Advertisement

ಕಾಲೇಜು ಬಸ್-ಆಡು ಸಾಗಾಟ ಲಾರಿ ಢಿಕ್ಕಿ : 10ಕ್ಕೂ ಹೆಚ್ಚು ಆಡುಗಳ ಸಾವು

07:11 PM Sep 06, 2019 | Team Udayavani |

ವಿಟ್ಲ : ಮಹಿಳಾ ಕಾಲೇಜು ಬಸ್ ಹಾಗೂ ಆಡು ಸಾಗಾಟ ಮಾಡುತ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿ ಹಲವು ಆಡುಗಳು ಸ್ಥಳದಲ್ಲಿ ಮೃತಪಟ್ಟ ಘಟನೆ ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿ ನಡೆದಿದೆ. ಎರಡೂ ವಾಹನಗಳ ಚಾಲಕರು ಸಣ್ಣ ಪುಟ್ಟ ಗಾಯಗೊಂಡಿದ್ದಾರೆ.

Advertisement

ಪುತ್ತೂರಿನ ಕುಂಬ್ರದ ಮರ್ಕಝ್ ಹುದಾ ಮಹಿಳಾ ಕಾಲೇಜಿಗೆ ಸೇರಿದ ಬಸ್ ಶಾಲಾ ವಿದ್ಯಾರ್ಥಿನಿಗಳನ್ನು ಮನೆಗೆ ಕರೆದೊಯ್ಯುತ್ತಿದ್ದಾಗ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಮಿತ್ತೂರು ಎಂಬಲ್ಲಿ ಮಂಗಳೂರಿನಿಂದ ಪುತ್ತೂರು ಕಡೆಗೆ ಆಡು ಮತ್ತು ಕುರಿಗಳನ್ನು ಸಾಗಾಟ ಮಾಡುತ್ತಿದ್ದ ಲಾರಿ ಮುಖಾಮುಖಿ ಢಿಕ್ಕಿ ಹೊಡೆದಿದೆ.

ಲಾರಿ ರಸ್ತೆಗೆ ಉರುಳಿದೆ. ಅದರಲ್ಲಿದ್ದ 10ಕ್ಕಿಂತಲೂ ಅಧಿಕ ಆಡು ಮತ್ತು ಕುರಿಗಳು ಮೃತಪಟ್ಟಿವೆ. ಕಾಲೇಜ್ ಬಸ್ಸಿನ ಮುಂಭಾಗ ಜಖಂಗೊಂಡಿದ್ದು, ವಿದ್ಯಾರ್ಥಿಗಳು ಎಲ್ಲರೂ ಪಾರಾಗಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next