Advertisement
ಕೈ ಸುರಕ್ಷತೆ ಹಾಗೂ ಕೈ ತೊಳೆಯುವುದರಿಂದ ಆಗುವ ವೈದ್ಯಕೀಯ ಅನುಕೂಲಗಳನ್ನು ಮೊದಲು ಜಗತ್ತಿಗೆ ತಿಳಿಸಿದವರು 1847ರ ಹೊತ್ತಿಗೆ ಹಂಗೇರಿಯ ವೈದ್ಯರಾಗಿದ್ದ ಇಗ್ನಾಝ್ ಸೆಮ್ಮೆಲ…. ಇವರು ವಿಯೆನ್ನಾದ ಜನರಲ್ ಆಸ್ವತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡಿದವರು. ಆ ಕಾಲದಲ್ಲಿಯೇ ಅವರು ವೈಜ್ಞಾನಿಕವಾಗಿ ಕೈ ತೊಳೆದುಕೊಳ್ಳುವ ಬಗ್ಗೆ ಜನರಿಗೆ ಮನವರಿಕೆ ಮಾಡಿ ಜಾಗೃತಿ ಉಂಟುಮಾಡಿ¨ªಾರೆ.
ಕೈಯ ಅಸುರಕ್ಷತೆ ಬಗ್ಗೆ ಕಳವಳಗೊಂಡ ವಿಶ್ವಸಂಸ್ಥೆ 2008ರ ಅಕ್ಟೋಬರ್ 15ರಂದು ಸಭೆ ಸೇರಿ ಮಹತ್ವದ ನಿರ್ಧಾರಕ್ಕೆ ಬಂದಿತು. ಅಕ್ಟೋಬರ್ 15ನ್ನು ಅಧಿಕೃತವಾಗಿ ವಿಶ್ವ ಕೈ ತೊಳೆಯುವ ದಿನವನ್ನಾಗಿ ಘೋಷಿಸಲಾಯಿತು. ಆಗ ಸುಮಾರು 70 ದೇಶಗಳು ವಿಶ್ವ ಆರೋಗ್ಯ ಸಂಸ್ಥೆ ವತಿಯಿಂದ ಆ ವರ್ಷದಿಂದಲೇ ಕೈ ಶುಚಿತ್ವದ ಬಗ್ಗೆ ಕಾರ್ಯಕ್ರಮ ಹಾಗೂ ಮಾಹಿತಿ ನೀಡಲು ಆರಂಭಿಸಿದವು. ಈಗ ಬಹುತೇಕ ರಾಷ್ಟ್ರಗಳಲ್ಲಿ ಪ್ರತಿ ವರ್ಷ ಅಕ್ಟೋಬರ್ 15ರಂದು ವಿಶ್ವ ಕೈ ತೊಳೆಯುವ ದಿನಾಚರಣೆ ಮಾಡಲಾಗುತ್ತಿದೆ. ಭಾರತದ ಅನೇಕ ಶಾಲೆಗಳಲ್ಲಿ , ಆಸ್ಪತ್ರೆಗಳಲ್ಲಿ ಅನೇಕ ಕಾರ್ಯಕ್ರಗಳನ್ನು ಮಾಡಲಾಗುತ್ತಿದೆ.
Related Articles
Advertisement
ಕೈತೊಳೆಯುವ ಸರಿಯಾದ ವಿಧಾನ -ಮೊದಲ ಹಂತದಲ್ಲಿ ಮೊದಲಿಗೆ ಎರಡೂ ಕೈಗಳನ್ನೂ ಸುಮಾರು ಅರ್ಧ ಮೊಣಕೈ ವರೆಗೂ ನೀರನ್ನು ತೋಯಿಸಿಕೊಂಡು ಸೋಪು ಅಥವಾ ಸೋಪಿನ ದ್ರಾವಣವನ್ನು ಹಾಕಿಕೊಂಡು ಎರಡೂ ಹಸ್ತಗಳಿಂದ ಚೆನ್ನಾಗಿ ಉಜ್ಜಿ ನೊರೆ ಬರುವಂತೆ ಮಾಡಬೇಕು.
-ಎರಡನೆಯ ಹಂತದಲ್ಲಿ ಬಲ ಹಸ್ತದ ಮುಂಭಾಗದಿಂದ ಎಡ ಹಸ್ತದ ಹಿಂಭಾಗಕ್ಕೆ , ಎಡ ಹಸ್ತ ಮುಂಭಾಗದಿಂದ ಬಳ ಹಸ್ತದ ಹಿಂಭಾಗಕ್ಕೆ ನೊರೆ ಹಚ್ಚಬೇಕು. ಹಾಗೆಯೇ ಬೆರಳುಗಳನ್ನು ಕೆಳಗಿನ ಹಸ್ತದ ಬೆರಳುಗಳ ನಡುವೆ ಓಡಾಡಿಸಿ ಸಂದುಗಳಲ್ಲಿಯೂ ನೊರೆ ತುಂಬಿಕೊಳ್ಳುವ ಹಾಗೆ ಮಾಡಬೇಕು.
-ಮೂರನೆಯ ಹಂತದಲ್ಲಿ ಎರಡೂ ಹಸ್ತಗಳನ್ನು ಒಂದಕ್ಕೊಂದು ತಾಗಿಸಿ ಬೆರಳುಗಳನ್ನು ಒಂದರ ಒಳಗೊಂದು ಬರುವಂತೆ ಸ್ವಲ್ಪ ಒತ್ತಡದಿಂದ ಉಜ್ಜಿಕೊಳ್ಳಬೇಕು.
-ನಾಲ್ಕನೆಯ ಹಂತದಲ್ಲಿ ಎರಡೂ ಹಸ್ತದ ಬೆರಳುಗಳನ್ನು ಕೊಕ್ಕೆಯಂತೆ ಅರ್ಧ ಮಡಚಿ ಒಂದಕ್ಕೊಂದು ಸಿಕ್ಕಿಸಿರುವಂತೆ ಎರಡೂ ಹಸ್ತಗಳನ್ನು ಅಡ್ಡಲಾಗಿ ಉಜ್ಜಿಕೊಳ್ಳಬೇಕು.
-ಐದನೆಯ ಹಂತದಲ್ಲಿ ಎಡ ಹೆಬ್ಬರಳುಗಳನ್ನು ಬಲಗೈಯ ಉಳಿದ ನಾಲ್ಕೂ ಬೆರಳುಗಳು ಸುತ್ತುವರಿಯುವಂತೆ ಹಿಡಿದು ಎಡಮುಖ ಹಾಗೂ ಬಲಮುಖವಾಗಿ ತಿರುಗಿಸಬೇಕು.
-ಆರನೆಯ ಹಂತದಲ್ಲಿ ಐದು ಬೆರಳುಗಳ ತುದಿ ಒಂದೆಡೆ ಬರುವಂತೆ ಮುಚ್ಚಿ ಈ ತುದಿಗಳಿಂದ ಎಡ ಹಸ್ತದ ನಡುಭಾಗದಲ್ಲಿ ಸ್ವಲ್ಪವೇ ಒತ್ತಡದಿಂದ ವೃತ್ತಾಕಾರದಲ್ಲಿ ತಿರುಗಿಸಬೇಕು. ಹಾಗೆಯೇ ಬಲ ಹಸ್ತಕ್ಕೆ ಅನ್ವಯಿಸಿ ಕೊಳ್ಳಬೇಕು. ಎರಡೂ ಕೈಗಳ ಮಣಿ ಕಟ್ಟುಗಳನ್ನು ಉಜ್ಜಿಕೊಳ್ಳಬೇಕು.ಕೊನೆಯದಾಗಿ ಎರಡೂ ಕೈಗಳಿಗೆ ನೀರನ್ನು ಹಾಕಿ ತೊಳೆದುಕೊಳ್ಳಬೇಕು.
ಈ ರೀತಿ ಮಾಡುವುದರಿಂದ ಕೈಯಲ್ಲಿನ ಭಾಗಗಳಿಗೂ ನೀರು ಹಾಗೂ ಸೋಪು ಹೋಗಿ ಕೈ ಶುದ್ಧವಾಗುತ್ತದೆ. ಕೊಳೆ, ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳು ಇಲ್ಲದಾಗುತ್ತವೆ.
ಪ್ರಸ್ತುತ ಕೊರೊನಾ ವೈರಸ್ ಕೂಡ ಒಬ್ಬರ ಕೈಯಿಂದ ಮತ್ತೂಬ್ಬರ ಕೈಗೆ ಸರಾಗವಾಗಿ ಹೋಗುತ್ತದೆ. ಆದ್ದರಿಂದ ಇನ್ನೊಬ್ಬರ ಕೈ ಕುಲುಕಲು ಹೋಗಬಾರದು. ಹಾಗೆಯೇ ಕೈ ತೊಳೆಯದೆ ಆಹಾರ ಸ್ವೀಕಾರ ಮಾಡುವುದರಿಂದ ವೈರಸ್ ಬರುತ್ತಿದೆ. ಇದಕ್ಕಾಗಿ ಕೈಯನ್ನು ಸೋಪಿನಿಂದ ತೊಳೆಯೋಣ. ಕೊರೊನಾ ವೈರಸ್ ಬರದಂತೆ ಜಾಗ್ರತೆ ವಹಿಸಿರಿ. ಬನ್ನಿ ಕೈ ತೊಳೆದುಕೊಳ್ಳೋಣ. -ಡಾ| ಪ್ರಸನ್ನಕುಮಾರ ಐತಾಳ್, ಉಜಿರೆ