Advertisement
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಇತ್ತೀಚೆಗೆ ಹಮ್ಮಿಕೊಂಡ ತುಳುನಾಡಿನ ಪ್ರಮುಖ ದೇವಸ್ಥಾನ, ದೈವಸ್ಥಾನಗಳಲ್ಲಿ ತುಳು ಪುಸ್ತಕ ಪ್ರದರ್ಶನ ಮತ್ತು ಮಾರಾಟ ಅಭಿಯಾನಕ್ಕೆ ಮಂಗಳಾದೇವಿ ದೇವಸ್ಥಾನದಲ್ಲಿ ದೀಪ ಬೆಳಗಿಸಿ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚೆಗಿನ ವರ್ಷಗಳಲ್ಲಿ ಅಕಾಡೆಮಿ ವತಿಯಿಂದ ಅನೇಕ ಮೌಲಿಕ ಕಾರ್ಯಕ್ರಮಗಳು ಜರಗುತ್ತಿದ್ದು ತುಳುಭಾಷೆ – ಸಂಸ್ಕೃತಿಯ ಅಭಿವೃದ್ಧಿಗಾಗಿ ವಿಶೇಷ ಪ್ರಯತ್ನಗಳಾಗುತ್ತಿವೆ. ಜಗತ್ತಿನಾದ್ಯಂತ ನೆಲೆಸಿರುವ ತುಳುವರು ತಮ್ಮ ಸಂಸ್ಕೃತಿ ಉಳಿವಿಗಾಗಿ ಕೊಡುಗೆ ನೀಡುತ್ತಿದ್ದಾರೆ. ತುಳು ಜನರು ಎಲ್ಲರೊಂದಿಗೆ ಬೆರೆತು ಎಲ್ಲ ಭಾಷೆಗಳನ್ನು ಕಲಿತು ಸರ್ವರನ್ನೂ ಪ್ರೀತಿಸುವ ಗುಣ ಹೊಂದಿದ್ದಾರೆ ಎಂದು ತಿಳಿಸಿದರು. ಅಕಾಡೆಮಿಯು ತುಳು ಗ್ರಂಥಗಳ ಪ್ರಕಟನೆಗೆ ವಿಶೇಷ ಅನುಕೂಲ ಕಲ್ಪಿಸುತ್ತಿದೆ. ಇದರ ಪ್ರಯೋಜನ ಪ್ರತಿಯೊಬ್ಬ ತುಳುವರಿಗೂ ದೊರಕಬೇಕೆಂಬ ಪ್ರಯತ್ನದ ಭಾಗವಾಗಿ ತುಳು ಪುಸ್ತಕಗಳ ಮಾರಾಟ ಅಭಿಯಾನ ಕೈಗೊಂಡಿದೆ. 12 ದಿನಗಳ ಕಾಲ ಮಂಗಳಾದೇವಿಯಲ್ಲಿ ಮಾರಾಟ ಮಳಿಗೆ ಇರುವುದು. ತುಳು ಪುಸ್ತಕಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ ಎಂದು ಅವರು ನುಡಿದರು.
Related Articles
Advertisement
ತುಳು ಅಳವಡಿಸಿ ಪ್ರೋತ್ಸಾಹ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎ.ಸಿ. ಭಂಡಾರಿ ಮಾತನಾಡಿ, ರಾಜ್ಯ ಸರಕಾರ ತುಳುಭಾಷೆಗಾಗಿ ಅಕಾಡೆಮಿ ಮಾನ್ಯತೆ ನೀಡಿದೆ. ಶಾಲೆ ಗಳಲ್ಲಿ ತುಳು ಕಲಿಕೆಗಾಗಿ ಅವಕಾಶ ಕಲ್ಪಿಸಿದೆ. ಮಂಗಳೂರು ವಿಶ್ವವಿದ್ಯಾಲಯದ ಮೂಲಕ ಪದವಿ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ತುಳುವನ್ನು ಅಳವಡಿಸಿ ಪ್ರೋತ್ಸಾಹ ನೀಡಲಾಗುತ್ತಿದೆ. ತುಳು ಭಾಷೆ – ಸಂಸ್ಕೃತಿಯ ಬಗ್ಗೆ ಅಧ್ಯಯನಕಾರರು ಹೆಚ್ಚುತ್ತಿದ್ದಾರೆ ಎಂದರು.