Advertisement

ಹೂವಿನಿಂದ ಹೂವಿಗೆ ಹಾರುವ ಪಾತರಗಿತ್ತಿ ಸೊಬಗು

09:13 AM Jul 19, 2019 | sudhir |

ಉಡುಪಿ: ಬೇಸಗೆಯಲ್ಲಿ ಕಣ್ಮರೆಯಾದ ಚಿಟ್ಟೆಗಳು ಇದೀಗ ಮಳೆಗಾಲ ಪ್ರಾರಂಭವಾಗುತ್ತಿದಂತೆ ಮನೆಯಂಗಳಕ್ಕೆ ಲಗ್ಗೆಯಿಟ್ಟಿವೆ. ಈ ಬಾರಿ ಗ್ರಾಮೀಣ ಪ್ರದೇಶದ‌ ಗೆದ್ದೆ, ಗಿಡಗಳಿದ್ದಲ್ಲಿ ಎಲ್ಲೆಲ್ಲೆಯೂ ಚಿಟ್ಟೆಗಳದ್ದೇ ಕಾರುಬಾರು.
ಸಾಮಾನ್ಯವಾಗಿ ಚಿಟ್ಟೆಗಳು ಬೆಳಗ್ಗೆಯಿಂದ ಮಧ್ಯಾಹ್ನ ತನಕ ಹಾರಾಡುತ್ತವೆ.

Advertisement

ಸೂರ್ಯನ ತಾಪ ಹೆಚ್ಚಾದಂತೆ ಮರದ ಪೊಟರೆ, ತಂಪಾಗಿರುವ ಜಾಗವನ್ನು ಆಶ್ರಯಿಸುತ್ತವೆ. ಇವುಗಳ ಜೀವಿತಾವಧಿ ಬಹಳ ಕಡಿಮೆ. ಒಂದು ವಾರದಿಂದ ಒಂದು ವರ್ಷದ ತನಕ ಮಾತ್ರ ಇವುಗಳು ಬದುಕಬಲ್ಲವು. ಚಿಟ್ಟೆಗಳು ವರ್ಷದಲ್ಲಿ ಒಂದಕ್ಕಿಂತಲೂ ಹೆಚ್ಚು ಬಾರಿ ಮೊಟ್ಟೆಯಿಡುತ್ತವೆ. ಆದರೆ ಚಳಿಗಾಲದಲ್ಲಿ ಮೊಟ್ಟೆ ಮಾತ್ರ ಉಳಿದುಕೊಳ್ಳುತ್ತದೆ. ಚಿಟ್ಟೆಗಳ ರಕ್ತ ತಂಪಾಗಿದ್ದು, ವಾತಾವರಣಕ್ಕೆ ತಕ್ಕಂತೆ ದೇಹದ ಉಷ್ಣಾಂಶ ಬದಲಾಗುತ್ತದೆ.

ಚಿಟ್ಟೆ ಕಣ್ಣುಗಳು ರಕ್ಷಣಾ ಕವಚ
ಚಿಟ್ಟೆಯ ರೆಕ್ಕೆಯ ಮೇಲೆ ಎರಡು ಉಬ್ಬಿದ ಕಣ್ಣುಗಳು ಇರುತ್ತದೆ. ಅದು ಶತ್ರುಗಳಿಂದ ರಕ್ಷಿಸಲು ಈ ಕಣ್ಣುಗಳು ಸಹಾಯಕ. ಚಿಟ್ಟೆಗಳು ತಮ್ಮ ದೃಷ್ಟಿಯಿಂದ ನೇರಳಾತೀತ ಕಿರಣಗಳನ್ನು ಕೂಡ ಗುರುತಿಸಬಲ್ಲವು.
ಚಿಟ್ಟೆಗಳ ಪ್ರಾಥಮಿಕ ಆಹಾರ ಹೂವಿನ ಮಕರಂದವಾದರೂ ಕೆಲವೊಂದು ಚಿಟ್ಟೆಗಳು ಹೂವಿನ ಪರಾಗ, ಸಸ್ಯ ರಸ, ಕೊಳೆತ ಹಣ್ಣುಗಳು, ಗೊಬ್ಬರ, ಹಳಸಿದ ಮಾಂಸದ ರಸವನ್ನು ಚಿಟ್ಟೆಗಳು ಹೀರುತ್ತದೆ. ಪಠ್ಯಪುಸಕ್ತದಲ್ಲಿ ಚಿಟ್ಟೆ ಪಾಠ ಬ್ರಿಟನ್‌ ಅಮೇರಿಕ, ರಷ್ಯ, ಚೀನಾದಂತ ಮುಂದುವರಿದ ದೇಶಗಳಲ್ಲಿ ಚಿಟ್ಟೆಯ ಬಗ್ಗೆ ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗಿದೆ. ಮಕ್ಕಳಿಗೆ ಚಿಟ್ಟೆಗಳ ಕುರಿತು ವಿಶೇಷವಾಗಿ ಬೋಧಿಸಲಾಗುತ್ತಿದೆ. ಪರಿಸರ ಪೂರಕ ಜೀವಿಯಾದ ಚಿಟ್ಟೆಯನ್ನು ಪರಿಸರ ತಜ್ಞರು ಹಾರಾಡುವ‌ ಆಭರಣಗಳು ಎಂದು ಬಣ್ಣಿಸಿದ್ದಾರೆ.

ಪರಿಸರ ಸಮತೋಲನಕ್ಕೆ ಚಿಟ್ಟೆ ಅಗತ್ಯ
ಪರಾಗ ಸ್ಪರ್ಶ ಪ್ರಕ್ರಿಯೆಯಲ್ಲಿ ಚಿಟ್ಟೆಗಳ ಪಾತ್ರ ದೊಡ್ಡದು. ಪರಿಸರ ಸಮತೋಲನಕ್ಕೆ ಚಿಟ್ಟೆಗಳ ಕಲರವ ಇರಲೇಬೇಕು. ಮನೆಯಂಗಳದಲ್ಲಿ ಕಳೆಗಿಡಗಳಿದ್ದಲ್ಲಿ ಚಿಟ್ಟೆಗಳಿರುತ್ತವೆ. ಮಳೆ ಬಂದ ಆರಂಭದಲ್ಲಿ ಕಳೆಗಿಡಗಳು ಹುಟ್ಟುತ್ತದೆ, ಇದು ಚಿಟ್ಟೆಗಳು ಮೊಟ್ಟೆ ಇಡುವ ಸಮಯ. ಈ ವೇಳೆ ಕಳೆಗಿಡಗಳ ನಾಶ ಮಾಡಿದಲ್ಲಿ ಸಾಕಷ್ಟು ಚಿಟ್ಟೆಗಳ ಸಂತತಿ ನಾಶವಾಗುತ್ತಿದೆ.
-ಎನ್‌.ಪೊಲ್ಯ, ಚಿಟ್ಟೆ ಅಧ್ಯಯನಕಾರ ಕಾಪು

ಮಲಬಾರ್‌ ಬ್ಯಾಂಡೆಡ್‌ ಪಿಕಾಕ್‌
ಉಡುಪಿ ಜಿಲ್ಲೆಯ ಮಲಬಾರ್‌ ಬ್ಯಾಂಡೆಡ್‌ ಪಿಕಾಕ್‌ ಚಿಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತವೆ. ಚಿಟ್ಟೆ ಪ್ರಭೇದಗಳಲ್ಲಿಯೇ ಅತ್ಯಂತ ಸುಂದರಿ ಎಂದು ಎನಿಸಿಕೊಂಡಿದೆ. ಅತ್ಯಂತ ಆಕರ್ಷಕ ಬಣ್ಣಗಳನ್ನು ಹೊಂದಿರುವ ಈ ಚಿಟ್ಟೆಯು ಪಶ್ಚಿಮಘಟ್ಟ (ದಕ್ಷಿಣ ಗೋವಾದಿಂದ ಉತ್ತರ ಕೇರಳದವರೆಗೆ) ಗಳಲ್ಲಿ ಮಾತ್ರ ಕಾಣ ಸಿಗುತ್ತದೆ. ಈ ಚಿಟ್ಟೆಯನ್ನು ಕನ್ನಡದಲ್ಲಿ “ಮಲೆ ನವಿಲು’ ಎನ್ನುವ ಹೆಸರಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next