Advertisement
2014ರ ನವೆಂಬರ್ 23 ರಂದು ನಿವೃತ್ತ ವಾಯು ಸೇನೆ ಅಧಿಕಾರಿ ಪರ್ವೇಜ್ ಕೋಕರ್ ಅವರ ಮನೆಗೆ ದರೋಡೆಗೆ ಬಂದಿದ್ದ ತಂಡ ಅವರನ್ನು ಕೊಲೆ ಮಾಡಿತ್ತು. ಬೇರೊಂದು ಪ್ರಕರಣದ ವಿಚಾರಣೆ ವೇಳೆ ಹಂತರಕರ ಅಧಿಕಾರಿ ಹತ್ಯೆಯ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.
Related Articles
Advertisement
ಈ ವೇಳೆ ಎಚ್ಚರಗೊಂಡ ಪರ್ವೇಜ್ ಕೋಕರ್ ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ. ಸಿಕ್ಕಿ ಬೀಳುತ್ತೇವೆ ಎಂಬ ಆತಂಕದಿಂದ ದುಷ್ಕರ್ಮಿಗಳು ಫವೇಜ್ ಅವರ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು ಘಟನೆ ನಡೆದ ವೇಳೆ ಮೃತ ವಾಯುಸೇನೆ ಅಧಿಕಾರಿ ಪತ್ನಿ ಮತ್ತೂಂದು ಕೊಠಡಿಯಲ್ಲಿ ಮಲಗಿದ್ದರು.
ಅಲ್ಲದೆ, ಕೃತ್ಯವೆಸಗಲು ಬಂದಿದ್ದ ದುಷ್ಕರ್ಮಿಗಳು ಅವರ ಕೊಠಡಿಯ ಬಾಗಿಲನ್ನು ಲಾಕ್ ಮಾಡಿದ್ದರು. ಹೀಗಾಗಿ ಹೊರಗಿನ ಯಾವುದೇ ಘಟನೆ ಅವರಿಗೆ ಗೊತ್ತಾಗಿರಲಿಲ್ಲ. ತನಿಖೆ ಕೈಗೊಂಡಿದ್ದ ಪೊಲೀಸರು ಮೊದಲಿಗೆ ಅಧಿಕಾರಿಯ ಪತ್ನಿಯ ಮೇಲೆಯೇ ಶಂಕೆ ವ್ಯಕ್ತಪಡಿಸಿದ್ದರು.
ಮೂಲತಃ ಪಂಜಾಬ್‌ನವರಾದ ಮೃತ ಪರ್ವೇಜ್ ಭಾರತೀಯ ವಾಯುಸೇನೆಯಲ್ಲಿ ಡೆಕೋರೇಟೆಡ್ ಅಧಿಕಾರಿಕಾರಿಯಾಗಿ 1968ರಿಂದ 2003ರ ತನಕ 35 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರು. 1997ರಲ್ಲಿ ನಡೆದ ಭಾರತ -ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪರ್ವೇಜ್ ಉನ್ನತ ಹುದ್ದೆಯಲ್ಲಿದ್ದರು.
60 ಕೋಟಿ ಮೌಲ್ಯದ ಆಸ್ತಿ ಪತ್ರ ಕದ್ದಿದ್ದರುಆರೋಪಿಗಳು 2016ರ ಜುಲೈ 20ಕ್ಕೆ ಹುಸ್ಕೂರಿನ ಲಕ್ಷ್ಮೀನಾರಾಣಪುರದಲ್ಲಿರುವ ರಿಯಲ್ ಎಸ್ಟೇಟ್ ಉದ್ಯಮಿ ಜುಬೇರ್ ಅಹ್ಮದ್ ಮನೆಯಲ್ಲಿ ದರೋಡೆ ಮಾಡಿದ್ದರು. ಈ ವೇಳೆ ಬೆಲೆಬಾಳುವ ವಸ್ತುಗಳು ಹಾಗೂ 60 ಕೋಟಿ ಮೌಲ್ಯದ ಭೂ ದಾಖಲೆಗಳನ್ನು ಕದಿದ್ದರು. ಫಾರ್ಮ್ಹೌಸ್‌ಗಳೇ ಟಾರ್ಗೆಟ್!
ಆರೋಪಿಗಳು ಬೆಂಗಳೂರು ಹೊರವಲಯದ ಎಲೆಕ್ಟ್ರಾನಿಕ್ ಸಿಟಿ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಫಾರ್ಮ್ಹೌಸ್ ಮತ್ತು ಬಂಗಲೆಗಳನ್ನೇ ಟಾರ್ಗೆಟ್ ಮಾಡಿಕೊಂಡಿದ್ದರು. ಈ ವರೆಗೆ ಸುಮಾರು 21 ಅಪರಾಧ ಕೃತ್ಯಗಳನ್ನು ನಡೆಸಿರುವ ತಂಡ, ತಮಿಳುನಾಡಿನ ವ್ಯಾಪ್ತಿಯಲ್ಲೂ ಕೃತ್ಯವೆಸಗಿದ್ದಾರೆ. ಆರೋಪಿಗಳು 35 ಲಕ್ಷ ರೂಮೌಲ್ಯದ ಚಿನ್ನಾಭರಣವನ್ನು ಹಟ್ಟಿಕಾ ಗೋಲ್ಡ್ ಕಂಪನಿಯಲ್ಲಿ ಅಡವಿಟ್ಟು 10 ಲಕ್ಷ ಪಡೆದಿದ್ದಾರೆ. ಹಣವನ್ನು ಹಂಚಿಕೊಂಡು ಐಷಾರಾಮಿ ಜೀವನ ನಡೆಸುತ್ತಿದ್ದರು ಎಂದು ತನಿಖಾಧಿಕಾರಿ ತಿಳಿಸಿದರು.