Advertisement

UV Fusion: ವಯಸ್ಸು ಹೆಸರಿಗಷ್ಟೇ ಜೀವನಕ್ಕೆ ಅಲ್ಲ

02:42 PM Sep 17, 2024 | Team Udayavani |

ಅದೊಂದು ಮುಂಗಾರಿನ ಜಿಟಿ ಜಿಟಿ ಮಳೆಗಾಲದ ಸಮಯ ನಾನು ಕಾಲೇಜ್‌ ಮುಗಿಸಿಕೊಂಡು ಸಂಜೆಯ ಸುಮಾರಿಗೆ ಬಸ್ಸಿಗಾಗಿ ಕಾಯುತ್ತಾ ಬಸ್‌ ಸ್ಟಾಂಡಿನಲ್ಲಿ ನಿಂತಿದ್ದೆ. ಮಳೆಗಾಲ ಆದರೆ ಹೆದರಿಕೆ ಹುಟ್ಟಿಸುವ ಮಳೆಯಲ್ಲ, ಅದು ಮನಸ್ಸಿನ ಕಸಿವಿಸಿಗೆ ಕಾರಣವಾಗುವ ಜೆಡಿಯ ಮಳೆ. ಬಹಳ ಹೊತ್ತು ಕಳೆದ ಅನಂತರ ಬೆಟಗೇರಿ ಊರು ಬೋರ್ಡಿನ ಒಂದು ಬಸ್‌ ಬಂದಿತು.

Advertisement

ನಾನು ಬಸ್‌ಹತ್ತಿ ಸೀಟಿನಲ್ಲಿ ಕುಳಿತೆ, ಬಸ್‌ ರಶ್‌ ಇರುತ್ತದೆ ಅಂದುಕೊಂಡ ನನಗೆ ಅದೃಷ್ಟವಶಾತ ಬಸ್ಸಿನಲ್ಲಿ ಸೀಟು ಕೂಡ ಸಿಕ್ಕಿತು ಮನಸ್ಸಿನ ಗೊಂದಲಕ್ಕೆ ತೆರೆ ಬಿತ್ತು. ಕುಳಿತ ಮೇಲೆ ನನ್ನ ಬಾಜು ಯಾರು ಬರಬಹುದು ಎಂದು ಒಂದು ಯೋಚನೆ ಇತ್ತು , ಅದರೆ 20 ವರ್ಲ್ಡ್ ಕಪ್‌ ಮ್ಯಾಚ್‌ ಇದ್ದ ಕಾರಣ ನನ್ನ ಗಮನ ಅಲ್ಲಿಗೆ ಹರಿದು ಇಂಡಿಯಾ ಮತ್ತು ಆಸ್ಟ್ರೇಲಿಯಾ ಅವತ್ತಿನ್‌ ಹಣಾಹಣಿ, ಮೊಬೈಲ್‌ನಲ್ಲಿ ಮ್ಯಾಚ್‌ ಸ್ಟಾರ್ಟ್‌ ಆಗುವುದನ್ನೇ ನೋಡುವ ತವಕದಲ್ಲಿ ನಾನಿದ್ದೆ, ಮತ್ತೆ ಏನೊ ನೆನಪ ಆದಂತೆ ಆಗಿ ನನ್ನ ಬಾಜು ಯಾರು ಬಂದರು ಅಂತ ಕಣ್ಣು ಹಾಯಿಸಿದೆ.

80ರ ಇಳಿವಯಸ್ಸಿನ ಯುವತಿ ಎಂದರೆ ತಪ್ಪಾಗಲಾರದು. ಬಾಯಲ್ಲಿ ಹಲ್ಲಲಿಲ್ಲ ಆದರೂ ಕೂಡ ಮುದುಕಿ ಗಡಸುತನದಲ್ಲಿ ಕಮ್ಮಿಯಿಲ್ಲ. ನನಗೆ ತುಂಬಾ ಖುಷಿ ಈ ಹೊತ್ತಿನ್ಯಾಗ, ಈ ಇಳಿವಯಸ್ಸಿನಲ್ಲೂ ಮನೆಯಲ್ಲಿ ಇರಬೇಕಾದ ಈ ಯುವತಿ ಸಂತಿ ಮಾಡಿ ಚಿಲಾ ಹೊತ್ತು ಬಸ್ಸಿನಲ್ಲಿ ಬಂದು ಕುಂತಿದ್ದಾಳೆ.

ಅವಳು ಮಾರ್ಕೆಟ್‌ನಲ್ಲಿ ಅದು ಯಾವ ಕೆಲಸ ಮಾಡಿದ್ದಳ್ಳೋ ಗೊತ್ತಿಲ್ಲ, ಸಂತಿಗೆ ಅಷ್ಟ ಬಂದಿದ್ದಳ್ಳೋ ಗೊತ್ತಿಲ್ಲ. ಬಸ್‌ ಚಲನೆಯಾಗಿ ಐದಾರು ನಿಮಿಷ ಆಗಿರಬಹುದು ಒಂದು ಶೆಲ್‌ ಫೋನ್‌ ರಿಂಗ್‌ ಆಯಿತು ನಂಗೆ ಆಶ್ಚರ್ಯ ಯಲ್ಲಿ ಇದು ಯಾರ ಫೋನು ಎಂದು ಅದು ನನ್ನ ಬಾಜು ಇದ್ದ ಎಪ್ಪತ್ತರ ಹರೆಯದ ಯುವತಿಯ ಕಡೆ ನೋಡಿದಾಗ ಓ ಅದು ಅವಳದೇ, ಎದೆಯ ಮೇಲೆ ಇರುವ ಪ್ಯಾಕೆಟನ್ನು ತೆಗೆದು ಫೋನ್‌ ಕಾಲ್‌ ಎತ್ತಿ ಅಲೋ ಅಂದಳು ಅದು ಅವಳ ಮೊಮ್ಮಗನ ಕಾಲ್‌ಆಗಿತ್ತು.

ನನಗೆ ಅವನ್‌ ಧ್ವನಿ ಕೆಳಿಸಲಿಲ್ಲ ಪ್ರತಿಯಾಗಿ ವೃದ್ಧ ಯುವತಿಯ ಮಾತನಾಡಿದ ರೀತಿಯ ಮೇಲೆ ತಿಳಿಯಿತು ಆಕೆಯ ಮೊಮ್ಮಗನೆಂದು. ಬೇಡ ಪಾ ಯಾಕೆ ಬರ್ತೀಯಾ ಸುಮ್ನೆà ನಾ ಬರ್ತೀನಿ, ಒಂದೇ ಕೈಚೀಲ ಇದೆ ಕತ್ತಲಲ್ಲಿ ಯಾಕ್‌ ನಾ ಬರ್ತೀನಿ ಅಂತ ಅಂದಳು, ನನಗೆ ಅಲ್ಲಿ ಒಂದು ವಿಷಯ ತಿಳಿಯಿತು. ಅವನು ಕೇಳಿದ ಅಜ್ಜಿ ನಾ ಬರಲೇ ನಿನ್ನ ಕರದ್ಯೋಯಲು ಅಂತ ಅಜ್ಜಿ ಮೊಮ್ಮಗನ ಕಾಳಜಿ ಹಾಗೂ ಆಕೆಯ ಆತ್ಮಸ್ಥೆçರ್ಯ ಮೆಚ್ಚಲೇಬೇಕು. ಇದು ಕಲಿಯಬೇಕಾದ ಪಾಠ ವಯಸ್ಸು ಹೆಸರಿಗಷ್ಟೇ ಜೀವನಕ್ಕೆ ಅಲ್ಲ.

Advertisement

ಸುನಿಲ್‌ ತೇಗೂರ

ವಿವಿ ಧಾರವಾಡ

Advertisement

Udayavani is now on Telegram. Click here to join our channel and stay updated with the latest news.