Advertisement

ನವೆಂಬರ್‌ 10ಕ್ಕೆ “ಕಾಲೇಜ್‌ ಕುಮಾರ್‌’

01:25 PM Nov 04, 2017 | |

ಕೆಲವೇ ತಿಂಗಳ ಹಿಂದೆ “ಅಲೆಮಾರಿ’ ಸಂತು ನಿರ್ದೇಶನದ “ಕಾಲೇಜ್‌ ಕುಮಾರ್‌’ ಚಿತ್ರವು ಸೆಟ್ಟೇರಿತ್ತು. ಈಗ ಆ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಈಗಾಗಲೇ ಚಿತ್ರವು ಸೆನ್ಸಾರ್‌ ಆಗಿದ್ದು, ನವೆಂಬರ್‌ 10ರಂದು ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುತ್ತಿದೆ. “ಕೆಂಡಸಂಪಿಗೆ’ ಚಿತ್ರದ ನಾಯಕ ವಿಕ್ಕಿ ಈ ಬಾರಿ “ಕಾಲೇಜ ಕುಮಾರ್‌’ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು “ಕಿರಿಕ್‌ ಪಾರ್ಟಿ’ ಖ್ಯಾತಿಯ ಸಂಯುಕ್ತಾ ಹೆಗ್ಡೆ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

Advertisement

ಮಿಕ್ಕಂತೆ ರವಿಶಂಕರ್‌, ಶ್ರುತಿ, ಪ್ರಕಾಶ್‌ ಬೆಳವಾಡಿ, ಸಾಧು ಕೋಕಿಲ, ಪ್ರಶಾಂತ್‌ ಸಿದ್ದಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ತಂದೆ-ತಾಯಿ ತಮ್ಮ ಮಕ್ಕಳ ಮೇಲೆ ಅದೆಷ್ಟು ಕನಸುಗಳನ್ನು ಕಟ್ಟಿಕೊಂಡಿರುತ್ತಾರೆ. ಆ ಕನಸುಗಳು ಈಡೇರರಿದ್ದಾಗ ಎಷ್ಟೆಲ್ಲಾ ವ್ಯಥೆಪಡುತ್ತಾರೆ ಎಂಬ ಅಂಶವನ್ನಿಟ್ಟುಕೊಂಡು, ಸಂತು ಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಅವರೇ ಚಿತ್ರಕಥೆಯನ್ನೂ ರಚಿಸಿದ್ದಾರೆ.

ಬೆಂಗಳೂರು ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆದಿದೆ.”ಕಾಲೇಜ್‌ ಕುಮಾರ್‌’ ಚಿತ್ರವನ್ನು ಎಂ.ಆರ್‌ ಪಿಕ್ಚರ್ನಡಿ ಎಲ್‌.ಪದ್ಮನಾಭ್‌ ನಿರ್ಮಿಸಿದ್ದಾರೆ. ಈ ಹಿಂದೆ ಸ್ನೇಹಿತರ ಜೊತೆಗೂಡಿ “ಜಾನ್‌ ಜಾನಿ ಜನಾರ್ಧನ್‌’ ಚಿತ್ರವನ್ನು ನಿರ್ದೇಶಿಸಿದ್ದ ಅವರು, ಈಗ ಸ್ವತಂತ್ರವಾಗಿ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಅರ್ಜುನ್‌ ಜನ್ಯಾ ಸಂಗೀತ, ಟಿ. ಅಳಗನ್‌ ಛಾಯಾಗ್ರಹಣವಿದೆ.

Advertisement

Udayavani is now on Telegram. Click here to join our channel and stay updated with the latest news.

Next