ ಸರಣಿಯ ಎರಡೂ ಟೆಸ್ಟ್ ಪಂದ್ಯಗಳು ಡ್ರಾಗೊಂಡಂತಾಯಿತು.
ಸಂಕ್ಷಿಪ್ತ ಸ್ಕೋರ್: ನ್ಯೂಜಿಲ್ಯಾಂಡ್-449 ಮತ್ತು 5 ವಿಕೆಟಿಗೆ 277 ಡಿಕ್ಲೇರ್. ಪಾಕಿಸ್ಥಾನ-408 ಮತ್ತು 9 ವಿಕೆಟಿಗೆ 304 (ಸರ್ಫರಾಜ್ 118, ಮಸೂದ್ 35, ಶಕೀಲ್ 32, ಬ್ರೇಸ್‌ವೆಲ್ 75ಕ್ಕೆ 4, ಸೌಥಿ 43ಕ್ಕೆ 2, ಸೋಧಿ 59ಕ್ಕೆ 2).
ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ: ಸರ್ಫರಾಜ್ ಅಹ್ಮದ್.