Advertisement

ಏಡ್ಸ್‌ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಿ

02:57 PM Dec 02, 2017 | |

ರಾಯಚೂರು: ಬೀದಿ ನಾಟಕ, ಭಿತ್ತಿ ಪತ್ರ, ಮಾಧ್ಯಮಗಳ ಮೂಲಕ ಜನರಲ್ಲಿ ಏಡ್ಸ್‌ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಶರಾದ ಬೈಲೂರು ಶಂಕರ ರಾಮ ತಿಳಿಸಿದರು.

Advertisement

ನಗರದ ಡಿಸಿ ಕಚೇರಿ ಆವರಣದಲ್ಲಿ ವಿಶ್ವ ಏಡ್ಸ್‌ ವಿರೋಧಿ ದಿನದ ನಿಮಿತ್ತ ನನ್ನ ಆರೋಗ್ಯ ನನ್ನ ಹಕ್ಕು ಎಂಬ ಘೋಷಣೆಯೊಂದಿಗೆ ಹಮ್ಮಿಕೊಂಡ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ದೇಶದಲ್ಲಿ ಮುಕ್ತವಾದ ಲೈಂಗಿಕತೆಗೆ ಅವಕಾಶವಿಲ್ಲ. ಹೀಗಾಗಿ ಏಡ್ಸ್‌ ರೋಗದ ಬಗ್ಗೆ ಇಂದಿಗೂ ಜನರಲ್ಲಿ ಪೂರ್ಣ ಪ್ರಮಾಣದ ಅರಿವಿನ ಕೊರತೆಯಿದೆ. ಯುವ ಜನತೆ ವೈದ್ಯರ ಸಲಹೆ ಪಡೆದು ಏಡ್ಸ್‌ನಿಂದ ಉಂಟಾಗುವ ದುಷ್ಪರಿಣಾಮ ಹಾಗೂ ತಡೆಗಟ್ಟುವ ಕ್ರಮಗಳ ಬಗ್ಗೆ ಜನರಲ್ಲಿ ಬೆಳಕು ಚೆಲ್ಲುವ ಕಾರ್ಯ ಮಾಡಬೇಕು ಎಂದರು. 

ಏಡ್ಸ್‌ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ 8ನೇ ಸ್ಥಾನ ಪಡೆದಿದೆ. ಮುಂಬರುವ ದಿನಗಳಲ್ಲಿ ಏಡ್ಸ್‌ ಮುಕ್ತ ರಾಜ್ಯವನ್ನಾಗಿ ಮಾಡಲು ಸಮಾಜದ ಜನರು ಸಂಕಲ್ಪ ಮಾಡಬೇಕು. ಏಡ್ಸನಿಂದ ಬಳಲುವ ರೋಗಿಗಳಿಗೆ ಔಷಧೋಪಚಾರ ಒದಗಿಸಿ, ಅವರನ್ನು ಮುಖ್ಯವಾಹಿನಿಗೆ ತರಬೇಕು ಎಂದರು.

ಒಂದನೇ ಹೆಚ್ಚುವರಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ. ಮಹಾದೇವಯ್ಯ ಮಾತನಾಡಿ,
ಏಡ್ಸ್‌ ಯಾವ ರೀತಿ ಮಾರಕವಾಗುತ್ತದೆ ಎನ್ನುವ ಬಗ್ಗೆ ಜನರಿಗೆ ತಿಳಿಸಬೇಕು. ಅವರಿಗೆ ಸುಲಭಕ್ಕೆ ಅರ್ಥವಾಗುವಂಥ
ಮಾಧ್ಯಮ ಬಳಸಿಕೊಳ್ಳಬೇಕು. ಆ ಮೂಲಕ ಜನರಿಗೆ ಮುನ್ನೆಚ್ಚರಿಕೆ ಮೂಡಿಸಬೇಕು ಎಂದರು.

ಜಿಪಂ ಸಿಇಒ ಅಭಿರಾಂ ಜಿ. ಶಂಕರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಕೆ.ಎಸ್‌.ನಸೀರ್‌, ಜಿಲ್ಲಾ ಕ್ಷಯ ಮತ್ತು ಏಡ್ಸ್‌ ನಿಯಂತ್ರಣಾಧಿಕಾರಿ ಡಾ| ಸುರೇಂದ್ರಬಾಬು ಇತರರಿದ್ದರು.

Advertisement

ಏಡ್ಸ ರೋಗ ನಿರ್ಮೂಲನೆಗೆ ಎಲ್ಲರೂ ಪಣ ತೊಡಿ
ಸಿರವಾರ: ಎಚ್‌ಐವಿ, ಏಡ್ಸ್‌ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಪಣ ತೊಡಿ. ಎಚ್‌ಐವಿ ಪೀಡಿತರನ್ನು ಗೌರವಿಸಿ, ಮಾರಕ ರೋಗಗಳ ಬಗ್ಗೆ ಎಚ್ಚರಿಕೆ ಇರಲಿ ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಸುನೀಲ ಸರೋದೆ ಹೇಳಿದರು.

ಶುಕ್ರವಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಏಡ್ಸ್‌ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಎಚ್‌ಐವಿ ಏಡ್ಸ್‌ ಕುರಿತು ಸಂಪೂರ್ಣ ಮಾಹಿತಿ ಪಡೆದು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರೊಂದಿಗೆ ಸದೃಢ ಸಮಾಜ ಕಟ್ಟುವಂತೆ ಯುವ ಜನತೆಗೆ ಕರೆ ನೀಡಿದರು. ಯುವಜನತೆಗೆ ಎಚ್‌ಐವಿ ಹರಡದಂತೆ ಕ್ರಮ ತಿಳಿಸುವುದರ ಜೊತೆಗೆ ಸೋಂಕಿತರನ್ನು ಕಳಂಕ ತಾರತಮ್ಯದಿಂದ ನೋಡದೆ ಸಹಾನುಭೂತಿಯಿಂದ ಕಾಣಬೇಕು ಎಂದರು. ಕಾಲೇಜು ಪ್ರಾಚಾರ್ಯ ಕುಂಟೆಪ್ಪ, ಡಾ| ಕಾವ್ಯ, ಕೆ.ಎಸ್‌. ಶ್ರೀದೇವಿ, ಗೀತಾ, ಉಪನ್ಯಾಸಕ ಪದ್ಮರಾಜ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next