Advertisement

ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ಸಹಕರಿಸಿ

11:15 AM Jul 01, 2019 | Suhan S |

ಜಾವಗಲ್: ಆಹಾರೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು ರೈತ ಬಾಂಧ‌ವರು ಸಹಕರಿಸಬೇಕೆಂದು ಅರಸೀಕೆರೆ ತಾಲೂಕು ಕೃಷಿ ಅಧಿಕಾರಿ ಕಾಂತರಾಜು ತಿಳಿಸಿದರು.

Advertisement

ಹಾಸನ ಜಿಲ್ಲಾ ಪಂಚಾಯಿತಿ, ಅರಸೀಕೆರೆ ತಾಲೂಕು ಆಡಳಿತ ಹಾಗೂ ಕೃಷಿ ಇಲಾಖೆ, ಜಾವಗಲ್ ಹೋಬಳಿ ರೈತ ಸಂಪರ್ಕ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮ 2019ರ ಅಂಗವಾಗಿ ಜಾವ ಗಲ್ ಹೋಬಳಿಯ ಜಾವಗಲ್ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಏರ್ಪಡಿಸಿದ್ದ ಸಮಗ್ರ ಕೃಷಿ ಮಾಹಿತಿ ರಥ ಸಂಚಾರ ಉದ್ಘಾಟನಾ ಸಮಾರಂಭ‌ದಲ್ಲಿ ಮಾತನಾಡಿದರು.

ಹೊಸ ತಾಂತ್ರಿಕತೆ ಅಳವಡಿಸಿಕೊಳ್ಳಿ: ತಾಂತ್ರಿಕ ಬೇಸಾಯಪದ್ದತಿ, ತಾಂತ್ರಿಕ ಉಪಕರಣಗಳ ಬಳಕೆ, ಸಾವಯುವ ಗೊಬ್ಬರ ಮತ್ತು ಕೊಟ್ಟಿಗೆ ಗೊಬ್ಬರ ಬಳಕೆ, ಮಳೆಯ ಪ್ರಮಾಣಕ್ಕೆ ಅನು ಗುಣವಾದ ಸಿರಿಧಾನ್ಯಬೆಳೆಯುವುದು, ಮಾಗಿ ಉಳಿಮೆ, ಇಳಿಜಾರಿಗೆ ಅಡ್ಡಲಾಗಿ ಉಳಿಮೆ, ಲಘು ಪೋಷಕಾಂಶಗಳ ಬಳಕೆ , ಮಣ್ಣು ಪರೀಕ್ಷೆ ಮತ್ತಿತರ ತಾಂತ್ರಿಕ ವಿಧಾನಗಳನ್ನು ಕೃಷಿಕರು ಅಳವಡಿಸಿಕೊಂಡು ಇರುವ ಕೃಷಿ ಪ್ರದೇಶ ದಲ್ಲಿಯೇ ಅಧಿಕ ಇಳುವರಿ ಪಡೆಯ ಬಹುದೆಂದು ಕೃಷಿಕರಿಗೆ ಸಲಹೆ ನೀಡಿದರು.

ಸರ್ಕಾರದ ಸೌಲಭ್ಯ ಸದ್ಬಳಕೆಯಾಗಲಿ: ರಥ ಸಂಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತ ನಾಡಿದ ನೇರ್ಲಿಗೆ‌ ತಾಪಂ ಸದಸ್ಯ ತಿಮ್ಮನಹಳ್ಳಿ ವಿಜಯಕುಮಾರ್‌ ಮಾತನಾಡಿ, ಸರ್ಕಾರವು ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ, ಹುದಿ-ಬದಿ, ಕೊಟ್ಟಿಗೆ ನಿರ್ಮಾಣ, ಪಾಲಿಹೌಸ್‌ ನಿರ್ಮಾಣ, ರಿಯಾಯಿತಿ ದರದಲ್ಲಿ ಬೀಜ, ಗೊಬ್ಬರ, ಕೃಷಿ ಉಪಕರಣಗಳನ್ನು ನೀಡುತ್ತಿದೆ. ಕೃಷಿಕರು ಸರ್ಕಾರದ ಸೌಲಭ‌್ಯಗಳನ್ನು ಪಡೆದು ಕೊಂಡು ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಉತ್ತಮಪಡಿಸಿಕೊಳ್ಳಬೇಕೆಂದರು.

ತಾಪಂ ಸದಸ್ಯ ಜೆ.ಕೆ.ಪ್ರಭಾಕರ್‌ ಮಾತನಾಡಿ, ಕಡಿಮೆ ನೀರಿನಲ್ಲಿ ಬೆಳೆಯುವ ಬೆಳೆಗಳಿಗೆ ಆದ್ಯತೆ ನೀಡಬೇಕು ಎಂದರು. ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸುಬ್ರಹ್ಮಣ್ಯ ಇಲಾಖೆ ವತಿಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಸಹಾಯಕ ಕೃಷಿ ಅಧಿಕಾರಿ ವೀರಭದ್ರಪ್ಪ, ಪಿಡಿಒ ಮಂಜುನಾಥ್‌, ತಾಲೂಕು ಆತ್ಮ ತಾಂತ್ರಿಕ ವ್ಯವಸ್ಥಾಪಕ ಗೋಮಟೇಶ ನಾಯ್ಕ, ರಂಜಿತಾ, ಲೆಕ್ಕ ಸಹಾಯಕ ಮಲ್ಲೇಶ್‌, ರೈತ ಅನುವುಗಾರಾದ ಹನುಮಂತೇಗೌಡ, ಜಗದೀಶ್‌, ಬಸವ ರಾಜು, ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next