Advertisement

ಕೋವಿಡ್-19 ಮುಕ್ತಕ್ಕೆ ಸಹಕರಿಸಿ

02:05 PM Apr 12, 2020 | mahesh |

ಗೌರಿಬಿದನೂರು: ಕೋವಿಡ್-19ಶೀಘ್ರದಲ್ಲೇ ಗೌರಿಬಿದನೂರು, ಚಿಕ್ಕಬಳ್ಳಾಪುರದಿಂದ ಮುಕ್ತಗೊಳಿಸಲು ಎಲ್ಲರೂ ಸಹಕರಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್‌ ಮನವಿ ಮಾಡಿದರು. ನಗರದ ತಾಪಂ ಸಾಮರ್ಥ್ಯ ಸೌಧದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ 12 ಕೋವಿಡ್-19 ಸೋಂಕಿತ ಪ್ರಕರಣಗಳು ಕೇವಲ 2 ಕುಟುಂಬದಲ್ಲಿ ಪತ್ತೆಯಾಗಿವೆ. ಸರ್ಕಾರವು ತೆಗೆದುಕೊಂಡು ಮಾರ್ಗ ಸೂಚಿಗಳು ಮತ್ತು ಕಾರ್ಯ ಬದ್ಧತೆಯಿಂದ 3ನೇ ಸ್ಥಾನದಲ್ಲಿದ್ದ ರಾಜ್ಯವು 13ನೇ ಸ್ಥಾನಕ್ಕೆ ತಲುಪಿದೆ. ರಾಜ್ಯದಲ್ಲಿ 207 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 30 ಮಂದಿ ಗುಣಮುಖರಾಗಿದ್ದಾರೆ. ಇದರಲ್ಲಿ ಪ್ರಸ್ತುತ ತಾಲೂಕಿನಲ್ಲಿ 8 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

Advertisement

ಸಭೆಯಲ್ಲಿ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ಜಿಲ್ಲಾಧಿಕಾರಿ ಆರ್‌.ಲತಾ, ಎಸ್ಪಿ ಮಿಥುನ್‌ ಕುಮಾರ್‌, ಸಿಇಒ ಬಿ.ಫೌಜಿಯಾ ತರನಮ…, ಉಪವಿಭಾಗಾಧಿಕಾರಿ ರಘುನಂದನ್‌, ಡಿವೈಎಸ್‌ಪಿ ರವಿಶಂಕರ್‌, ಕೋವಿಡ್‌-19 ವಿಶೇಷ ಅಧಿಕಾರಿ ಬಿ.ಎನ್‌.ವರಪ್ರಸಾದ ರೆಡ್ಡಿ, ತಹಶೀಲ್ದಾರ್‌ ಎಂ.ರಾಜಣ್ಣ, ಇಒ ಎನ್‌.ಮುನಿರಾಜು, ಆಯುಕ್ತ ಜಿ.ಎನ್‌. ಚಲಪತಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಚಿಮುಕಲ ಹಳ್ಳಿ ಪ್ರಕಾಶ್‌ ರೆಡ್ಡಿ, ಮಾಜಿ ಶಾಸಕಿ ಎನ್‌. ಜ್ಯೋತಿ ರೆಡ್ಡಿ, ಮುಖಂಡ ಎನ್‌.ಎಂ.ರವಿ ನಾರಾಯಣ ರೆಡ್ಡಿ, ಬಿ.ಜಿ.ವೇಣುಗೋಪಾಲ ರೆಡ್ಡಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next