ರಾಮನಗರ: ಬೆಂಗಳೂರು, ಮೈಸೂರು ರಾಷ್ಟ್ರೀಯ ಹೆದ್ದಾರಿ ಯಲ್ಲಿ ದಂಡಾಸ್ತ್ರ ಪ್ರಯೋಗಿಸಲು ಆರಂಭಿಸಿದ ಜಿಲ್ಲಾ ಪೊಲೀಸ್ ಇಲಾಖೆಗೆ ಭರ್ಜರಿ ದಂಡದ ಮೊತ್ತ ಸಂಗ್ರಹ ವಾಗಿದೆ. ಹೌದು.., ಇಲಾಖೆಯ ಮೂಲಗಳು ಬಹಿರಂಗ ಪಡಿಸಿರುವ ಅಂಕಿ ಅಂಶಗಳನ್ನು ನೋಡಿದಾಗ ಈ ಸಂಗತಿ ಸ್ಪಷ್ಟವಾಗುತ್ತದೆ, ಕಳೆದ ಜನವರಿಯಿಂದ ಜಿಲ್ಲೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ 1ಕೋಟಿ ರೂ.ಗಳಷ್ಟು ದಂಡ ವಸೂಲಾಗಿದ್ದು, ಇದರಲ್ಲಿ ಕಳೆದ 2 ತಿಂಗಳ ಪ್ರಕರಣಗಳು ಸಿಂಹಪಾಲು ಪಡೆದಿವೆ.
ಬೆಂಗಳೂರು, ಮೈಸೂರು ಆಕ್ಸೆಸ್ ಕಂಟ್ರೋಲ್ ಹೆ„ವೆಯಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಾರಿಗೆ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲು ಜೂನ್ ತಿಂಗಳಿಂದ ಕ್ರಮ ಕೈಗೊಂಡಿತ್ತು. ಈ 2 ತಿಂಗಳಲ್ಲಿ ವರ್ಷದ ಶೇ.80ರಷ್ಟು ದಂಡ ಸಂಗ್ರಹವಾಗಿದೆ. ಇದರೊಂದಿಗೆ ರಾಷ್ಟ್ರೀಯ ಹೆದ್ದಾರಿಯ ಷಟ್‌ಪಥ ರಸ್ತೆಯಲ್ಲಿ ದೊಡ್ಡಮೊತ್ತದ ದಂಡ ಸಂಗ್ರಹವಾಗಿದೆ.
ಎರಡು ತಿಂಗಳಲ್ಲಿ ಅತಿ ಹೆಚ್ಚು ಪ್ರಕರಣ: ರಾಮನಗರ ಜಿಲ್ಲಾ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಸಂಬಂಧ ಪ್ರತಿದಿನ ಜಿಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಂಡ ವಸೂಲಿ ಮಾಡುವುದು ಸಾಮಾನ್ಯ. ಈಬಗ್ಗೆ ಸಾಕಷ್ಟು ಪರ ವಿರೋಧ ಚರ್ಚೆ ನಡೆಯುತ್ತಿದ್ದು, ಕಳೆದ ಕೆಡಿಪಿ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ ನಿಮಗೆ ಟಾಗೇìಟ್ ಕೊಟ್ಟಿದ್ದಾರೆ ದಂಡ ಹಾಕುತ್ತೀರಾ ಎಂದು ಈ ಬಗ್ಗೆ ಪ್ರಸ್ತಾಪಿಸಿದ್ದರು. ಜ.ಜುಲೈವರೆಗೆ ಜಿಲ್ಲಾ ಪೊಲೀಸ್ ಇಲಾಖೆ 14011 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದ್ದು, 10861000ರೂ. ದಂಡವನ್ನು ಸಂಗ್ರಹಿಸಿದೆ. ಇದರಲ್ಲಿ 10483 ಪ್ರಕರಣ ಗಳು ಜೂನ್ ಮತ್ತು ಜುಲೈ ತಿಂಗ ಳಲ್ಲಿ ದಾಖಲಾಗಿದ್ದು, ಈ ಎರಡೂ ತಿಂಗಳಲ್ಲಿ 80 ಲಕ್ಷ ರೂ. ಗಳಷ್ಟು ದಂಡದ ಮೊತ್ತ ಸಂಗ್ರಹಣೆಯಾಗಿದೆ.
ಪ್ರಯಾಣಿಕರ ನಿಶೆ ಇಳಿಸಿರುವ ಪೊಲೀಸರು: ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳಲ್ಲಿ ಕುಡಿದು ವಾಹನ ಚಲಿಸುವವರ ವಿರುದ್ಧ ಪ್ರಕರಣ ದಾಖಲಿಸುವುದು ಹೆಚ್ಚಾಗಿದೆ. ಇದುವರೆಗೆ 356 ಕುಡಿದು ವಾಹನ ಚಲಿಸುವವರ ವಿರುದ್ಧ ಪ್ರಕರಣ ದಾಖ ಲಿಸಿರುವ 34.10 ಲಕ್ಷ ರೂ. ದಂಡವನ್ನು ಸಂಗ್ರಹಿಸಿದೆ.
ಆದರೆ, ಜೂನ್ ತಿಂಗಳಲ್ಲಿ 284 ಪ್ರಕರಣಗಳನ್ನು ದಾಖಲಿಸಿದ್ದು 26.90 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಇನ್ನು ಜುಲೈ ತಿಂಗಳಲ್ಲಿ ಈ ಸಂಖ್ಯೆ ಕಡಿಮೆಯಾಗಿದ್ದ 44 ಪ್ರಕರಣಗಳನ್ನು ದಾಖಲಿಸಿ 4.40 ಲಕ್ಷ ರೂ. ದಂw ವಸೂಲಿ ಮಾಡಲಾಗಿದೆ.
ಹೆದ್ದಾರಿಯಲ್ಲಿ ಅಪಘಾತಗಳ ಪ್ರಮಾಣ ಇಳಿಕೆ:
ಕಾಕತಾಳೀಯ ಎಂಬಂತೆ ಪೊಲೀಸ್ ಇಲಾಖೆ ದಶಪಥ ಹೆದ್ದಾರಿಗೆ ಇಳಿದು ದಂಡವಿಧಿಸಲು ಪ್ರಾರಂಭಿಸಿದ ಬಳಿಕ ಹೆದ್ದಾರಿಯಲ್ಲಿ ಸಂಭವಿಸುವ ಅಪಘಾತಗಳ ಪ್ರಮಾಣ ಕೊಂಚ ತಗ್ಗಿದೆ. ಕಳೆದ ಆಗಸ್ಟ್‌ನಿಂದ ಜುಲೈವರೆಗೆ ಜಿಲ್ಲೆಯ ವ್ಯಾಪ್ತಿಯಲ್ಲಿನ ದಶ ಪಥ ಹೆದ್ದಾರಿಯಲ್ಲಿ 456 ಅಪಘಾತಗಳು ಸಂಭವಿಸಿದ್ದು, 147 ಮಂದಿ ಸಾವಿಗೀಡಾಗಿದ್ದು, 485 ಮಂದಿ ಗಾಯಗೊಂಡಿ ದ್ದಾರೆ. ಕಳೆದ ಜೂ.20ರಿಂದ ಪೊಲೀಸ್ ಇಲಾಖೆ ಗೆದ್ದಾರಿಯಲ್ಲಿ ಸಂಚಾರ ನಿಯಮ ಪಾಲನೆಗೆ ಮುಂದಾಗಿದ್ದು, ಜುಲೈ ತಿಂಗಳಲ್ಲಿ ಕಟ್ಟನಿಟ್ಟಾಗಿ ಸಂಚಾರ ನಿಯಮಗಳಿಗೆ ಚಾಲನೆ ನೀಡಲಾಯಿತು. ಜುಲೈ ತಿಂಗಳಲ್ಲಿ 27 ರಸ್ತೆ ಅಪಘಾತಗಳು ಸಂಭವಿಸಿದ್ದು 3 ಮಂದಿ ಸಾವಿ ಗೀಡಾಗಿದ್ದು, 40 ಮಂದಿ ಗಾಯಗೊಂಡಿದ್ದಾರೆ. 10 ತಿಂಗಳ ಅಪಘಾತದ ದಾಖಲೆಯನ್ನು ಪರಿಶೀಲಿಸಿದಾಗ ಇದೇ ಮೊದಲ ಬಾರಿಗೆ ಸಾವಿನ ಪ್ರಮಾಣ ಸಿಂಗಲ್ ಡಿಜಿಟ್‌ಗೆ ಇಳಿದಿದೆ.
-ಸು.ನಾ.ನಂದಕುಮಾರ್