Advertisement

ಅಂಕಣಕಾರ ಎಸ್. ಎಫ್ .ಯೋಗಪ್ಪನವರ್ ನಿಧನಕ್ಕೆ ಸಚಿವ ಅರವಿಂದ ಲಿಂಬಾವಳಿ ಸಂತಾಪ

05:15 PM May 04, 2021 | Team Udayavani |

ಬೆಂಗಳೂರು: ಕನ್ನಡದ ಖ್ಯಾತ ಬರಹಗಾರ, ಅಂಕಣಕಾರ ಎಸ್. ಎಫ್ .ಯೋಗಪ್ಪನವರ್ ನಿಧನಕ್ಕೆ ಅರಣ್ಯ, ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

Advertisement

ಮೂಲತ: ಬಾಗಲಕೋಟೆ ಜಿಲ್ಲೆಯವರಾದ ಯೋಗಪ್ಪನವರ್ ಲಂಕೇಶ್ ಪತ್ರಿಕೆಯಲ್ಲಿ ಅಂಕಣಕಾರರಾಗಿ ಪ್ರಖ್ಯಾತರಾದರು. ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ದಕ್ಷ ಅಧಿಕಾರಿ ಎಂದು ಹೆಸರು ಮಾಡಿದವರು. ಸರ್ಕಾರಿ ವೃತ್ತಿಯ ಜೊತೆಗೆ ಸಾಹಿತ್ಯದ ಒಲವು ಬೆಳೆಸಿಕೊಂಡ ಯೋಗಪ್ಪನವರ್ ತಮ್ಮ ಸೃಜನಶೀಲ ಬರವಣಿಗೆಯ ಮೂಲಕ ಸಾಹಿತ್ಯಾಸಕ್ತರ ಹೃದಯ ಗೆದ್ದವರು.

ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ, ಪ್ರೀತಿಯೆಂಬುದು ಚಂದ್ರನ ದಯೆ, ಶೋಧ ಮುಂತಾದ ಕಾದಂಬರಿಗಳು, ಆರಾಮ ಕುರ್ಚಿ ಮತ್ತು ಇತರ ಕಥೆಗಳು  ಕಥಾಸಂಕಲನ, ಮಾಯಾ ಕನ್ನಡಿ ಮುಂತಾದ ಅನುವಾದಗಳ ಮೂಲಕ ಯೋಗಪ್ಪನವರ್ ಕನ್ನಡ ಸಾಹಿತ್ಯಲೋಕಕ್ಕೆ ಅಮೂಲ್ಯ ಕೊಡುಗೆ ಕೊಟ್ಟಿದ್ದಾರೆ.

ಕರೋನಾ ಕರುಣೆ ಇಲ್ಲದೆ ಕರೆದುಕೊಂಡ ಸಾಂಸ್ಕೃತಿಕ ಲೋಕದ ಮತ್ತೊಂದು ಸಹೃದಯಿ ಜೀವ ನಮ್ಮನ್ನು ಆಗಲಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ, ಅವರ ಕುಟುಂಬ ವರ್ಗಕ್ಕೆ ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಚಿವ ಲಿಂಬಾವಳಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next