Advertisement
ತಾಲೂಕಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಾಮಾನ್ಯ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕೊರೊನಾ,ಗ್ರಾಪಂ ಚುನಾವಣೆ ನೀತಿ ಸಂಹಿತೆ, ಇತರೆಕಾರಣಗಳಿಂದ ಸರ್ವ ಸದಸ್ಯರ ಸಾಮಾನ್ಯಸಭೆ ಒಂದು ತಿಂಗಳು ಮುಂದೂಡಲಾಗಿತ್ತು.ಸಭೆಯಲ್ಲಿ ಏನೋ ಒಂದು ಹರಕೆ ಉತ್ತರನೀಡಬಹುದೆಂದು ಅಧಿಕಾರಿಗಳುಅಂದುಕೊಂಡಿದ್ದಾರೆ. ಆದರೆ, ಎಲ್ಲಾಮಾಹಿತಿಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ಹೇಳಿದರು.
Related Articles
Advertisement
ನೀರಿಗೆ ತೊಂದರೆ ಆಗದಿರಲಿ: ಜಿಪಂ ಸಿಇಒ ಎಂ.ಆರ್.ರವಿಕುಮಾರ್ ಮಾತನಾಡಿ, ಬೇಸಿಗೆ ಸಮೀಪಿಸುತ್ತಿರುವ ಕಾರಣ 4 ತಾಲೂಕುಗಳಲ್ಲಿ ಕುಡಿಯುವನೀರಿಗೆ ಎಲ್ಲೆಲ್ಲಿ ಸಮಸ್ಯೆ ಇರುವುದೆಂದು ನೋಡಿಕೊಂಡು, ನಿರ್ವಹಣೆ ಮಾಡಲುಗ್ರಾಪಂಗೆ ಹೊಣೆ ನೀಡಿದರೆ ಯಾವುದೇ ಸಮಸ್ಯೆಗಳು ಬರುವುದಿಲ್ಲ ಎಂದರು.
ಸರ್ಕಾರ ವಿವಿಧ ಇಲಾಖೆಗಳ ಕಾಮಗಾರಿಗೆ ಈಗಾಗಲೇ ಹಣಬಿಡುಗಡೆಗೊಳಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಸಂಪೂರ್ಣ ಬಳಸಿಕೊಂಡುಮಾ.5 ರೊಳಗೆ ಖಜಾನೆಗೆ ಹಣಬಳಕೆಪತ್ರವನ್ನು ಸಲ್ಲಿಸಬೇಕು. ಹಣ ಒಂದು ವೇಳೆದುರುಪಯೋಗವಾದಲ್ಲಿ ಸಂಬಂಧಿಸಿದಇಲಾಖೆಯ ಅಧಿಕಾರಿಗಳ ಸಂಬಳದಿಂದ ನಷ್ಟ ಪಡೆಯಲಾಗುವುದು ಎಂದು ತೀರ್ಮಾನಿಸಿ ಆದೇಶ ಹೊರಡಿಸಿದೆ ಎಂದರು.
ಜಿಪಂ ಉಪಕಾರ್ಯದರ್ಶಿ ಕರಿಯಪ್ಪ,ಯೋಜನಾಧಿಕಾರಿ ವಿನುತಾರಾಣಿ, ಜಿಲ್ಲಾಲೆಕ್ಕಾಧಿಕಾರಿ ರಮೇಶ್ ರೆಡ್ಡಿ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಲಕ್ಷ್ಮೀನಾರಾಯಣಪ್ಪ, ಕೈಗಾರಿಕೆ ಮತ್ತು ಕೃಷಿ ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ, ಜಿಪಂ ಸದಸ್ಯರು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತತರು ಇದ್ದರು.