Advertisement
ಗುರುವಾರ ಬೆಳಗ್ಗೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸಿ ಕೊಠಡಿ ಸ್ವಚ್ಛಗೊಳಿಸುವಾಗ ಛಾವಣಿ ಕುಸಿದು ಬಿದ್ದಿದ್ದು, ಒಬ್ಬ ವಿದ್ಯಾರ್ಥಿಯ ಬೆರಳಿಗೆ ಸಣ್ಣ ಗಾಯವಾಗಿದೆ. ಕಳೆದ ಸುಮಾರು 20 ವರ್ಷದಿಂದ ಶಾಲೆ ಕೊಠಡಿ ದುರಸ್ತಿ ಮಾಡಿಸಿ ಕೊಡುವಂತೆ ಹಲವು ಬಾರಿ ಶಿಕ್ಷಣ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಶಾಲೆ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಆರೋಪ ಮಾಡಿದ್ದಾರೆ.
Related Articles
Advertisement
ಮನವಿಗೆ ಸ್ಪಂದಿಸಿಲ್ಲ: ಶಾಲೆ ಛಾವಣಿ ಹಾಗೂ ಕಟ್ಟಡ ದುರಸ್ತಿ ಮಾಡುವಂತೆ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಸದಸ್ಯರು, ಪೋಷಕರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಛಾವಣಿ ಮರದ ತೀರು ಶಿಕ್ಷಕರೇ ರಿಪೇರಿ ಕೆಲಸ ಮಾಡಿಸಿದ್ದರು. ಆದರೂ ಗುರುವಾರ ಬೆಳಗ್ಗೆ ಶಾಲೆ ಕೊಠಡಿ ಛಾವಣಿ ಕುಸಿದಿದೆ.
ಮಕ್ಕಳನ್ನು ಶಾಲೆಗೆ ಕಳಿಸಲ್ಲ: ದೊಡ್ಡಪಾಳ್ಯದಲ್ಲಿ ಹಿಂದುಳಿದ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದು, ಕೂಲಿ ಕೆಲಸ ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂಬ ಆಸೆಯಿಂದ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೇ ಶಾಲೆಯೇ ಮಕ್ಕಳ ಪ್ರಾಣಕ್ಕೆ ಆಪತ್ತು ತರುತ್ತದೆ ಎಂಬ ಸತ್ಯ ತಿಳಿದ ಮಕ್ಕಳ ಪೋಷಕರು, ಮಕ್ಕಳು ಶಿಕ್ಷಣ
ಪಡೆಯದಿದ್ದರೂ ಪರವಾಗಿಲ್ಲ. ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ಮಕ್ಕಳನ್ನು ಶಾಲೆಗೆ ಕಳಿಸುವುದಿಲ್ಲ ಎಂಬ ಆಕ್ರೋಶ ವ್ಯಕ್ತಪಡಿಸಿದರು.