Advertisement
ಎಸ್‌ಎಸ್‌ಎಲ್‌ಸಿ ಮುಗಿಯುತ್ತಿದ್ದ ಹಾಗೆ, ಈಗಿನ ಮಕ್ಳು ಬ್ಯಾಗ್ ಬೇಕು, ಕೊಡೆ ಬೇಕು ಅನ್ನೋ ಕಾಲ ಹೋಗಿ ಬಿಟ್ಟಿದೆ. ಈಗ ಶಾಲೆ ಮುಗಿದ್ರೆ ಸಾಕು, ಪಿಯುಸಿಗೆ ಸೇರೋವಾಗ ಮನೆಯಲ್ಲಿ ಮೊಬೈಲ್ ಬೇಕು ಅನ್ನೋ ಹಠ ಹಿಡಿದು ಕೂತುಬಿಡೋ ಜಾಯಮಾನ ಆಗಿ ಬಿಟ್ಟಿದೆ. ಈಗ ಆಧುನಿಕತೆ ಬದಲಾಗ್ತಾ ಸೆಲ್ಫಿ ಅನ್ನೋ ಟ್ರೆಂಡ್‌ಗೆ ವಾಲಿ ಬಿಟ್ಟಿದೆ. ಜನತೆ ಸೆಲ್ಫಿ ಜೊತೆ ಸೇರಿ ಮಾನವೀಯತೆಯನ್ನು ಮರೆತುಬಿಡುತ್ತಿದ್ದಾರೆ ಏನೋ ಅನ್ನಿಸುತ್ತಿದೆ. ದೇಶದ ಉನ್ನತ ಹುದ್ದೆಯಿಂದ ಹಿಡಿದು ಪುಟ್ಟ ಮಕ್ಕಳವರೆಗೂ ಸೆಲ್ಫಿಯದ್ದೇ ಹವಾ. ದಿನದಲ್ಲಿ ಹೆಚ್ಚಿನ ಕಾಲ ಸೆಲ್ಫಿಯಲ್ಲೇ ಮುಳುಗಿ ಹೋಗುತ್ತದೆ.
Related Articles
Advertisement
ಇನ್ನೂ ಮುಂದಿನ ದಿನಗಳಲ್ಲಿ ಮನೆಯಲ್ಲಿ ಪ್ರಾಣ ಹೋಗಿರೋ ವ್ಯಕ್ತಿಯ ಚಿತೆಯ ಮುಂದೆ ಸೆಲ್ಫಿ ತೆಗೆದು ಜಾಲತಾಣಗಳಲ್ಲಿ ಅದಕ್ಕೆ ಸರಿದೂಗೋ ಕಮೆಂಟ್‌ಗಳನ್ನು ಹಾಕಿಟ್ಟು ಎಷ್ಟು ಲೈಕ್ ಬರುತ್ತವೆ ಅಂತ ಕಾದು ನೋಡೋ ಪರಿಸ್ಥಿತಿ ಬರಬಹುದು ಅನ್ನಿಸುತ್ತೆ.
ಸೆಲ್ಫಿ ಕ್ಲಿಕ್ಕಿಸುವಾಗ ಮೊಬೈಲನ್ನು ಕೈಯಲ್ಲಿ ತಮಗೆ ಬೇಕಾದ ರೀತಿಯಲ್ಲಿ ಹಿಡಿಯಲು ಕಷ್ಟ ಅನ್ನೋ ಚಿಂತೆಗೂ ಸೆಲ್ಫಿ ಸ್ಟಿಕ್‌ಗಳು ಬಂದಿವೆ. ಭೂಮಿ ಮೇಲೆ ಸೆಲ್ಫಿ ಹುಚ್ಚು ಹಿಡಿಸಿದಂತೆ ಇನ್ನು ಅಂತರಿಕ್ಷಯಾನದಲ್ಲಿಯೂ ಸೆಲ್ಫಿ ಕ್ಲಿಕ್ಕಿಸಿ ಬರುವುದು ಸಾಮಾನ್ಯ ಆಗಿ ಬಿಟ್ಟಿದೆ. ಮನುಷ್ಯ ಸೆಲ್ಫಿ ತೆಗೆದ್ರೆ ಆಶ್ಚರ್ಯ ಪಡಬೇಕಾಗಿಲ್ಲ, ಆದರೆ ಅಮೆರಿಕದಲ್ಲಿ ನಾಸಾ ಮಂಗಳಗ್ರಹಕ್ಕೆ ಕಳಿಸಿದಂಥ ಕ್ಯೂರಿಯಾಸಿಟಿ ರೋವರ್ ಅಲ್ಲಿ ಅಡ್ಡಾಡೋ ಹೊತ್ತಿಗೆ ತನ್ನ ಸೆಲ್ಫಿ ತೆಗೆದು ಕಳಿಸಿಕೊಟ್ಟಿತ್ತಂತೆ!ಸ್ವತಃ ಛಾಯಾಗ್ರಾಹಕನೇ ಸೆರೆಹಿಡಿದ ತನ್ನ ಸ್ವಂತ ಚಿತ್ರದ ಹೆಸರೇ ಸೆಲ್ಫಿ. ಛಾಯಾಗ್ರಹಣದ ಬೆಳವಣಿಗೆ ಆಗ್ತಾ ಇದ್ದ ಹಾಗೆ ಸೆಲ್ಫಿ ಎಂಬ ಹೆಸರು ಪ್ರಚಲಿತ ಆಗಿದ್ದು ಮಾತ್ರ ಈ ಶತಮಾನದ ಪ್ರಾರಂಭದಲ್ಲಿ ಎನ್ನಬಹುದು.
ಮೊದಲ ಸೆಲ್ಫಿಯು ಕ್ಲಿಕ್ ಆಗಿದ್ದು 1839ರಲ್ಲಿ ಎಂದು ಹೇಳಲಾಗುತ್ತದೆ.ಈ ಸೆಲ್ಫಿಯಿಂದ ಸಮಾಜ ಎಷ್ಟು ಹದಗೆಟ್ಟಿದೆ ಎಂದರೆ ಕ್ಲಿಕ್ ಮಾಡಿದ ಸೆಲ್ಫಿಯಲ್ಲಿ “ತಾನು ಚೆನ್ನಾಗಿ ಕಾಣಿಸುತ್ತಿಲ್ಲ, ನನಗೆ ಚಿಕಿತ್ಸೆ ನೀಡಿ’ ಎಂದು ಡಾಕ್ಟರ್ ಬಳಿ ಓಡುವವರೂ ಇದ್ದಾರೆ. ಒಳ್ಳೆಯ ಸೆಲ್ಫಿ ಬರಬೇಕೆಂದು ಅದಕ್ಕೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂಬ ವರದಿಯೂ ಸಿಗುತ್ತಿದೆ. ಈ ಸೆಲ್ಫಿ ಮನುಷ್ಯನ ಭಾವನೆಗಳಿಗೆ ಸವಾಲಾಗಿ ಮಾನಸಿಕ ತೊಂದರೆಗಳಿಗೆ ದಾರಿಯಾಗುತ್ತಿದೆ ಎಂದು ಹಲವು ತಜ್ಞರು ಹೇಳಿಕೊಂಡಿದ್ದಾರೆ.
ಈ ಸೆಲ್ಫಿ ಜೊತೆಗೆ “ವೆಲ್ಫಿ’ ಎಂಬುದು ಬಂದಿದೆ. ಪ್ರಸಿದ್ಧ ಸಿನೆಮಾ ಡೈಲಾಗ್‌ಗಳನ್ನು ಹೇಳುತ್ತ ರೆಕಾರ್ಡ್ ಮಾಡಿ ವಿಶ್ವವ್ಯಾಪಿ ಜಾಲತಾಣದಲ್ಲಿ ಹರಿದಾಡುವ ವಿಡಿಯೋಗಳು ಸಹ ಸೆಲ್ಫಿಗಳೇ ಆಗಿವೆ. “ಡಬ್ ಸ್ಮ್ಯಾಶ್’ ಎನ್ನುವ ಆ್ಯಪ್‌ಗೆ ಐದು ಕೋಟಿಗಿಂತ ಹೆಚ್ಚು ಬಳಕೆದಾರರು ಇದ್ದಾರೆ ಎಂಬುದು ತಿಳಿಯಬಹುದು.
ಈ ಸೆಲ್ಫಿ ಕ್ರೇಜ್‌ನಲ್ಲಿ ಇನ್ನೇನೆಲ್ಲ ಬರುತ್ತದೆಯೋ ಕಾದು ನೋಡಬೇಕಾಗಿದೆ.
– ದೀಕ್ಷಾ ಬಿ.,ಎಸ್‌ಡಿಎಂ ಕಾಲೇಜು, ಉಜಿರೆ