Advertisement
ಹೆದ್ದಾರಿ ಕಾಮಾಗಾರಿಗಾಗಿ ಗುಡ್ಡ ಕೊರೆಯಲಾಗಿದ್ದು, ಭಾರೀ ಮಳೆಯಿಂದಾಗಿ ಕುಸಿದು ಬಿದ್ದ ಪರಿಣಾಮ ಬೆಳಗ್ಗಿನಿಂದ ನೂರಾರು ವಾಹನ ಸವಾರರು ಸಂಚಾರ ಸಾಧ್ಯವಾಗದೆ ಪರದಾಡಬೇಕಾಯಿತು.
Related Articles
Advertisement
ಭಟ್ಕಳ ಕಡೆ ಯಿಂದ ಬರುತ್ತಿರುವ ಮತ್ತು ತೆರಳುತ್ತಿರುವ ಬಸ್‌ಗಳು ಸೇರಿದಂತೆ ನೂರಾರು ವಾಹನಗಳ ಸವಾರರು ಪರದಾಡಬೇಕಾಯಿತು.
ಉದಯವಾಣಿ ಅಪಾಯದ ಎಚ್ಚರಿಕೆ ನೀಡಿತ್ತು
ಜೂನ್ 5 ರಂದು ಉದಯವಾಣಿ ಈ ಬಗ್ಗೆ ವರದಿ ಪ್ರಕಟಿಸಿ ಅಪಾಯದ ಎಚ್ಚರಿಕೆ ನೀಡಿತ್ತು. ಅದೃಷ್ಟವಷಾತ್ ಬೆಳಗಿನ ಜಾವ ಗುಡ್ಡ ಕುಸಿದಿರುವ ಹಿನ್ನಲೆಯಲ್ಲಿ ಸಂಚಾರ ವಿರಳವಾಗಿದ್ದ ಕಾರಣ ಯಾವುದೇ ವಾಹನ ಸಿಲುಕಿಲ್ಲ.ಈ ಬಗ್ಗೆ ಸ್ಥಳೀಯರು ಹೋರಾಟ ನಡೆಸಿದ್ದು, ಕಾಮಾಗಾರಿ ಕಳಪೆ ಮಾಡಲಾಗಿದ್ದು,ಜಿಲ್ಲಾಡಳಿತದ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿ ಅಧಿಕಾರಿಗಳು ಬೇಜಾವಾಬ್ಧಾರಿತನ ತೋರಿದ್ದು ಹೀಗಾಗಿದೆ ಎಂದು ಆರೋಪಿಸಿದ್ದಾರೆ. ಹೆದ್ದಾರಿ ಕಾಮಗಾರಿಯ ಕುರಿತು ಹಲವರು ತೀವ್ರ ಅಸಮಧಾನ ತೋಡಿಕೊಂಡಿದ್ದಾರೆ.