Advertisement

“Color of 2024”: ಪೀಚ್‌ಗೆ “2024ರ ವರ್ಣ”ದ ಗರಿ

09:18 PM Dec 08, 2023 | Pranav MS |

ನವದೆಹಲಿ: ಖ್ಯಾತ ಜಾಗತಿಕ ವರ್ಣಪರಿಣತಿ ಸಂಸ್ಥೆ ಪ್ಯಾಂಟನ್‌ 2024ರ ವರ್ಷದ ಬಣ್ಣವಾಗಿ “ಪೀಚ್‌’ ಕಲರ್‌(ಕನಕಾಂಬರ ಹೂವಿನ ಬಣ್ಣ) ಅನ್ನು ಆಯ್ಕೆ ಮಾಡಿದೆ. ಅಲ್ಲದೇ, ಜಗತ್ತನ್ನು ಒಗ್ಗೂಡಿಸುವ ಸಂಕೇತವನ್ನು ಈ ಬಣ್ಣ ತೋರುತ್ತದೆ ಎಂಬುದಾಗಿಯೂ ಹೇಳಿದೆ.

Advertisement

ಸಂಸ್ಥೆಯ ಉಪಾಧ್ಯಕ್ಷ ಲ್ಯಾರಿ ಪ್ರಸ್ಮನ್‌ ನೀಡಿರುವ ಮಾಹಿತಿ ಪ್ರಕಾರ, ಪೀಚ್‌ ಬಣ್ಣವು ಸಹಯೋಗದ ಸಂಕೇ ತವಾಗಿದೆ. ನಿರ್ಮಲವಾಗಿ ಕಾಣುವ ಈ ಬಣ್ಣದಲ್ಲಿ ದಯೆ, ಕರುಣೆ, ಕಾಳಜಿ, ಮೃದುತ್ವ, ಸಹಯೋಗದ ಭಾವ ವ್ಯಕ್ತವಾಗುತ್ತದೆ. ಅಲ್ಲದೇ, ಎಲ್ಲರ ಹೃದಯವನ್ನೂ ಗೆಲ್ಲುವಂಥ, ಎಲ್ಲರನ್ನೂ ಒಗ್ಗೂಡಿಸಿ ಆಲಿಂಗಿಸುವಂಥ ಸಮೃದ್ಧಿಯ ಸಂಕೇತವಾಗಿ ತೋರುವ ಹಿನ್ನೆಲೆಯಲ್ಲಿ 2024ರ ಬಣ್ಣವೆಂಬ ಗರಿ ಪೀಚ್‌ಗೆ ದೊರೆತಿದೆ ಎಂದಿದ್ದಾರೆ. 2023ರಲ್ಲಿ ಶಕ್ತಿ ಮತ್ತು ಸಬಲೀಕರಣದ ಸಂಕೇತವಾಗಿ ಮೆಜಂಟಾ ಬಣ್ಣಕ್ಕೆ ವರ್ಷದ ಬಣ್ಣವೆಂಬ ಪಟ್ಟ ದೊರೆತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next