Advertisement
ಅಷ್ಟೇ ಯಾಕೆ, “ಮುಂಗಾರು ಮಳೆ’ ಮೂಲಕ ಗಣೇಶ್ ಯಶಸ್ವಿ ನಟ ಎನಿಸಿಕೊಂಡರೆ, “ದುನಿಯಾ’ ಮೂಲಕ ವಿಜಯ್ ಸಕ್ಸಸ್ ಕಂಡರು. ಅಲ್ಲಿಂದ ಇಲ್ಲಿಯವರೆಗೆ ಯಶಸ್ಸಿನ ಹಾದಿಯಲ್ಲೇ ಸಾಗಿ ಬಂದಿರುವ ಗಣೇಶ್ ಮತ್ತು ವಿಜಯ್, ಒಂದು ದಶಕದ ಬಳಿಕ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳಲು ಉತ್ಸಾಹದಲ್ಲಿದ್ದಾರೆ. ಅಂದಹಾಗೆ, ಇವರಿಬ್ಬರನ್ನೂ ಒಂದೇ ಚಿತ್ರದಲ್ಲಿ ತೋರಿಸಲು ಹೊರಟಿರುವುದು ಪ್ರೀತಂ ಗುಬ್ಬಿ.
Related Articles
Advertisement
ಇಬ್ಬರಿಗೂ ಆಸೆ ಇತ್ತು. ಅದೀಗ ಶುರುವಾಗುವ ಲಕ್ಷಣಗಳು ಕಾಣುತ್ತಿವೆ. ಇನ್ನು, ನಮ್ಮಿಬ್ಬರ ಚಿತ್ರ ನನ್ನ ಗೋಲ್ಡನ್ ಮೂವೀಸ್ ಬ್ಯಾನರ್‌ನಲ್ಲಿ ಆಗಬೇಕು ಎಂಬ ಆಸೆ ನನ್ನದು. ನನ್ನೊಂದಿಗೆ ಬೇರೆಯವರು ಸೇರಿಕೊಳ್ಳುವ ಸಾಧ್ಯತೆ ಇದೆ. ಈಗಾಗಲೇ ಎಷ್ಟೋ ಮಂದಿ ನೀವಿಬ್ಬರು ನಟಿಸುವ ಸಿನಿಮಾವನ್ನು ನಾವು ನಿರ್ಮಿಸುತ್ತೇವೆ ಅಂತ ಹೇಳುತ್ತಿದ್ದಾರೆ. ಆದರೆ, ನಾವಿನ್ನೂ ನಿರ್ಧರಿಸಿಲ್ಲ. ಈಗ ಒಳ್ಳೆಯ ಸಮಯ ಬಂದಿದೆ.
ಪ್ರೀತಂ ಜನವರಿಯಿಂದ ಸ್ಕ್ರಿಪ್ಟ್ ಶುರು ಮಾಡಲಿದ್ದಾರೆ’ ಎಂದು ಹೇಳುತ್ತಾರೆ ಗಣೇಶ್. ವಿಜಿ ಕೂಡಾ ಖುಷಿಯಿಂದ ಈ ಸಿನಿಮಾ ಬಗ್ಗೆ ಮಾತನಾಡುತ್ತಾರೆ. “ನಾನು ಮತ್ತು ಗಣಿ ಜತೆಯಲ್ಲೇ ಬೆಳೆದು ಬಂದಿದ್ದೇವೆ. ಒಟ್ಟಿಗೆ ಗೆಲುವು ಕಂಡಿದ್ದೇವೆ. ಸಾಕಷ್ಟು ಕಷ್ಟ ಅನುಭವಿಸಿದ್ದೇವೆ. ಎಷ್ಟೋ ಅವಮಾನಗಳನ್ನೂ ಸಹಿಸಿಕೊಂಡಿದ್ದೇವೆ. ಆದರೆ, ನಾವು ಯಾವತ್ತೂ ಹಿಂದಿನದ್ದನ್ನು ಮರೆತಿಲ್ಲ.
ಗೆಲುವು, ಸೋಲು ಏನೇ ಇದ್ದರೂ, ಇಬ್ಬರೂ ಒಂದೇ ರೀತಿ ಇದ್ದೇವೆ. ಇಬ್ಬರಿಗೂ ಜತೆಯಾಗಿ ಒಂದು ಸಿನಿಮಾ ಮಾಡುವ ಆಸೆ ಇತ್ತು. ಆದರೆ ಆಗಿರಲಿಲ್ಲ. ನಾವು ಸರಿಯಾಗಿ ನೆಲೆಕಂಡು ಒಂದು ದಶಕ ಕಳೆದಿದೆ. ಹಾಗಾಗಿ ಆ ನೆನಪಿಗೊಂದು ಭರ್ಜರಿ ಸಿನಿಮಾ ಕೊಡುವ ಉದ್ದೇಶವಿದೆ. ಕಷ್ಟದ ದಿನಗಳಲ್ಲಿ ಜತೆಯಾಗಿದ್ದವರು ನಾವು.
ಈಗ ಚೆನ್ನಾಗಿದ್ದೇವೆ. ಈಗ ನಮ್ಮ ಅಭಿಮಾನಿಗಳಿಗೊಂದು ಒಳ್ಳೆಯ ಚಿತ್ರ ಕೊಡುವ ಮನಸ್ಸು ಮಾಡಿದ್ದೇವೆ. ಮುಂದಿನ ವರ್ಷ ನಮ್ಮಿಬ್ಬರ ಕಾಂಬಿನೇಷನ್‌ನಲ್ಲೊಂದು ಚಿತ್ರ ಬರುವುದು ಪಕ್ಕಾ’ ಎಂದು ಹೇಳುತ್ತಾರೆ ವಿಜಯ್. ಗಣೇಶ್ “ಆರೆಂಜ್’ ಹಾಗೂ ವಿಜಯ್ “ಜಾನಿ ಜಾನಿ ಯೆಸ್ ಪಪ್ಪಾ’ ಮುಗಿಸಿದ ನಂತರ ಈ ಸಿನಿಮಾ ಆರಂಭವಾಗಬಹುದು.