Advertisement

ಕುಸಿದುಬಿದ್ದ ಮನೆ ಗೋಡೆ: ಪ್ರಾಣಾಪಾಯದಿಂದ ಪಾರಾದ ಬಾಣಂತಿ –ಹಸುಗೂಸು

09:19 PM Sep 01, 2022 | Team Udayavani |

ನಂಜನಗೂಡು: ನಿರಂತರ ಮಳೆಗೆ ಶಿಥಿಲಗೊಂಡ ಪಕ್ಕದಮನೆ ಗೋಡೆ ಕುಸಿದು ಬಿದ್ದ ಪರಿಣಾಮ ಕೋಣೆಯಲ್ಲಿದ್ದ ಬಾಣಂತಿ ಮತ್ತು ಹಸುಗೂಸು ಅದೃಷ್ಟವಶಾತ್ ಪಾರಾದ ಘಟನೆ  ನಂಜನಗೂಡು ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ಗ್ರಾಮದ ಚಿಕ್ಕಮಂಚಯ್ಯ ಎಂಬುವರ ಹಳೆಯ ಮನೆಯ ಮಣ್ಣಿನ ಗೋಡೆ   ಶಿಥಿಲಗೊಂಡಿತ್ತು. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಪಕ್ಕದ ಚೆಲುವ ಎಂಬುವರಿಗೆ ಸೇರಿದ ಮನೆ ಮೇಲೆ ಕುಸಿದು ಬಿದ್ದಿದೆ. ಕೋಣೆಯಲ್ಲಿದ್ದ ಬಾಣಂತಿ ಗೀತಾ ಮತ್ತು ಎರಡು ತಿಂಗಳ ಹಸುಕೂಸು ಹೊರಗೆ ಬಂದು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮನೆಯ ಪಕ್ಕದ ಉಳಿದ ಮೂರು ಮನೆ ಗೋಡೆಗಳಿಗ ಬಿರುಕು ಬಿಟ್ಟಿವೆ.

ಇದನ್ನೂ ಓದಿ:ಸಾರ್ವಜನಿಕರೆದುರೇ ಗುಂಡಿಕ್ಕಿ ಬಿಜೆಪಿ ಮುಖಂಡನ ಬರ್ಬರ ಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next