Advertisement

ಅಪರಾಧ ನಿಯಂತ್ರಣಕ್ಕೆ ಸಹಕರಿಸಿ

10:21 AM Mar 11, 2019 | |

ಚಿತ್ರದುರ್ಗ: ಸಾರ್ವಜನಿಕರು ತಮ್ಮ ಆತ್ಮರಕ್ಷಣೆಗಾಗಿ ಬಂದೂಕು ತರಬೇತಿ ಪಡೆಯುವುದು ಅಗತ್ಯ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ಕೆ. ಅರುಣ್‌ ಹೇಳಿದರು. ಇಲ್ಲಿನ ಜಿಲ್ಲಾ ಪೊಲೀಸ್‌ ಕವಾಯತು ಮೈದಾನದಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆಯಿಂದ 10 ದಿನಗಳ ಕಾಲ ಏರ್ಪಡಿಸಿದ್ದ ನಾಗರಿಕ ಬಂದೂಕು ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ಸಾರ್ವಜನಿಕರು ಕಾನೂನು ಗೌರವಿಸಿದಲ್ಲಿ ಪೊಲೀಸರ ಬಗ್ಗೆ ಭಯಪಡುವ ಅಗತ್ಯವಿಲ್ಲ. ನಾವು ಕೂಡ ಸಮಾಜದ ಒಂದು ಭಾಗ. ಈ ತರಬೇತಿ ಕಾರ್ಯಾಗಾರವನ್ನು ಪ್ರತಿ ವರ್ಷ ಜಿಲ್ಲೆಯ ವಿವಿಧ ಭಾಗಗಳಲ್ಲಿ ಆಯೋಜಿಸಲಾಗುತ್ತಿದೆ ಎಂದರು.

ಕಳ್ಳತನ ಮತ್ತಿತರ ಅಪರಾಧ ಪ್ರಕರಣ ತಗ್ಗಿಸಲು ಸಾರ್ವಜನಿಕರು ಇಲಾಖೆಗೆ ಸಹಕರಿಸಬೇಕು. ಸರಿಯಾಗಿ ಸಂಚಾರಿ ನಿಯಮ ಪಾಲಿಸಬೇಕು. ಎಲ್ಲವನ್ನೂ ಪೊಲೀಸರೇ ಮಾಡಲು ಸಾಧ್ಯವಿಲ್ಲ. ಎಲ್ಲಿಯೇ ಅನ್ಯಾಯ ಕಂಡು ಬಂದರೂ ತಕ್ಷಣ ನಮಗೆ ತಿಳಿಸಿ. ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು.

ಎಸ್‌ಜೆಎಂ ಕಾಲೇಜಿನ ಸತ್ಯನಾರಾಯಣ ತಮ್ಮ ಅನುಭವ ಹಂಚಿಕೊಂಡು ಮಾತನಾಡಿ, ಪೊಲೀಸರಿಗೆ ಸಾರ್ವಜನಿಕರ ಸಹಾಯ ಬೇಕು ಎಂದರೆ ನಾವು ಸದಾ ಸಿದ್ಧ. ಪೊಲೀಸರೊಂದಿಗೆ ನಾವು ಕೈಜೋಡಿಸಿ ಸಮಾಜ ರಕ್ಷಣೆ ಮಾಡುತ್ತೇವೆ. ಈ ತರಬೇತಿಯಿಂದ ಪೊಲೀಸರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ಅವಕಾಶ ಸಿಕ್ಕಿತು. ಪ್ರತಿಯೊಬ್ಬರಿಗೂ ಬಂದೂಕು ತರಬೇತಿ ಅವಶ್ಯ. ನಮ್ಮ ಆತ್ಮರಕ್ಷಣೆ ಮಾಡಿಕೊಳ್ಳ ಲು ಆಯುಧ ಬಳಸುವವಿಧಾನ ಕಲಿತುಕೊಂಡ ಬಗ್ಗೆ ಸಂತೋಷವಿದೆ ಎಂದು ತಿಳಿಸಿದರು.
 
ಶಿಬಿರದಲ್ಲಿ 146 ಮಂದಿ ಪಾಲ್ಗೊಂಡು ತರಬೇತಿ ಪಡೆದುಕೊಂಡಿದ್ದಾರೆ. 6 ಮಂದಿ ವೈದ್ಯರು, ತಲಾ 40 ಮಂದಿ ಸರ್ಕಾರಿ ನೌಕರರು ಹಾಗೂ ರೈತರು, 25 ವಿದ್ಯಾರ್ಥಿಗಳು, 20 ಖಾಸಗಿ ನೌಕರರು, 15 ಮಂದಿ ವ್ಯಾಪಾರಸ್ಥರು ಸೇರಿದಂತೆ ಒಟ್ಟು 146 ಮಂದಿ ತರಬೇತಿ ಪಡೆದಿದ್ದಾರೆ ಪುರುಷರ ವಿಭಾಗದಲ್ಲಿ ನೂರ್‌ ಅಹಮ್ಮದ್‌ ಶರೀಫ್‌ ಪ್ರಥಮ, ಡಾ| ತಿಮ್ಮಾರೆಡ್ಡಿ ದ್ವಿತೀಯ. ರಘುವರ್ಮ ತೃತೀಯ ಸ್ಥಾನ ಪಡೆದುಕೊಂಡರು. ಮಹಿಳೆಯರ ವಿಭಾಗದಲ್ಲಿ ಎಂ.ಎಸ್‌. ಚೇತನಾ ಪ್ರಥಮ, ಮೊನಿಷಾ ದ್ವಿತೀಯ, ಎಚ್‌.ಎಸ್‌. ಸ್ಫೂರ್ತಿ ತೃತೀಯ ಸ್ಥಾನ ಗಳಿಸಿದರು.

ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಎಸ್‌.ಬಿ. ವಸ್ತ್ರಮಠ ಅವರು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿದರು. ಡಿವೈಎಸ್ಪಿ ವಿಜಯಕುಮಾರ್‌ ಸಂತೋಷ್‌, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್‌ ಉಪಾ ಧೀಕ್ಷಕ ಶ್ರೀನಿವಾಸ್‌, ಪೊಲೀಸ್‌ ನಿರೀಕ್ಷಕರಾದ ಎಚ್‌.ಬಿ. ಸೋಮಶೇಖರಪ್ಪ, ಕಿರಣ್‌ಕುಮಾರ್‌ ಇದ್ದರು. 

Advertisement

ತರಬೇತಿಯಿಂದ ಶಿಸ್ತು ಕಲಿತೆ
ಬಂದೂಕು ತರಬೇತಿಯ ಅನುಭವ ಹಂಚಿಕೊಂಡು ಮಾತನಾಡಿ, ಆತ್ಮರಕ್ಷಣೆಗೆ ಬಂದೂಕು ತರಬೇತಿ ಬಹಳ ಮುಖ್ಯ. ತರಬೇತಿ ಪಡೆದಿದ್ದು ಹೊಸ ಅನುಭವ ನೀಡಿದೆ. ಪೊಲೀಸರ ಬಗ್ಗೆ ಕುತೂಹಲವಿತ್ತು. ಕೇವಲ ಚಲನಚಿತ್ರಗಳಲ್ಲಿ ಪೊಲೀಸ್‌ ಠಾಣೆ ನೋಡಿದ್ದೆ. ಆದರೆ ನಿಜವಾದ ಪೊಲೀಸ್‌ ಠಾಣೆ ನೋಡಿದಾಗ ರೋಮಾಂಚಿತಳಾದೆ. ಈ ತರಬೇತಿಯಿಂದ ಶಿಸ್ತು ಕಲಿತುಕೊಂಡೆ ಎಂದು ಶಿಬಿರಾರ್ಥಿ ಡಾ| ಚೇತನಾ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next