Advertisement

ಕಲರ್‌ಫ‌ುಲ್‌ ನವೆಂಬರ್‌

11:06 AM Oct 30, 2018 | Team Udayavani |

ಒಂದೆರಡು ವಾರಗಳಿಂದ ಕನ್ನಡ ಚಿತ್ರರಂಗದಲ್ಲಿ ವಾರ ವಾರ ಬಿಡುಗಡೆಯಾಗುವ ಸಿನಿಮಾಗಳ ಸಂಖ್ಯೆಯಲ್ಲಿ ಇಳಿಕೆಯಾಗಿತ್ತು. ಸಾಮಾನ್ಯವಾಗಿ ವಾರಕ್ಕೆ ಐದಾರು ಸಿನಿಮಾಗಳು ನಾ ಮುಂದು ತಾ ಮುಂದು ಎಂಬಂತೆ ಬಿಡುಗಡೆಯಾಗುವ ಮೂಲಕ ಪ್ರೇಕ್ಷಕನಿಗೆ ಯಾವ ಸಿನಿಮಾ ನೋಡೋದು, ಯಾವ ಸಿನಿಮಾ ಬಿಡೋದು ಎಂಬ ಗೊಂದಲ ಸೃಷ್ಟಿಸುತ್ತಿದ್ದವು. ಆದರೆ, ಒಂದೆರಡು ವಾರಗಳಿಂದ ಸಿನಿಮಾ ಬಿಡುಗಡೆಯ ಸಂಖ್ಯೆ ಕಡಿಮೆಯಾಗಿವೆ.

Advertisement

ಅದಕ್ಕೆ ಕಾರಣ “ದಿ ವಿಲನ್‌’ ಚಿತ್ರ. “ದಿ ವಿಲನ್‌’ ಎದುರು ಬಿಡುಗಡೆ ಮಾಡಿ ರಿಸ್ಕ್ ಹಾಕಿಕೊಳ್ಳೋದು ಬೇಡ ಎಂಬ ಕಾರಣ ಒಂದಾದರೆ, ಥಿಯೇಟರ್‌ ಸಮಸ್ಯೆ ಇನ್ನೊಂದು ಕಡೆ. ಈ ಕಾರಣದಿಂದ ಸಿನಿಮಾಗಳ ಬಿಡುಗಡೆಯ ಸಂಖ್ಯೆಯಲ್ಲಿ ಇಳಿಮುಖವಾಗಿತ್ತು. ಆದರೆ, ಈ ವಾರ ಮತ್ತೆ ಬಿಡುಗಡೆಯ ಭರಾಟೆ ಜೋರಾಗಿದೆ. ಹೌದು, ಈ ವಾರ ಬರೋಬ್ಬರಿ 6 ಚಿತ್ರಗಳು ತಮ್ಮ ಬಿಡುಗಡೆಯನ್ನು ಘೋಷಿಸಿಕೊಂಡಿವೆ.

ಈ ಮೂಲಕ ಮತ್ತೆ ಗಾಂಧಿನಗರ ರಂಗೇರಲಿದೆ. ಶರಣ್‌ ನಾಯಕರಾಗಿರುವ “ವಿಕ್ಟರಿ-2′, ಶುಭಾ ಪೂಂಜಾ, ಪೂಜಾಗಾಂಧಿ ನಟಿಸಿರುವ “ಶ್ರೀ ಹಾಸನಾಂಬ ಮಹಿಮೆ’, “ಕನ್ನಡ ದೇಶದೊಳ್‌’, “ಅಮ್ಮಚ್ಚಿಯೆಂಬ ನೆನಪು’, “ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ’ ಹಾಗೂ “ಜೀವನ ಯಜ್ಞ” ಚಿತ್ರಗಳು ಈ ವಾರ ತೆರೆಕಾಣುತ್ತಿವೆ.  ಇಲ್ಲಿ ನೀವು ಸೂಕ್ಷ್ಮವಾಗಿ ಗಮನಿಸಬೇಕಾದ ಒಂದು ಅಂಶವೆಂದರೆ ಆರು ಚಿತ್ರಗಳು ಬೇರೆ ಬೇರೆ ಜಾನರ್‌ಗೆ ಸೇರಿರುವುದು.  

“ವಿಕ್ಟರಿ-2′ ಕಾಮಿಡಿಯಾದರೆ, “ಶ್ರೀ ಹಾಸನಾಂಬ ಮಹಿಮೆ’ ಭಕ್ತಪ್ರಧಾನ ಚಿತ್ರ. ಇನ್ನು “ಕನ್ನಡ ದೇಶದೊಳ್‌’ ಕನ್ನಡದ ಸಂಸ್ಕೃತಿಯ ಬಗ್ಗೆಯಾದರೆ, “ಅಮ್ಮಚ್ಚಿಯೆಂಬ ನೆನಪು’ ಕಾದಂಬರಿಯಾಧರಿತ ಚಿತ್ರ. “ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ’ ಒಂದು ಲವ್‌ಸ್ಟೋರಿಯಾದರೆ, “ಜೀವನ ಯಜ°’ ಹೊಸ ಬಗೆಯ ಕಮರ್ಷಿಯಲ್‌ ಸಿನಿಮಾ. ಹೀಗೆ ಒಂದೇ ವಾರದಲ್ಲಿ ಭಿನ್ನ ಜಾನರ್‌ನ ಸಿನಿಮಾಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಪ್ರೇಕ್ಷಕರಿಗೆ ಸಿಗುತ್ತಿರುವುದು ಸುಳ್ಳಲ್ಲ. 

ಇನ್ನು “ವಿಕ್ಟರಿ-2′ ಬಗ್ಗೆ ಹೇಳುವುದಾದರೆ, ತರುಣ್‌ ಟಾಕೀಸ್‌ ಲಾಂಛನದಲ್ಲಿ ಮಾನಸ ತರುಣ್‌ ಮತ್ತು ತರುಣ್‌ ಶಿವಪ್ಪ ನಿರ್ಮಿಸಿದ್ದಾರೆ. ಹರಿ ಸಂತೋಷ್‌ ನಿರ್ದೇಶ‌ನದ ಈ ಚಿತ್ರಕ್ಕೆ ತರುಣ್‌ ಕಿಶೋರ್‌ ಸುಧೀರ್‌ ಕಥೆ, ಚಿತ್ರಕಥೆ ಬರೆದಿದ್ದಾರೆ. ಗುರು ಪ್ರಶಾಂತ್‌ ರೈ ಛಾಯಾಗ್ರಹಣ, ಅರ್ಜುನ್‌ ಜನ್ಯಾ ಸಂಗೀತ ನಿರ್ದೇಶನ, ಪ್ರಕಾಶ್‌ ಸಂಕಲನ, ವಿಕ್ರಂ ಸಾಹಸ ನಿರ್ದೇಶನ, ಮೋಹನ್‌ ಬಿ ಕೆರೆ ಕಲಾ ನಿರ್ದೇಶನವಿದೆ.

Advertisement

ಚಿತ್ರದಲ್ಲಿ  ಶರಣ್‌, ಅಪೂರ್ವ, ಅಸ್ಮಿತಾ ಸೂದ್‌, ರವಿಶಂಕರ್‌, ಅವಿನಾಶ್‌, ಸಾಧುಕೋಕಿಲ, ಅರಸು, ನಾಜಿರ್‌, ತಬಲಾನಾಣಿ, ಸುಂದರ್‌, ಮಂಜುನಾಥ್‌ ಹೆಗಡೆ, ಮಿಮಿಕ್ರಿ ದಯಾನಂದ್‌, ರಾಜಶೇಖರ್‌, ಕೀರ್ತಿರಾಜ್‌, ಕುರಿ ಪ್ರತಾಪ್‌, ಲಹರಿ ವೇಲು, ಮಂಜುನಾಥ್‌, ಎಂ.ಎನ್‌.ಲಕ್ಷ್ಮೀದೇವಮ್ಮ ನಟಿಸಿದ್ದಾರೆ. “ಕನ್ನಡ ದೇಶದೊಳ್‌’ ಚಿತ್ರವನ್ನು  ಪ್ರಕಾಶ್‌.ಆರ್‌, ವಿನೋದ್‌ ಕುಮಾರ್‌, ವೆಂಕಟೇಶ್‌, ಯೋಗಾನಂದ್‌ ಆರ್‌ ಹಾಗೂ ವಿಶ್ವನಾಥ್‌.ಬಿ ನಿರ್ಮಿಸಿದ್ದು, ಅಭಿರಾಮ್‌ ಕಂಠೀರವ ನಿರ್ದೇಶಿಸಿದ್ದಾರೆ.

ಈ ಚಿತ್ರದ ತಾರಾಬಳಗದಲ್ಲಿ ಸುಚೇಂದ್ರ ಪ್ರಸಾದ್‌, ಟೆನ್ನಿಸ್‌ ಕೃಷ್ಣ, ರಾಕ್‌ಲೈನ್‌ ಸುಧಾಕರ್‌, ರೇಖಾದಾಸ್‌, ಬಿರಾದಾರ್‌, ತಾರಕ್‌ ಪೊನ್ನಪ್ಪ ಮುಂತಾದವರಿದ್ದಾರೆ. ಜೇನ್‌ ಮತ್ತು ಬ್ರಾಡ್‌ ಎಂಬ ವಿದೇಶಿ ಕಲಾವಿದರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.  “ಅಮ್ಮಚಿಯೆಂಬ ನೆನಪು’ ಚಿತ್ರವನ್ನು ಪ್ರಕಾಶ್‌ ಪಿ ಶೆಟ್ಟಿ, ಗೀತಾ ಸುರತ್ಕಲ್‌, ವಂದನಾ ಇನಾಂದಾರ್‌, ಗೌರಮ್ಮ,  ಕಲಾಕದಂಬ ಆರ್ಟ್‌ ಸೆಂಟರ್‌ ಅವರು ನಿರ್ಮಿಸಿದರ್ಧು, ಚಂಪಾ ಶೆಟ್ಟಿ ನಿರ್ದೇಶನವಿದೆ.

ವೈದೇಹಿ ಅವರ ಕಥೆ, ಸಾಹಿತ್ಯ ಹಾಗೂ ಸಂಭಾಷಣೆಯಿರುವ ಈ ಚಿತ್ರದಲ್ಲಿ ರಾಜ್‌ ಬಿ ಶೆಟ್ಟಿ, ವೈಜಯಂತಿ ಅಡಿಗ, ಡಾ.ರಾಧಾಕೃಷ್ಣ ಉರಾಲ್‌, ದಿಯಾ ಪಲಕಲ್‌, ದೀಪಿಕಾ ಪಿ ಆರಾಧ್ಯ, ಶೃಂಗೇರಿ ರಾಮಣ್ಣ ಸೇರಿದಂತೆ ಅನೇಕರು ನಟಿಸಿದ್ದಾರೆ. “ಪ್ರೀತಿ ಕೇಳಿ ಸ್ನೇಹ ಕಳೆದುಕೊಳ್ಳಬೇಡಿ’ ಚಿತ್ರ ಕೂಡಾ ಈ ವಾರ ತೆರೆಕಾಣುತ್ತಿದ್ದು, ದಿನೇಶ್‌ ಬಾಬು ಈ ಚಿತ್ರದ ನಿರ್ದೇಶಕರು. ಚಿತ್ರಕ್ಕೆ ಹಂಸಲೇಖ ಸಾಹಿತ್ಯ, ನಂದಿತಾ ಸಂಗೀತ, ಕುಮಾರ್‌ಕೋಟಿಕೊಪ್ಪ ಸಂಕಲನವಿದೆ.

ತಾರಾಗಣದಲ್ಲಿ ರಾಜ್‌, ಚೈತ್ರಾ, ಬಿರಾದಾರ್‌, ದರ್ಶನ್‌, ದೀಪಾ, ಸಂಗೀತಾ, ಮನ್‌ದೀಪ್‌ ರಾಯ್‌ ದ್ದಾರೆ. ಪುರುಷೋತ್ತಮ್‌ ನಿರ್ದೇಶನದ “ಶ್ರೀಹಾಸನಾಂಬ ಮಹಿಮೆ’ ಒಂದು ಭಕ್ತಿಪ್ರಧಾನ ಚಿತ್ರವಾಗಿದ್ದು, ಪೂಜಾಗಾಂಧಿ, ಶುಭಾ ಪೂಂಜಾ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಹಾಸನದ ಹಾಸನಾಂಬೆಯ ಪವಾಡ, ಮಹಿಮೆಯನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಚಿತ್ರ ನವೆಂಬರ್‌ 1 ರಂದು ತೆರೆಕಾಣುತ್ತಿದೆ. ಇದಲ್ಲದೇ, “ಜೀವನ ಯಜ್ಞ’ ಚಿತ್ರವೂ ಬಿಡುಗಡೆಯಾಗುತ್ತಿದ್ದು, ಶಿವು ಸರಳೇಬೆಟ್ಟು ಈ ಚಿತ್ರದ ನಿರ್ದೇಶಕರು. 

Advertisement

Udayavani is now on Telegram. Click here to join our channel and stay updated with the latest news.

Next