Advertisement

ಕಲರ್‌ಫ‌ುಲ್‌ ಚಿಟ್ಟೆಯ ಕಲರ್‌ ಕಲರ್‌ ಹಾಡುಗಳು

07:23 PM Jun 01, 2018 | |

“ಜನರಿಗೂ ಈ ಕಲರ್‌ಫ‌ುಲ್‌ “ಚಿಟ್ಟೆ’ ಮೇಲೆ ಕ್ರಶ್‌ ಆಗಲಿ…’
– ಹೀಗೆ ನಗುಮೊಗದಲ್ಲೆ ಹೇಳುತ್ತಾ ಹೋದರು ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ. ಅವರು ಹೇಳಿಕೊಂಡಿದ್ದು “ಚಿಟ್ಟೆ’ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ. ಅಂದಹಾಗೆ, ಹಂಸಲೇಖ ಅವರಿಗೆ ಆಡಿಯೋ ಕಂಪೆನಿಯೊಂದನ್ನು ಆರಂಭಿಸಬೇಕು ಎಂಬ ಕನಸು ಮಗನ ಸ್ಟಿಂಗ್ಸ್‌ ಕಂಪೆನಿ ಮೂಲಕ ಈಡೇರಿದೆ. 

Advertisement

“ಚಿಟ್ಟೆ’ ಚಿತ್ರದ ಹಾಡುಗಳನ್ನು ಹೊರತಂದ ಹಂಸಲೇಖ, “ನಿರ್ದೇಶಕ ಪ್ರಸನ್ನ ಒಳ್ಳೆಯ ಬರಹಗಾರ. ಈ ಚಿತ್ರ ಅವರಿಗೆ ಗೆಲುವು ತಂದುಕೊಡಬೇಕು. ಇಲ್ಲಿರುವ ಹಾಡುಗಳಲ್ಲಿ ಒಂದು ರಿದಂ ಇಷ್ಟವಾಗಲಿಲ್ಲ. ಇನ್ನು, ತೆರೆ ಮೇಲೆ ನಾಯಕ, ನಾಯಕಿಯನ್ನು ನೋಡಿದಾಗ, ಎಲ್ಲೂ ಮುಜುಗರಕ್ಕೆ ಒಳಪಡದೆ ಖುಷಿಯಾಗಿ ಕೆಲಸ ಮಾಡಿರುವುದು ಕಾಣುತ್ತದೆ. ಈ ಚಿತ್ರದ ಮೇಲೆ ಜನರಿಗೂ ಕ್ರಶ್‌ ಆಗಲಿ. ಆ ಮೂಲಕ ಚಿತ್ರಕ್ಕೆ ಹಾಕಿದ ಬಂಡವಾಳ ಹಿಂದಿರುಗಲಿ’ ಎಂದು ಶುಭ ಹಾರೈಸಿದರು ಹಂಸಲೇಖ.

ಅಂದು ಗಣೇಶ್‌ ಕೂಡ ಕಾರ್ಯಕ್ರಮದ ಅತಿಥಿಯಾಗಿದ್ದರು. ಚಿತ್ರದ ಹಾಡು ಮತ್ತು ಟ್ರೇಲರ್‌ ವೀಕ್ಷಿಸಿದ ಗಣೇಶ್‌, “ಹಂಸಲೇಖ ಅವರ ಹಾಡುಗಳನ್ನು ಕೇಳಿ ಬೆಳೆದವನು ನಾನು. ಇಂದು ನಾನು ಎಷ್ಟೇ ಚೆನ್ನಾಗಿ ಮಾತಾಡಿದರೂ ಅದಕ್ಕೆ ಹಂಸಲೇಖ ಅವರ ಹಾಡುಗಳಲ್ಲಿರುವ ಬರವಣಿಗೆ ಕಾರಣ. ಅವರು ಶುರುಮಾಡಿರುವ ಆಡಿಯೋ ಕಂಪೆನಿ ಅಂಗಡಿಗೆ ನೆಂಟರು ಜಾಸ್ತಿ ಬರಲಿ. ಇನ್ನು, ತೆರೆ ಮೇಲೆ ಯಶಸ್‌ ಸೂರ್ಯ ಚೆನ್ನಾಗಿ ನಟಿಸಿದ್ದಾರೆ. ಸಿಕ್ಕಾಪಟ್ಟೆ ರೊಮ್ಯಾನ್ಸ್‌ ಸೀನ್‌ನಲ್ಲಿ ಖುಷಿಯಾಗಿ ನಟಿಸಿದ್ದಾರೆ. ಬಹುಶಃ, ಅವರ ರೊಮ್ಯಾನ್ಸ್‌ ದೃಶ್ಯಗಳಂತೆ ನಾನು ಮಾಡಿಲ್ಲ’ ಎನ್ನುತ್ತಲೇ ನಗೆಚಟಾಕಿ ಹಾರಿಸಿದರು ಗಣೇಶ್‌.

ನಿರ್ದೇಶಕ ಪ್ರಸನ್ನ, ಅಂದು ಡಬ್ಬಲ್‌ ಖುಷಿಯಲ್ಲಿದ್ದರು. ಒಂದು ಚಿತ್ರದ ಆಡಿಯೋ ಸಿಡಿ ಬಿಡುಗಡೆ. ಇನ್ನೊಂದು ಹಂಸಲೇಖ ಅವರ ಆಡಿಯೋ ಕಂಪೆನಿ ಮೂಲಕ ಹಾಡು ಹೊರಬರುತ್ತಿರುವುದು. ಚಿತ್ರದ ಕಥೆ ಬಗ್ಗೆ, ಹಾಕಿದ ಶ್ರಮ ಬಗ್ಗೆ. ಕಲಾವಿದರು, ತಂತ್ರಜ್ಞರ ಕೆಲಸದ ಬಗ್ಗೆ ಒಂದೇ ಉಸಿರಿನಲ್ಲಿ ಹೇಳಿಕೊಂಡರು. ಅಂದು ಸಮಾರಂಭಕ್ಕೆ ಆಗಮಿಸಿದ್ದ ಗಣೇಶ್‌ ಅವರಿಗೂ ಇದೇ ವೇಳೆ ಅಭಿನಂದಿಸಿದರು.

ನಾಯಕ ಯಶಸ್‌ ಸೂರ್ಯ ತಮ್ಮ ಪಾತ್ರ ಹಾಗೂ ಚಿತ್ರತಂಡದ ಬಗ್ಗೆ ಮಾತನಾಡಿದರು. ನಾಯಕಿ ಹರ್ಷಿಕಾ ಪೂಣಚ್ಚಾ ಪಾತ್ರದಲ್ಲಿರುವ ಗಟ್ಟಿತನದ ಕುರಿತು ಹೇಳಿಕೊಂಡರು. ಮತ್ತೂಬ್ಬ ನಾಯಕಿ ಪ್ರಿಯಾಂಕ, ಆರ್ಯವರ್ಧನ್‌ ತಮ್ಮ ಪಾತ್ರ ಕುರಿತು ಹೇಳಿಕೊಂಡರು. ಎಲ್ಲರೂ ಮಾತನಾಡುವ ಮುನ್ನ, ಚಿತ್ರದ ಮೂರು ಹಾಡುಗಳನ್ನು ತೋರಿಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next