Advertisement

ಕುಸಿದು ಬಿದ್ದ ನೊರೆ ತಡೆ ಮೆಷ್‌

11:43 AM May 19, 2017 | |

ಮಹದೇವಪುರ: ವರ್ತೂರು ಕೆರೆಯಲ್ಲಿ ಉತ್ಪತ್ತಿಯಾಗುತ್ತಿದ್ದ ನೊರೆ ರಸ್ತೆಗೆ ಬಾರದಂತೆ ನಿರ್ಮಿಸಲಾಗಿದ್ದ ಕಬ್ಬಿಣದ ತಡೆ ಬುಧವಾರ ಸಂಜೆ ಬಿರುಗಾಳಿಗೆ ಕುಸಿದು ಬಿದ್ದಿದೆ. ಕೆರೆಯಲ್ಲಿ ವಿಷಯುಕ್ತ ಅಂಶ ಸೇರಿರುವುದರಿಂದ ನೋರೆ ಉತ್ಪತ್ತಿಯಾಗಿ ರಸ್ತೆಗೆಲ್ಲ ಹರಡುತ್ತಿತ್ತು. ಹೀಗಾಗಿ ವಾಹನ ಸವಾರರಿಗೆ ಭಾರಿ ತೊಂದರೆಯಾಗುತ್ತಿತ್ತು.

Advertisement

ಇದನ್ನು ತಡೆಯಲೆಂದು ಬಿಡಿಎ ಕೇವಲ 20 ದಿನಗಳ ಹಿಂದೆ 20 ಅಡಿ ಎತ್ತರದ ಕಬ್ಬಿಣದ ತಡೆ ನಿರ್ಮಿಸಿ ಮೆಷ್‌ ಹಾಕಿತ್ತು. ಆದರೆ, ಬುಧವಾರ ಸಂಜೆ ಉಂಟಾದ ಬಿರುಗಾಳಿಗೆ ಗಬ್ಬಿಣದ ತಡೆ ರಸ್ತೆಗೇ ಕುಸಿದು ಬಿದ್ದಿದೆ. ಹೀಗಾಗಿ ವರ್ತೂರು ಕೋಡಿ ಪ್ರದೇಶದಲ್ಲಿ ವಾಹನ ಸಂಚಾರಕ್ಕೆ ತೊಡಕುಂಟಾಯಿತು. 

ನಂತರ ಹಿಟಾಚಿ ಯಂತ್ರವನ್ನು ತಂದು ಕಬ್ಬಿಣದ ತಡೆಯನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ತೆರವು ಕಾರ್ಯಾಚರಣೆ ವೇಳೆ ವರ್ತೂರು ಕೋಡಿ ಸೇತುವೆಯ ತಡೆಗೋಡೆಗೆ ಹಾನಿಯಾಗಿದೆ. ಹೀಗಾಗಿ ವಾಹನ ಸವಾರರು ಭೀತಿಯಲ್ಲೇ ಸಂಚರಿಸುತ್ತಿದ್ಧಾರೆ. 

ಬೆಳ್ಳಂದೂರು ಕೋಡಿಯಲ್ಲೂ ಇದೆ ಮಾದರಿಯ ಕಬ್ಬಿಣದ ತಡೆ ನಿರ್ಮಿಸಲಾಗಿದ್ದು, ಮಳೆ ಗಾಳಿಗೆ ಯಾವ ಸಮಯದಲ್ಲಿ ಕುಸಿದು ಬೀಳುತ್ತದೆಯೋ ಎಂಬ ಆತಂಕ ಜನರಲ್ಲಿ ಮೀಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next