Advertisement

ಕಾಲೇಜು ಲೈಫ್

03:45 AM Feb 03, 2017 | |

ಕಾಲೇಜು ಲೈಫ್ ‘, ಕನಸು ಕಾಣುವ ವಯಸ್ಸು. ಹೌದು ಕಾಲೇಜು ಎಂದಾಕ್ಷಣ ನಮಗೆ ಬರೀ ಮೋಜು ಮಸ್ತಿ ಮಾತ್ರ ಕಣ್ಮುಂದೆ ಬರುವುದಲ್ಲ . ಬದಲಾಗಿ ಅದು ನಮ್ಮ ಸುಂದರ ಭವಿಷ್ಯಕ್ಕೆ ಅಡಿಪಾಯ ಹಾಕುವ ಐದು  ವರ್ಷದ ಅವಿಸ್ಮರಣೀಯ ದಿನಗಳು. ನೂರಾರು ಕನಸಿನ ಹೊರೆಯನ್ನು ಬೆನ್ನ ಹಿಂದೆ ಕಟ್ಟಿಕೊಂಡು ಸಾಗುವ ಅಮೂಲ್ಯ ದಿನಗಳು. ನಾವು ಪ್ರತಿದಿನ ಕಾಲೇಜಿನ ಕಾರಿಡಾರಿನಲ್ಲಿ ನಿಂತು ಟೈಮ… ಪಾಸ್‌ ಮಾಡುವ ಬದಲು ಉಜ್ವಲ ಭವಿಷ್ಯದ ಕಡೆ ಯೋಚನೆ ಮಾಡುವ ಪ್ರಯತ್ನ ಮಾಡಿದ್ರೆ ಯಶಸ್ಸು ನಮ್ಮದಾಗುವುದು ಖಂಡಿತ. 

Advertisement

ಅದು ಡಿಗ್ರಿಯ ಆರಂಭಿಕ ದಿನಗಳು. ಆಗಷ್ಟೆ ನಾನು ಪಿಯುಸಿಯ ಬಾಗಿಲನ್ನು ದಾಟಿ ಡಿಗ್ರಿ ಜೀವನಕ್ಕೆ ಕಾಲಿಟ್ಟಿದ್ದೆ. ಅಂದುಕೊಂಡಂತೆ ಮಾರ್ಕ್ಸ್ ಬಾರದೆ ಇದ್ರೂ ಅಂದುಕೊಂಡ ಕಾಲೇಜಿನಲ್ಲಿ ಅಡ್ಮಿಶನ್‌ ಸಿಕ್ಕಿತ್ತು. ಫ‌Ór… ಇಯರ್‌ ಆದುದರಿಂದ ಹೊಸ ಸ್ನೇಹಿತರ ಪರಿಚಯ ಆಗಲು ಸ್ವಲ್ಪ ದಿನಗಳು ಬೇಕಾಯಿತು. ನಂತರ ಹೊಸ ಒಬ್ಬರ ಗೆಳೆತನದಲ್ಲಿ, ಹೊಸ ಅನುಭವ, ಕ್ಲಾಸಿನಲ್ಲಿ ಹೆಚ್ಚು ಮಾತಾನಾಡುವ ಕಲೆ, ಬಂಕ್‌ ಹಾಕುವ ಕಲೆ ಬಿಟ್ರೆ, ಓದಿನ ವಿಷಯದಲ್ಲಿ ಅಷ್ಟಕ್ಕೇ ಅಷ್ಟೆಯಾಗಿದ್ದರು. ಕಾರಣ ದಿನದಿಂದ ದಿನ, ನಾವು ಪ್ರಾರಂಭದಲ್ಲಿ ಹೊತ್ತುಕೊಂಡು ಬಂದಿದ್ದ ಬೆಟ್ಟದಷ್ಟು ಕನಸು ನಿಧಾನವಾಗಿ ಕರಗುತ್ತಾ ಅದರ ಕಡೆ  ಗಮನ ಕಡಿಮೆಯಾಗಿ ಭವಿಷ್ಯಕ್ಕೆ ಕೊಳ್ಳಿ ಇಡುವ ಹಂತದ ಕಡೆ ಸಾಗುತ್ತಿದ್ರು ನನ್ನ ಗೆಳೆಯರು. 

ಇದು ನನ್ನ ಗೆಳೆಯರ ಪರಿಸ್ಥಿತಿ ಮಾತ್ರವಲ್ಲ . ಹೆಚ್ಚಿನ ಕಡೆ ನಮ್ಮಂಥ ಕಾಲೇಜು ಹೋಗುವ ವಿದ್ಯಾರ್ಥಿಗಳು ಮಾಡುವ ಸರ್ವೇಸಾಮಾನ್ಯವಾದ ತಪ್ಪು ನಡಿಗೆ. ತಾನು ಜೀವನದಲ್ಲಿ ಒಂದು ದೊಡ್ಡ ವ್ಯಕ್ತಿ ಆಗಬೇಕು, ಅದಕ್ಕಾಗಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಿ ಒಳ್ಳೆ ಹೆಸರುಗಳಿಸಿ, ನಾಲ್ಕು ಜನರ ಮುಂದೆ ಒಳ್ಳೆ ವ್ಯಕ್ತಿಯಾಗಿ ಮೆರೆಯುವ ಆಸೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ಮತ್ತು ಅವರ ತಂದೆತಾಯಿಗಳು ಹೊಂದಿರುತ್ತಾರೆ. ತಾವು ಇದನ್ನು ಮಾಡಬಲ್ಲೆವು, ತಮ್ಮಿಂದ ಇದು ಸಾಧ್ಯ ಎನ್ನುವುದನ್ನು ವಿದ್ಯಾರ್ಥಿಗಳು ಮನಗಂಡು ಅದನ್ನು ಸಾಧಿಸುವ ಯತ್ನದಲ್ಲಿ ಹತ್ತುಹಲವು ಬಾರಿಗೆ ಎಡವಿ ಬಿದ್ದು ಕೊನೆಗೆ ಯಾವುದು ಬೇಡ ಎಂದು ಬದುಕಿನ ಹಳಿಯನ್ನು ತಪ್ಪಿಅಡ್ಡದಾರಿಯನ್ನು ಹುಡುಕಿ ವ್ಯಸನಿಗಳಾಗುತ್ತಾರೆ. 

ವಿದ್ಯಾರ್ಥಿಗಳೇ ಹಾಗೆ, ತಮಗೆ ಯಾವುದು ಸಾಧ್ಯ ಎನ್ನುವುದನ್ನು ತಿಳಿದು ನಂತರ ಅದರಿಂದ ಹಿಂಜರಿದು ಇನ್ನೊಬ್ಬರ ಹೇಳಿಕೆಗಳಿಂದ ಪ್ರೇರಿತರಾಗಿ ತಮ್ಮ ಭವಿಷ್ಯದ ಬಗ್ಗೆ ದಿಗ್ಭ್ರಾಂತರಾಗಿ ಯೋಚಿಸ ತೊಡುಗುತ್ತಾರೆ. ಈಗಿನ ಕಾಲಕ್ಕೆ , ಜನರೇಷನ್‌ಗೆ ತಕ್ಕ ವಿದ್ಯಾರ್ಥಿಗಳು ಆಲೋಚನಾ ಶಕ್ತಿಯನ್ನು, ತಮ್ಮ ನಿರ್ಧಾರವನ್ನು ಹಪಾಹಪಿಯಿಂದ ಪ್ರಕಟಿಸಿ ಬಿಡುತ್ತಾರೆ. ಆದ್ರೆ ಇಂಥ ಕೆಲ ನಿರ್ಧಾರದಿಂದ ಭವಿಷ್ಯದ ಮುಂದಿನ ದಿನದಲ್ಲಿ ಅವರು ಎಡವಿ ಬೀಳುವ ಸಾಧ್ಯತೆ ಹೆಚ್ಚು. ವಿದ್ಯಾರ್ಥಿಗಳಿಗೆ ಮುಖ್ಯವಾಗಿ ಬೇಕಾಗಿರುವುದು ಆಯ್ಕೆ ಸ್ವಾತಂತ್ರ್ಯ, ವಿದ್ಯಾರ್ಥಿಗಳು ಮನೆಯಲ್ಲಿ ಸರಿಯಾಗಿ ಇರದೆ, ಅಪ್ಪ-ಅಮ್ಮನ ಮಾತಿಗೆ ಪ್ರತಿ ಉತ್ತರ ಕೊಟ್ಟು , ಈಗಲೇ ಎಲ್ಲಾ ನಿರ್ಧಾರವನ್ನು ಮಾಡಿ ಬಿಡುತ್ತಾರೆ. ಆದ್ರೆ ಇದು ನಾವು ಮಾಡುವ ದೊಡ್ಡ ತಪ್ಪು . ವಿಶೇಷವಾಗಿ ನಮ್ಮಂಥ ವಿದ್ಯಾರ್ಥಿಗಳಲ್ಲಿ ಒಂದು ಮನಃಸ್ಥಿತಿ ಇದೆ. ಅದು ಏನೆಂದರೆ, ನಾವು ಕಾಲೇಜು ಸೇರಿದ್ರೆ ದೊಡ್ಡವರು ಆಗಿದ್ದೀವಿ ಅಂಥ, ಇನ್ನೂ ಅಪ್ಪ-ಅಮ್ಮನ ಮಾತಿಗೆ ಅಷ್ಟು ತಲೆಕೆಡಿಸಿಕೊಳ್ಳಲ್ಲ. ಈ ಒಂದು ಮನಃಸ್ಥಿತಿಯಿಂದ ನಾವು ಬೇಕಾಬಿಟ್ಟಿಯಾಗಿ ಇರಬಹುದು ಅಂಥ ಅಂದುಕೊಳ್ಳ ಬಹುದು. ಆದ್ರೆ ನಮ್ಮ ಕೆಲ ಆಯ್ಕೆ , ನಿರ್ಣಯಗಳು ತಪ್ಪಾಗಿ ಇರುತ್ತವೆ. ಅದು ನಮ್ಮ ಕಣ್ಣಿಗೆ ಮಾತ್ರ ಸರಿಯಾಗಿ ಕಾಣಬಹುದು ಅಷ್ಟೇ. 

ಹೀಗೆ ಕಾಲೇಜು ಹೋಗುವ ಪ್ರತಿಯೊಬ್ಬರಲ್ಲೂ ಇಂಥ ಕೆಲ ಋಣಾತ್ಮಕ ಬದಲಾವಣೆ ಬರಬಹುದು. ಅದರೆ ಅದನ್ನು ಸಾಧ್ಯವಾದಷ್ಟು ಅಲ್ಲಗೆಳೆಯುವ ಪ್ರಯತ್ನ ಮಾಡಿ. ಮೋಜು-ಮಸ್ತಿ ಎನ್ನುವುದು ನಮ್ಮ ಜೀವನದಲ್ಲಿ ಕ್ಷಣಮಾತ್ರದಲ್ಲಿ ಬಂದು ಹೋಗುವಂಥದು.

Advertisement

– ಸುಹಾನ್‌
ಪತ್ರಿಕೋದ್ಯಮ ವಿಭಾಗ
ಎಂ.ಜಿಂ.ಎಂ. ಕಾಲೇಜು , ಉಡುಪಿ 

 

Advertisement

Udayavani is now on Telegram. Click here to join our channel and stay updated with the latest news.

Next