Advertisement
ಆನಂದತೀರ್ಥ ಟ್ರಸ್ಟ್ ನಡಿಯಲ್ಲಿ ಕೃಷ್ಣೆöಕ್ಯ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಕನಸಿನ ಕೂಸು ಇಂದು ರಾಜ್ಯದ ವಿವಿಧ ಭಾಗದ ವಿದ್ಯಾರ್ಥಿಗಳ ಜ್ಞಾನಾರ್ಜನೆಯ ಕೇಂದ್ರವಾಗಿ ರಾಜ್ಯಾದ್ಯಂತ ಮನೆಮಾತಾಗಿ ಬೆಳೆಯುತ್ತಿರುವುದರ ಹಿಂದೆ ಶ್ರೀಗಳ ಆಶೀರ್ವಾದ, ಮತ್ತು ಈಗಿನ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರ ನಿರಂತರ ಪ್ರೋತ್ಸಾಹವೇ ಕಾರಣ. ಅತ್ಯಂತ ಕಡಿಮೆ ಕಾಲೇಜು ಶುಲ್ಕ ಪಡೆದು ಉತ್ಕೃಷ್ಟ ಭಾರತೀಯ ಶಿಕ್ಷಣ ನೀಡುವಲ್ಲಿ ಹೆಸರಾಗಿರುವ ಈ ಶಿಕ್ಷಣ ಸಂಸ್ಥೆಯಲ್ಲಿ ಯಾವುದೇ ಡೊನೇಷನ್, ಮತ್ತು ಡೆವಲ್‌ಮೆಂಟ್ ಶುಲ್ಕ ಪಡೆಯದೇ ಅತ್ಯಂತ ಕಡಿಮೆ ಕಾಲೇಜು ಶುಲ್ಕ ಪಡೆದು ಶಿಕ್ಷಣ ನೀಡುತ್ತಿದ್ದು, ಬಡ ವಿದ್ಯಾರ್ಥಿಗಳಿಗೆ ಆಸರೆಯಾಗಿದೆ.
Related Articles
Advertisement
ಎಲ್ಲಾ ತರಹದ ಸ್ಪರ್ದಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳನ್ನು ತಯಾರು ಮಾಡುವ ಜೊತೆಗೆ ಅವರಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವ ನಿಟ್ಟಿನಲ್ಲಿ ನಿರಂತರ ಆಧ್ಯಾತ್ಮಿಕ, ಸಾಂಸ್ಕೃತಿಕ ಚಟುವಟಿಯನ್ನು ನಡೆಸಿ, ವಿದ್ಯಾರ್ಥಿಗಳ ಮನೋ ವಿಕಾಸ ಮಾಡುವಲ್ಲಿ ಸಂಸ್ಥೆಯು ನಿರಂತರವಾಗಿ ಶ್ರಮಿಸುತ್ತಿದೆ.
ಉಡುಪಿ ಸುತ್ತಮುತ್ತಲಿನ ಪ್ರದೇಶದಿಂದ ಬರುವ ವಿದ್ಯಾರ್ಥಿಗಳಿಗೆ ಕಾಲೇಜು ವಾಹನದ ವ್ಯವಸ್ಥೆಕೂಡ ಲಭ್ಯವಿದ್ದು, ಅದರ ಸದುಪಯೋಗಕೂಡ ವಿದ್ಯಾರ್ಥಿಗಳು ಪಡೆದುಕ್ಕೊಳ್ಳಬಹುದು. ಶ್ರೀಗಳ ಆಶಯದಂತೆ ಸಂಸ್ಥೆಗೆ ದಾಖಲಾದ ಎಲ್ಲಾ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿ ಊಟದ ವ್ಯವಸ್ಥೆ ಉಚಿತವಾಗಿ ನೀಡುತ್ತಿದ್ದು, ಯಾವುದೇ ಶುಲ್ಕವನ್ನು ವಿದ್ಯಾರ್ಥಿಗಳಿಂದ ಪಡೆದುಕ್ಕೊಳ್ಳುವುದಿಲ್ಲ.
ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ: ದೂರದ ಊರಿನಿಂದ ವಿದ್ಯಾಭ್ಯಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ಸುಸಜ್ಜಿತವಾದ ಪ್ರತ್ಯೇಕ ವಸತಿ ನಿಲಯದ ವ್ಯವಸ್ಥೆ ಇದ್ದು, ಪಿಯುಸಿ ಹಾಗೂ ಡಿಗ್ರಿ ವಿದ್ಯಾರ್ಥಿಗಳಿಗೆ ಅತ್ಯಂತ ಕಡಿಮೆ ಶುಲ್ಕದಲ್ಲಿ ವಸತಿ ವ್ಯವಸ್ಥೆ ನೀಡಲಾಗುತ್ತದೆ. ಬೆಳಗಿನ ಉಪಹಾರ, ಮಧ್ಯಾಹ್ನ ಊಟ, ಸಂಜೆ ಉಪಹಾರ, ಹಾಗೂ ರಾತ್ರಿ ಊಟದ ವ್ಯವಸ್ಥೆ ಇದ್ದು, ಶುಚಿ ಹಾಗೂ ರುಚಿಯಾದ ಊಟವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.
ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಠಿಯಿಂದ ಕಾಲೇಜು ಸುತ್ತಮುತ್ತ ಸಿಸಿಟಿವಿ ಕಣ್ಗಾವಲಿನ ವ್ಯವಸ್ಥೆ ಇದ್ದು, ದಿನದ ೨೪ಗಂಟೆಯು ಕೂಡ ಸೆಕ್ಯರಿಟಿ ವ್ಯವಸ್ಥೆ ಇರುತ್ತದೆ. ಪ್ರತಿಯೊಂದು ಕೊಠಡಿಯಲ್ಲಿ ನಾಲ್ಕು ವಿದ್ಯಾರ್ಥಿಗಳಿಗೆ ಉಳಿದುಕ್ಕೊಳ್ಳಲು ಅವಕಾಶ ಇದ್ದು ವಿದ್ಯಾರ್ಥಿಗಳ ನಿರಂತರ ಕಲಿಕೆಗೆ ಉತ್ತೇಜಿಸುವ ವಾತಾವರಣ ಹಾಸ್ಟೆಲ್‌ನಲ್ಲಿ ಇರುತ್ತದೆ.
ಉತ್ತಮ ಫಲಿತಾಂಶ:
2022-23 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪಿಯುಸಿ ವಿಭಾಗದಲ್ಲಿ ರಾಜ್ಯಕ್ಕೆ 15 ಹಾಗೂ 20ನೇ ರ‍್ಯಾಂಕ್ ಹಾಗೂ ವಾಣಿಜ್ಯ ವಿಭಾಗದಲ್ಲಿ 11 ನೇ ರ‍್ಯಾಂಕ್‌ಗಳಿಸಿದ ಕಾಲೇಜಿನ ವಿದ್ಯಾರ್ಥಿಗಳು ಸಂಸ್ಥೆಗೆ ಹೆಮ್ಮೆ ತಂದಿದ್ದಾರೆ. ಅಲ್ಲದೇ 14 ವಿದ್ಯಾರ್ಥಿಗಳು ಶೇ. 90ಕ್ಕಿಂತ ಅಧಿಕ ಹಾಗೂ 21 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಪ್ರಶಾಂತ ಪ್ರದೇಶದಲ್ಲಿ, ಗುರು ಮಧ್ವಾಚಾರ್ಯರು ಜನಿಸಿದ ಪವಿತ್ರ ಜಾಗದಲ್ಲಿ ಕುಂಜಾರು ಶ್ರೀ ದುರ್ಗಾಪರಮೇಶ್ವರಿ ದೇವರು ನೆಲೆನಿಂತ ಪ್ರದೇಶದಲ್ಲಿ ಅತ್ಯಂತ ಸುಸಜ್ಜಿತವಾದ ಕಾಲೇಜು ಸ್ಥಾಪನೆಗೊಂಡಿದ್ದು, ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಕೈಗೆಟುಕುವ ದರದಲ್ಲಿ ಕಾಲೇಜು ವಿದ್ಯಾಭ್ಯಾಸ ಮುಗಿಸಲು ಅವಕಾಶ ಇರುತ್ತದೆ.
ಪದವಿ ಪೂರ್ವ, ಹಾಗೂ ಪದವಿ ತರಗತಿಗಳ ದಾಖಲಾತಿ ಈಗಾಗಲೇ ಆರಂಭಗೊಂಡಿದ್ದು, ಹೆಚ್ಚಿನ ಮಾಹಿತಿಗೆ ದೂ. ಸಂ 8951099660, 9964080962 ನ್ನು ಸಂಪರ್ಕಿಸಬಹುದು.