Advertisement

ನಮ್ಮಲ್ಲಿಗೆ ಬನ್ನಿ: ಭಾರತದ ಟೆಕಿಗಳಿಗೆ ಜಪಾನ್‌ ಆಹ್ವಾನ

07:30 AM Mar 09, 2018 | |

ನವದೆಹಲಿ: “ಡೊನಾಲ್ಡ್‌ ಟ್ರಂಪ್‌ರ ಅಮೆರಿಕ ಬಿಡಿ; ನಮ್ಮ ಜಪಾನ್‌ಗೆ ಬನ್ನಿ’. ಇದು ದೇಶದ ಟೆಕಿಗಳಿಗೆ ಜಪಾನ್‌ ನೀಡಿದ ಆಹ್ವಾನ. ಜತೆಗೆ ಎರಡು ಲಕ್ಷ ಮಂದಿ ಐಟಿ ಉದ್ಯೋಗಿಗಳಿಗೆ ಶಾಶ್ವತವಾಗಿ ನೆಲೆಸುವ ನಿಟ್ಟಿನಲ್ಲಿ ಗ್ರೀನ್‌ ಕಾರ್ಡ್‌ ನೀಡಲೂ ಜಪಾನ್‌ ಮುಂದಾಗಿದೆ. ಜಪಾನ್‌ ಸರ್ಕಾರದ ಬಾಹ್ಯ ವ್ಯಾಪಾರ ಸಂಘಟನೆ (ಜೆಇಟಿಆರ್‌ಒ) ಕಾರ್ಯ ನಿರ್ವಾಹಕ ಉಪಾಧ್ಯಕ್ಷ ಶಿಗೆಕಿ ಮಡೆಯಾ ಗುರುವಾರ ಬೆಂಗಳೂರಿನಲ್ಲಿ ಈ ಮಾಹಿತಿ ನೀಡಿದ್ದಾರೆ. 

Advertisement

ಜಪಾನ್‌ನಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ವಿಸ್ತರಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ ಅವರು ಸದ್ಯ 9 ಲಕ್ಷ ಉದ್ಯೋಗಿಗಳಿದ್ದಾರೆ. ತಕ್ಷಣವೇ 2 ಲಕ್ಷಕ್ಕೂ ಅಧಿಕ ಐಟಿ ಉದ್ಯೋಗಸ್ಥರಿಗೆ ಬೇಡಿಕೆ ಇದೆ. 2030ರ ವೇಳೆ 8 ಲಕ್ಷಕ್ಕೂ ಅಧಿಕ ಐಟಿ ಉದ್ಯೋಗಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಶಿಗೆಕಿ ಹೇಳಿದ್ದಾರೆ.

ಹೊಸ ರೀತಿಯ ನಾವಿನ್ಯ ತಂತ್ರಜ್ಞಾನವನ್ನು ಅಳವಡಿಸಲು ಜಪಾನ್‌ ಸಿದ್ಧವಾಗಿದೆ. ಇದರ ಜತೆಗೆ ಉತ್ಪಾದನಾ ಕ್ಷೇತ್ರದಲ್ಲಿನ ತಂತ್ರಜ್ಞಾನವನ್ನು ಜನಪ್ರಿಯಪಡಿಸಲು ಮುಂದಾಗಿದೆ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಭಾರತೀಯರಿಗಾಗಿ ಏಪ್ರಿಲ್‌ 1ರಿಂದ ಅನ್ವಯವಾಗುವಂತೆ ಹೊಸ ವೀಸಾ ನಿಯಮ ಜಾರಿಗೊಳಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next