Advertisement

ರ್‍ಯಾಂಬೋ 2ಗಾಗಿ ಕಲರ್‌ಫ‌ುಲ್‌ ಹಾಡು

09:00 PM Mar 14, 2018 | |

ಶರಣ್‌ ಅಭಿನಯದ “ರ್‍ಯಾಂಬೋ 2′ ಈ ತಿಂಗಳ ಕೊನೆಯ ಹೊತ್ತಿಗೆ ಬಿಡುಗಡೆಯಾಗುವ ಸಾಧ್ಯತೆ ಇದೆ. ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳನ್ನು ಮುಗಿಸಿ, ಚಿತ್ರವನ್ನು ಸೆನ್ಸಾರ್‌ ಮಂಡಳಿಗೆ ತೋರಿಸುವ ಧಾವಂತದಲ್ಲಿರುವ ಚಿತ್ರತಂಡವು, ಈ ಮಧ್ಯೆ ಸದ್ದಿಲ್ಲದೆ ಇನ್ನೋವೇಟೀವ್‌ ಫಿಲ್ಮ್ ಸಿಟಿಯಲ್ಲಿ ಒಂದು ಹಾಡನ್ನು ಚಿತ್ರತಂಡದವರು ಚಿತ್ರೀಕರಿಸಿ ಮುಗಿಸಿದ್ದಾರೆ.

Advertisement

ವಿಶೇಷವೆಂದರೆ, ಈ ಚಿತ್ರದಲ್ಲಿ ಶರಣ್‌ ಜೊತೆಗೆ ಐವರು ನಾಯಕಿಯರು ಹೆಜ್ಜೆ ಹಾಕಿದ್ದಾರೆ. ಶರಣ್‌ ಜೊತೆಗೆ ಈ ಹಿಂದಿನ ಕೆಲವು ಚಿತ್ರಗಳಲ್ಲಿ ನಟಿಸಿರುವ ಶ್ರುತಿ ಹರಿಹರನ್‌, ಶುಭಾ ಪೂಂಜ, ಭಾವನಾ ರಾವ್‌, ಸಂಚಿತಾ ಪಡುಕೋಣೆ ಮತ್ತು ಮಯೂರಿ, “ರ್‍ಯಾಂಬೋ 2’ಗಾಗಿ ಹೆಜ್ಜೆ ಹಾಕಿದ್ದಾರೆ. ಮದುವೆಯಾಗದ ನಾಯಕ ಹುಡುಗಿಯ ಹುಡುಕಾಟದಲ್ಲಿ ಹಾಡುವ “ಎಲ್ಲಿ ಕಾಣೆ ಎಲ್ಲಿ ಕಾಣೆ …’ ಎಂಬ ಹಾಡಿಗೆ ಮುರಳಿ ಮಾಸ್ಟರ್‌ ನೃತ್ಯ ಸಂಯೋಜನೆ ಮಾಡಿದ್ದಾರೆ.

ಶರಣ್‌ ಅವರ ಲಡ್ಡು ಸಿನಿಮಾ ಬ್ಯಾನರ್‌ನಡಿ ಈ “ರ್‍ಯಾಂಬೋ 2′ ಚಿತ್ರವು ನಿರ್ಮಾಣವಾಗುತ್ತಿದ್ದು, ಚಿತ್ರದ ನಿರ್ಮಾಣದಲ್ಲಿ ಅಟ್ಲಾಂಟ ನಾಗೇಂದ್ರ ಹಾಗೂ ಚಿತ್ರಕ್ಕೆ ಕೆಲಸ ಮಾಡುವ ತಂತ್ರಜ್ಞರು ಕೈ ಜೋಡಿಸಿದ್ದಾರೆ.  ಈ ಹಿಂದೆ “ದಿಲ್‌ವಾಲ’ ಚಿತ್ರ ಮಾಡಿದ್ದ ಅನಿಲ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶರಣ್‌ಗೆ ನಾಯಕಿಯಾಗಿ ಆಶಿಕಾ ನಟಿಸಿದ್ದಾರೆ. ಚಿತ್ರದಲ್ಲಿ ಚಿಕ್ಕಣ್ಣ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next