Advertisement

ಮೊದಲ ದಿನ 705 ವಿದ್ಯಾರ್ಥಿಗಳು ಹಾಜರು

03:22 PM Nov 18, 2020 | Suhan S |

ಮಂಡ್ಯ: ಕಳೆದ 8 ತಿಂಗಳಿನಿಂದ ಮುಚ್ಚಿದ್ದ ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಮಂಗಳವಾರ ಪ್ರಾರಂಭಗೊಂಡಿವೆ. ಆದರೆ, ಕೊರೊನಾ ಪರೀಕ್ಷಾ ವರದಿ ಹಾಗೂ ಪೋಷಕರ ಕಡ್ಡಾಯ ಒಪ್ಪಿಗೆಪತ್ರ ಕಡ್ಡಾಯವಾಗಿದೆ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ವಿದ್ಯಾರ್ಥಿಗಳು ಹಾಜರಾಗಲಿಲ್ಲ.

Advertisement

ಜಿಲ್ಲೆಯಲ್ಲಿ 15 ಸರ್ಕಾರಿ,8 ಖಾಸಗಿ ಸ್ನಾತಕ/ ಸ್ನಾತಕೋತ್ತರ ಕಾಲೇಜುಗಳಿದ್ದು, ಈ ಪೈಕಿ ಮೊದಲದಿನದಂದು ಖಾಸಗಿ ಕಾಲೇಜುಗಳಿಗೆ281 ಹಾಗೂ ಸರ್ಕಾರಿ ಕಾಲೇಜುಗಳಿಗೆ424 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 705 ವಿದ್ಯಾರ್ಥಿಗಳು ಹಾಜರಾಗಿದ್ದರು. ಜಿಲ್ಲೆಯಲ್ಲಿ15 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿದ್ದು, ಒಟ್ಟು 3179 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಮೊದಲ ದಿನ ಕೇವಲ 281 ವಿದ್ಯಾರ್ಥಿಗಳು ಹಾಜರಾಗಿದ್ದರು. ಒಂದೊಂದು ಕಾಲೇಜಿನಲ್ಲಿ 20ರಿಂದ 30 ಮಂದಿ ವಿದ್ಯಾರ್ಥಿಗಳು ಮಾತ್ರ ಹಾಜರಾಗಿದ್ದರು.

ನೆಗೆಟಿವ್‌ ಬಂದವರಿಗೆ ಅವಕಾಶ: ಈಗಾಗಲೇ ಕೋವಿಡ್ ಪರೀಕ್ಷೆ ಮಾಡಿಸಿದ್ದು, ಅದರಲ್ಲಿ ನೆಗೆಟಿವ್‌ ವರದಿ ಬಂದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಉಳಿದವರಿಗೆ ತಮ್ಮ ಪ್ರದೇಶದ ಸುತ್ತಮುತ್ತಲಿನ ಆಸ್ಪತ್ರೆ ಕೇಂದ್ರಗಳಲ್ಲಿ ಕೋವಿಡ್‌ ಪರೀಕ್ಷೆ ಮಾಡಿಸಿ, ನೆಗೆಟಿವ್‌ ವರದಿ ಬಂದವರು ಮಾತ್ರ ಕಾಲೇಜಿಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಪೋಷಕರ ಅನುಮತಿ ಕಡ್ಡಾಯ: ಕೋವಿಡ್‌ ವರದಿ ಜೊತೆಗೆ ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿದೆ. ಆದ್ದರಿಂದ ಕಾಲೇಜಿಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳಿಗೂ ಪೋಷಕರ ಅನುಮತಿ ಪತ್ರ ಕಡ್ಡಾಯವಾಗಿ ತರುವಂತೆ ಸೂಚಿಸಲಾಗಿದೆ. ಇದು ಸಹ ಮೊದಲ ದಿನ ವಿದ್ಯಾರ್ಥಿಗಳಸಂಖ್ಯೆ ಕಡಿಮೆಯಾಗಲುಕಾರಣವಾಗಿದೆ. ಕಾಲೇಜಿಗೆ ಬಂದ ವಿದ್ಯಾರ್ಥಿಗಳು ಕೆಲವರು ಕೋವಿಡ್ ಪರೀಕ್ಷೆ ಮಾಡಿಸಿಕೊಂಡ ನೆಗೆಟಿವ್‌ ವರದಿ ತೋರಿಸಿ, ತರಗತಿಗೆ ಹಾಜರಾದರು. ಕೋವಿಡ್‌ ಪರೀಕ್ಷೆ ಮಾಡಿಸದ ವಿದ್ಯಾರ್ಥಿಗಳಿಗೆ ರ್ಯಾಪಿಡ್‌ ಪರೀಕ್ಷೆ ನಡೆಸಲಾಗಿದೆ. ಅಲ್ಲದೆ, ಪ್ರತಿಯೊಬ್ಬ ಉಪನ್ಯಾಸಕರು, ಅಧ್ಯಾಪಕರು, ಕಾಲೇಜು ಸಿಬ್ಬಂದಿಗೆ ಪರೀಕ್ಷೆ ನಡೆಸಲಾಯಿತು.

ಗ್ರಾಮೀಣರಿಗೆ ಬಸ್‌ಪಾಸ್‌ ಸಮಸ್ಯೆ: ಮೊದಲ ದಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಬಹುತೇಕಗೈರಾಗಿದ್ದು, ನಗರ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕೆಲವರು ಪೋಷಕರು ವಿದ್ಯಾರ್ಥಿ ಗಳನ್ನು ಕಳುಹಿಸಲು ಹಿಂದೇಟು ಹಾಕಿದ್ದರೆ, ಕೆಲವು ವಿದ್ಯಾರ್ಥಿಗಳು ಬಸ್‌ಪಾಸ್‌ ಇಲ್ಲದೆ ಕಾಲೇಜಿಗೆ ಬರಲು ಸಾಧ್ಯವಾಗಿಲ್ಲ. ಸಾರಿಗೆ ಇಲಾಖೆ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ನಿಲ್ಲಿಸಿರುವುದರಿಂದ ತೊಂದರೆಯಾಗಿದೆ.

Advertisement

ಕಾಲೇಜುಗಳಲ್ಲಿ ಸುರಕ್ಷತಕ್ರಮ : ಕಾಲೇಜು ಆರಂಭ ಹಿನ್ನೆಲೆಯಲ್ಲಿ ಕಾಲೇಜುಗಳಲ್ಲಿ ಸುರಕ್ಷಿತಕ್ರಮಗಳನ್ನು ಕೈಗೊಳ್ಳಲಾಗಿತ್ತು. ಪ್ರತಿಯೊಂದುಕೊಠಡಿಗೂಸ್ಯಾನಿಟೈಸರ್‌ ಮಾಡಲಾಗಿತ್ತು. ವಿದ್ಯಾರ್ಥಿಗಳು ಹಾಗೂಉಪನ್ಯಾಸಕರುಕಾಲೇಜು ಪ್ರವೇಶ ದ್ವಾರದಲ್ಲಿ ಸ್ಕ್ರೀನಿಂಗ್‌, ಸ್ಯಾನಿಟೈಸರ್‌ ಹಾಕಲಾಗುತ್ತಿತ್ತು. ಅಲ್ಲದೆ,ಕಡ್ಡಾಯವಾಗಿ ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶ ನೀಡಲಾಗುತ್ತಿತ್ತು.

ಜಿಲ್ಲೆಯ 15 ಪ್ರಥಮ ದರ್ಜೆ ಕಾಲೇಜುಗಳಲ್ಲಿ 3179ವಿದ್ಯಾರ್ಥಿಗಳು ದಾಖಲಾಗಿದ್ದರು.ಆದರೆ,ಮೊದಲದಿನ 195ಮಂದಿಮಾತ್ರಹಾಜರಾಗಿದ್ದಾರೆ. ಕೋವಿಡ್ ಭಯ ಒಂದು ಕಡೆಯಾದರೆ, ಕೋವಿಡ್‌ ಪರೀಕ್ಷೆ ಎಷ್ಟೋ ವಿದ್ಯಾರ್ಥಿಗಳು ಮಾಡಿಸಿಲ್ಲ.ಅಲ್ಲದೆ,ಪೋಷಕರು ವಿದ್ಯಾರ್ಥಿಗಳಿಗೆ ಅನುಮತಿ ಪತ್ರ ನೀಡಿಲ್ಲ.ಇದರಿಂದ ಮೊದಲ ದಿನ ಹಾಜರಾತಿ ಕಡಿಮೆಯಾಗಿದೆ.ಇನ್ನೂ 4-5ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಹೆಚ್ಚಾಗುವ ನಿರೀಕ್ಷೆ ಇದೆ. ಡಾ.ನಟರಾಜು,ಪ್ರಾಂಶುಪಾಲ,ಜಿಲ್ಲಾ ಲೀಡ್‌ ಕಾಲೇಜುಗಳು

ಮೊದಲ ದಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಲಿಲ್ಲ. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ಬಹುತೇಕ ಗೈರಾಗಿದ್ದರು. ಕೋವಿಡ್‌ ನೆಗೆಟಿವ್‌ ವರದಿಬಂದವರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಕಾಲೇಜಿನ 623 ದಾಖಲಾತಿ ವಿದ್ಯಾರ್ಥಿಗಳ ಪೈಕಿ 75 ವಿದ್ಯಾರ್ಥಿಗಳು ಹಾಜರಾಗಿದ್ದರು. ಡಾ.ನಾರಾಯಣ್‌, ಪ್ರಾಂಶುಪಾಲ, ಸರ್ಕಾರಿ ಮಹಿಳಾ ಕಾಲೇಜು, ಮಂಡ್ಯ

ಮೊದಲದಿನ ನಾನು ಸ್ನೇಹಿತರೆಲ್ಲರೂ ಬಂದಿದ್ದೆವು.ಆದರೆ,ಯಾವುದೇ ಪಾಠಗಳು ನಡೆಯಲಿಲ್ಲ.ಇನ್ನೂ ಕೆಲವು ನನ್ನ ಸ್ನೇಹಿತರು ಪ್ರವೇಶಾತಿಪಡೆಯುತ್ತಿದ್ದಾರೆ.ಎಲ್ಲರೂ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದೇವೆ. ಶೀಘ್ರದಲ್ಲಿಯೇ ತರಗತಿ ಆರಂಭಿಸಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಗುರುಪ್ರಸಾದ್‌, ಸ್ನಾತಕೋತ್ತರ ವಿದ್ಯಾರ್ಥಿ, ಅಂತಿಮ ವರ್ಷ

ಮೊದಲ ದಿನ ಯಾವುದೇ ಪಾಠ, ಬೋಧನೆ ನಡೆಯಲಿಲ್ಲ. ಎಲ್ಲ ವಿದ್ಯಾರ್ಥಿಗಳಿಗೂ, ಅಧ್ಯಾಪಕರು, ಉಪನ್ಯಾಸಕರಿಗೂ ಕೋವಿಡ್‌ ಪರೀಕ್ಷೆ ನಡೆಸಲಾಗಿದೆ. ಇನ್ನೆರಡು ದಿನಗಳಲ್ಲಿ ನೆಗೆಟಿವ್‌ ವರದಿಬಂದವರಿಗೆ ತರಗತಿ ನಡೆಸಲು ನಿರ್ಧರಿಸಲಾಗಿದೆ. ಡಾ.ಗಣೇಶ್‌, ಸೈಕಾಲಜಿ ಉಪನ್ಯಾಸಕ, ಮಂಡ್ಯ ವಿವಿ

 

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next