Advertisement

ನಾಳೆ ಬಾ, ನಾಳೆಯೇ ಪ್ರದರ್ಶನ!

03:13 PM Nov 04, 2017 | Team Udayavani |

ದಶಕಗಳ ಹಿಂದೆ ಹುಟ್ಟಿಕೊಂಡ, ಅಂತ್ಯಕಾಲಕ್ಕೆ ಸಮೀಪ ಎನ್ನುವ “ನಾಳೆ ಬಾ’ ಪದವನ್ನು ಯಾರೂ ಮರೆಯುವುದಿಲ್ಲ. ಆ ಭಯ ಹುಟ್ಟಿಸೋ ಪದವನ್ನೇ ನಾಟಕದ ಶೀರ್ಷಿಕೆ ಮಾಡಿಕೊಂಡು ರಂಗದ ಮೇಲೆ ಬರುತ್ತಿದೆ, ಯುವ ಚೇತನ ಸಂಸ್ಥೆ. ಅಂದಹಾಗೆ, “ನಾಳೆ ಬಾ’ ಎನ್ನುವುದು ನಗೆನಾಟಕ. ನಗರದ ಜಂಜಾಟದಲ್ಲಿ ವಿಪರೀತ ಬ್ಯುಸಿ ಇರುವ ಸಾಫ್ಟ್ವೇರ್‌ ಎಂಜಿನಿಯರ್‌ ಒಬ್ಬನ ಕತೆಯಿದು.

Advertisement

ತನ್ನೆಲ್ಲ ಸಮಯವನ್ನು ಕಚೇರಿಗೆ ವಿನಿಯೋಗಿಸುತ್ತಾ, ವೈಯಕ್ತಿಕ ಕೆಲಸಗಳನ್ನು ಮುಂದೂಡುತ್ತಾ, ಸಮಸ್ಯೆಯ ಗೂಡಿನಲ್ಲಿ ಸಿಲುಕಿ ನಲುಗುವ ಸಾಫ್ಟ್ವೇರ್‌ ಎಂಜಿನಿಯರ್‌ನ ಬದುಕನ್ನು ಹಾಸ್ಯದ ಮೂಲಕ ಚಿತ್ರಿಸಲಾಗಿದೆ. ಸಂತೋಷ್‌ ಗಣಾಚಾರಿ ಇದರ ನಿರ್ದೇಶಕರು. ತಾರಾಗಣದಲ್ಲಿ ಸಂತೋಷ್‌ ಗಣಾಚಾರಿ, ಅಭಿಜಿತ್‌ ವೈ.ಎಸ್‌. ಮಧುಶ್ರೀ ಸಿ., ಮೇಖಲಾ ಕುಲಕರ್ಣಿ ಮತ್ತಿತರರು ನಟಿಸಿದ್ದಾರೆ.

ಎಲ್ಲಿ?: ಎಚ್‌.ಎನ್‌. ಕಲಾಕ್ಷೇತ್ರ, ನ್ಯಾಶನಲ್‌ ಕಾಲೇಜು ಕ್ಯಾಂಪಸ್‌, ಜಯನಗರ
ಯಾವಾಗ?: ನವೆಂಬರ್‌ 5, ಸಂಜೆ 7
ಟಿಕೆಟ್‌: 100 ರೂ.

Advertisement

Udayavani is now on Telegram. Click here to join our channel and stay updated with the latest news.

Next