Advertisement
ನವರಾತ್ರಿ ಅಂಗವಾಗಿ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಳ್ಳಲಾಗಿರುವ ದಸರಾ ಗೊಂಬೆ ಹಬ್ಬದಲ್ಲಿ ರಾಮಾಯಣ ಮತ್ತು ಮಹಾಭಾರತಕ್ಕೆ ಸಂಬಂಧಿಸಿದ ಗೊಂಬೆಗಳನ್ನು ಕುಳ್ಳಿರಿಸಲಾಗಿದೆ. ಅ.16ರವರೆಗೂ ಪ್ರದರ್ಶನ ನಡೆಯಲಿದ್ದು, ಬೆಳಗ್ಗೆ 11 ರಿಂದ ಸಂಜೆ 6ರವರೆಗೂ ಪ್ರದರ್ಶನ ತೆರೆದಿರುತ್ತದೆ. ಉಚಿತ ಪ್ರವೇಶ ಕಲ್ಪಿಸಲಾಗಿದೆ.ಪ್ರಭಾವಳಿ ಹೊಂದಿರುವ ಪಟ್ಟದ ಗೊಂಬೆಗಳು ಬರುವವರನ್ನು ಸ್ವಾಗತಿಸುತ್ತಿದ್ದರೆ, ಒಳಗೆ ಹೋದ ಕೂಡಲೇ ಮೈಸೂರಿನ ಚಾಮುಂಡೇಶ್ವರಿಯೇ ಭಾರತೀಯ ವಿದ್ಯಾಭವನದಲ್ಲಿ ಪ್ರತಿಷ್ಠಾಪನೆಯಾದಂತೆ ಕಾಣುತ್ತದೆ ದೇವಿ ವಿಗ್ರಹ. ಅಕ್ಕ ಪಕ್ಕದಲ್ಲಿರುವ ಕಂಚಿನ ಶಾರದೆ ಮತ್ತು ನಟರಾಜ ವಿಗ್ರಹಗಳು ಭಕ್ತಿ ಭಾವ ಮೂಡಿಸುತ್ತವೆ. ಪ್ರತಿ ಎರಡು ದಿನಕ್ಕೊಮೆಯಂತೆ ದೇವಿ ವಿಗ್ರಹದ ಅಲಂಕಾರ ಬದಲಾಯಿಸಲಾಗುವುದು.
Related Articles
Advertisement
ಸೂತ್ರದ ಗೊಂಬೆಗಳಲ್ಲಿ ರಾಮಾಯಣ ಕಂಡು ಪುಳಕಿತರಾದ ನೀವು ಸಲಾಕಿ ಗೊಂಬೆಗಳಲ್ಲಿ ಮೂಡಿದ ನರಕದವಧೆ ನೋಡಿ ಅಚ್ಚರಿಪಡಲಿದ್ದಿರಿ. ಗಣಪತಿ, ಪಾಂಡುರಂಗ, ಪದ್ಮಾವತಿ, ಕೃಷ್ಣ ಹಾಗೂ ಅತಿಸುಂದರಿಯಾದ ಸತ್ಯಭಾಮ, ಪಟ್ಟದ ಗೊಂಬೆಗಳನ್ನು ಕಂಡು ಮೈಸೂರು ದಸರ ಭಾರತೀಯ ವಿದ್ಯಾಭವನದಲ್ಲಿಯೇ ನಡೆಯುತ್ತಿದೆಯೇನೊ ಅಂತ ಅನಿಸಿದರೆ ಆಶರ್ಯವಿಲ್ಲ.
ನವರಾತ್ರಿ ಎಂದರೆ ಮೊದಲು ನೆನಪಾಗುವುದೇ ಗೊಂಬೆಗಳ ಸಾಲು ಸಾಲು. ಪ್ರತೀ ಮನೆಯಲ್ಲೂ ಅಲಂಕಾರವಾಗಿ ಗೊಂಬೆ ಇಡುವುದು ಮತ್ತು ಮಕ್ಕಳೆಲ್ಲಾ ಒಟ್ಟಾಗಿ ಸೇರಿ ಗೊಂಬೆ ಪೂಜೆ ಮಾಡುವುದು ದಸರೆಯ ಪದ್ಧತಿ. ಈ ನಮ್ಮ ಪರಂಪರೆಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಜವಾಬ್ದಾರಿ ಈಗೀನ ಪೀಳಿಗೆ ಮೇಲಿದೆ.ಗಿರೀಜಾ ಲೋಕೇಶ್, ನಟಿ. ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ತಿಳಿಸಿ ಕೊಡುವ ಅಗತ್ಯವಿದೆ. ಸಿಲಿಕಾನ್ ಸಿಟಿಯಲ್ಲಿ ನವರಾತ್ರಿ ಗೊಂಬೆ ಕುರಿಸುವ ಸಂಪ್ರದಾಯವೇ ಮರೆಯಾಗುತ್ತಿದೆ. ಹೀಗಾಗಿ ಭಾರತೀಯ ವಿದ್ಯಾಭವನದಲ್ಲಿ ಕಳೆದ 9 ವರ್ಷಗಳಿಂದ
ವಿವಿಧ ಪರಿಕಲ್ಪನೆಯನ್ನಿಟ್ಟುಕೊಂಡು ಗೊಂಬೆಗಳನ್ನು ಕುಳ್ಳಿರಿಸಲಾಗುತ್ತಿದೆ. ಈ ಬಾರಿ ಚಾಮುಂಡೇಶ್ವರಿ ವಿಗ್ರಹ
ಪ್ರತಿಷ್ಠಾಪಿಸಿರುವುದು ವಿಶೇಷವಾಗಿದೆ.
ಎಚ್.ಎನ್.ಸುರೇಶ್, ಭಾರತೀಯ ವಿದ್ಯಾಭವನ ನಿರ್ದೇಶಕ