ಶ್ರೀನಿವಾಸಪುರ: ಮಕ್ಕಳಿಗೆ ಅಕ್ಷರ ಕಲಿಸುವಶಾಲಾ ಕಾಲೇಜುಗಳು ದೇಗುಲವಿದ್ದಂತೆ. ಇಂತಹ ಪವಿತ್ರವಾದ ಸ್ಥಳದಲ್ಲಿ ಕೆಲ ಕುಡುಕರು ಬಾರ್‌ಮಾಡಿಕೊಂಡಿದ್ದಾರೆ.
ರಾತ್ರಿ ವೇಳೆ ಮದ್ಯ ಸೇವಿಸಿ,ತಿಂಡಿ ತಿಂದು ಬಾಟಲ್, ಪ್ಲಾಸ್ಟಿಕ್ ಪೇಪರ್ ಅನ್ನುಎಸೆದು ಹೋಗುತ್ತಿದ್ದಾರೆ.ಪಟ್ಟಣದ ಎಂ.ಜಿ.ರಸ್ತೆಗೆ ಹೊಂದಿಕೊಂಡ ಸರ್ಕಾರಿ ಬಾಲಕಿಯರ ಕಾಲೇಜು ಆವರಣದಲ್ಲಿಇಂತಹ ಚಟುವಟಿಕೆ ನಡೆಯುತ್ತಿದ್ದು, ಸಂಬಂಧಪಟ್ಟ ಮೇಲಧಿಕಾರಿಗಳು, ಪೊಲೀಸರು, ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ.
ಈ ಕಾಲೇಜುಆವರಣದಲ್ಲಿ ಕನ್ನಡ ಮಾಧ್ಯಮಿಕ ಮಾದರಿಹಿರಿಯ ಪ್ರಾಥಮಿಕ ಶಾಲೆ, ಬಿಇಒ, ಕ್ಷೇತ್ರ ಸಮನ್ವಯಾಧಿಕಾರಿಗಳ ಕಚೇರಿ ಇದ್ದು, ಅಧಿಕಾರಿಗಳು,ವಿದ್ಯಾರ್ಥಿಗಳು ತಮ್ಮ ದೈನಂದಿನ ಕೆಲಸಗಳಿಗೆಹಾಜರಾಗುತ್ತಾರೆ.ಕೆಲಸದ ಅವಧಿ ಹೊರತುಪಡಿಸಿ ರಜಾ ದಿನ,ರಾತ್ರಿ ವೇಳೆ ಕೆಲವು ಕುಡುಕರು ಆವರಣದಲ್ಲಿಮದ್ಯ ಸೇವಿಸಿ ಬಾಟಲ್ ಎಸೆದು ಹೋಗುತ್ತಾರೆ.
ಕಾಲೇಜು ಆವರಣಕ್ಕೆ ಸೂಕ್ತ ಕಾಂಪೌಂಡ್ ವ್ಯವಸ್ಥೆ ಇಲ್ಲ. ಗೇಟ್ ಅಳವಡಿಸಿದ್ದರೂ, ಕಟ್ಟಡಗಳ ಹಿಂದೆಕಾಂಪೌಂಡ್‌ಇಲ್ಲ.ಹೀಗಾಗಿ ಕಾಲೇಜುಆವರಣಕ್ಕೆಸುಲಭವಾಗಿ ಬರಬಹುದಾಗಿದೆ.ನಾಯಿ ಕಾಟ: ಹೋಟೆಲ್, ಅಂಗಡಿಯಿಂದಕಟ್ಟಿಸಿಕೊಂಡು ಬಂದ ತಿಂಡಿ ತಿನಿಸನ್ನು ಇಲ್ಲಿಯೇತಿಂದು, ಉಳಿದದ್ದು ಹಾಗೂ ಪೇಪರ್ ಅನ್ನುಇಲ್ಲಿಯೇ ಎಸೆದು ಹೋಗುತ್ತಾರೆ.
ಕೆಲವೊಮ್ಮೆಮೂಳೆ, ಮಾಂಸದ ತುಣುಕು ತಿನ್ನಲು ನಾಯಿಗಳು ಕಾಲೇಜು ಆವರಣಕ್ಕೆ ಬರುತ್ತಿವೆ. ಇದರಿಂದವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಕೂಡಲೇಪೊಲೀಸರು, ಶಿಕ್ಷಣ ಇಲಾಖೆ ಮೇಲಧಿಕಾರಿಗಳುಕ್ರಮಕೈಗೊಳ್ಳಬೇಕಿದೆ.
ಕೆ.ವಿ.ನಾಗರಾಜ್