Advertisement

“ಕಾಲೇಜ್‌ ಕುಮಾರ್‌’ನ ಮೊದಲ ಹಾಡು ಬಿಡುಗಡೆಯಾಯ್ತು

01:18 PM Oct 07, 2017 | Team Udayavani |

“ಅಲೆಮಾರಿ’ ಸಂತು ನಿರ್ದೇಶನದ “ಕಾಲೇಜ್‌ ಕುಮಾರ್‌’ ಚಿತ್ರದ ಮೊದಲ ಹಾಡು ಯಲಹಂಕದ ಶೇಷಾದ್ರಿಪುರ ಕಾಲೇಜಿನಲ್ಲಿ ಶುಕ್ರವಾರ ಬಿಡುಗಡೆಯಾಗಿದೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿರುವ ಮತ್ತು ಸಂತು ರಚಿಸಿರುವ “ಲಾಸ್ಟ್‌ ಬೆಂಚ್‌ ಬಾಯ್ಸ್.’ ಎಂಬ ಗೀತೆಯನ್ನು ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ.

Advertisement

ಅಲೋಕ್‌, ವ್ಯಾಸರಾಜ್‌ ಮತ್ತು ವಾಸುಕಿ ವೈಭವ್‌ ಈ ಗೀತೆಯನ್ನು ಹಾಡಿದ್ದಾರೆ. ಹಾಡು ಬಿಡುಗಡೆ ಮಾಡುವುದಕ್ಕೆ ರವಿಶಂಕರ್‌, ಸಂಯುಕ್ತ ಹೆಗಡೆ, ವಿಕ್ಕಿ, ನಿರ್ಮಾಪಕ ಎಲ್‌. ಪದ್ಮನಾಭ್‌, ರ್ಜುನ್‌ ಜನ್ಯ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ನವೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.