Advertisement
ಬೆಳ್ತಂಗಡಿ ಪ.ಪಂ. ವ್ಯಾಪ್ತಿಯಲ್ಲಿ ಇಂದಿರಾ ಕ್ಯಾಂಟೀನ್ ಅನುಷ್ಠಾನಕ್ಕೆ ಕಳೆದ 1 ವರ್ಷದ ಹಿಂದೆಯೇ ಕಾಮ ಗಾರಿ ಆರಂಭಗೊಂಡಿದ್ದು, ಅಂದಿನ ತಹಶೀಲ್ದಾರ್ ಮದನ್‌ಮೋಹನ್ ಸಿ. ನಿರ್ದೇಶನದಲ್ಲಿ ಭೂಮಿ ಸಮತಟ್ಟು ಕಾರ್ಯ ನಡೆದಿತ್ತು. ಆದರೆ ಒಂದು ವರ್ಷವಾದರೂ ಕ್ಯಾಂಟೀನ್ ಆರಂಭಕ್ಕೆ ಅಡಿಪಾಯ ಕೆಲಸ ಮಾತ್ರ ನಡೆದಿದೆ.
ಬೆಳ್ತಂಗಡಿ ಬಸ್ ನಿಲ್ದಾಣದ ಹಿಂಬದಿ ಪ್ರದೇಶದಲ್ಲಿ ಇಂದಿರಾ ಕ್ಯಾಂಟೀನ್ ಅನುಷ್ಠಾನದ ದೃಷ್ಟಿಯಿಂದ ಸ್ಥಳ ಸಮತಟ್ಟು ಮಾಡುವ ಕಾರ್ಯ ನಡೆಸಲಾಗಿತ್ತು. ಆದರೆ ಅಲ್ಲಿ ಸಾರ್ವಜನಿಕ ಶೌಚಾಲಯ ಇದೆ ಎಂಬ ಕಾರಣಕ್ಕೆ ಅಲ್ಲಿ ಕ್ಯಾಂಟೀನ್ ನಿರ್ಮಿಸಬಾರದು ಎಂದು ವಿರೋಧಗಳು ವ್ಯಕ್ತವಾಗಿದ್ದವು. ಬಳಿಕ ಬೆಳ್ತಂಗಡಿ ಮಿನಿ ವಿಧಾನಸೌಧದ ಸುತ್ತಮುತ್ತಲ ಪ್ರದೇಶದಲ್ಲಿ ಖಾಲಿ ಸ್ಥಳ ಇದೆಯೇ ಎಂದು ಪರಿಶೀಲನೆ ಕಾರ್ಯವೂ ನಡೆದಿತ್ತು. ಅಂತಿಮವಾಗಿ ಜಿಲ್ಲಾಧಿಕಾರಿ ಪ್ರಾರಂಭದಲ್ಲೇ ಗುರುತಿಸಲಾದ ಸ್ಥಳದಲ್ಲೇ ಕ್ಯಾಂಟೀನ್ ನಿರ್ಮಿಸುವುದಕ್ಕೆ ಸೂಚನೆ ನೀಡಿದ್ದರು. ಕಾಮಗಾರಿಯೂ ಆರಂಭ
ರಾಜ್ಯದ ಎಲ್ಲ ಕಡೆಗಳಲ್ಲೂ ಇಂದಿರಾ ಕ್ಯಾಂಟೀನ್ ಅನುಷ್ಠಾನ ಕಾರ್ಯ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯೇ ಮಾಡಿದ್ದು, ಅದ ರಂತೆ ಬೆಳ್ತಂಗಡಿಯಲ್ಲೂ ಸ್ಥಳ ಅಂತಿಮಗೊಂಡ ಬಳಿಕ ಕ್ಯಾಂಟೀನ್‌ನ ಕಾಮಗಾರಿಯನ್ನೂ ಆರಂಭಿಸಲಾಗಿತ್ತು. ಪ್ರಸ್ತುತ ಅಡಿಪಾಯ ಕಾಮಗಾರಿ ಮುಗಿದು ಹಲವು ತಿಂಗಳುಗಳೇ ಕಳೆದರೂ ಹಾಗೇ ಬಿಡಲಾಗಿದೆ. ಜತೆಗೆ ಕಾಮಗಾರಿ ಮುಂದು ವರಿಕೆ ಬಗ್ಗೆ ಅನುಮಾನ ವ್ಯಕ್ತವಾಗಿದೆ.
Related Articles
ಕ್ಯಾಂಟೀನ್ ಅನುಷ್ಠಾನ ಕಾರ್ಯ ರಾಜ್ಯಮಟ್ಟದಲ್ಲೇ ನಡೆಯುತ್ತಿರುವು ದರಿಂದ ಬೆಳ್ತಂಗಡಿಯಲ್ಲಿ ಯಾವಾಗ ಕ್ಯಾಂಟೀನ್ ಆರಂಭಗೊಳ್ಳುತ್ತದೆ ಎಂಬ ಮಾಹಿತಿ ಬೆಳ್ತಂಗಡಿ ಪ.ಪಂ.ನಲ್ಲಾಗಲೀ ಅಥವಾ ದ.ಕ. ಜಿಲ್ಲಾಡಳಿತದ ಬಳಿಯಾಗಲೀ ಇಲ್ಲ. ಅಲ್ಲಿನ ಅಧಿಕಾರಿಗಳ ಬಳಿ ಕೇಳಿದರೆ ಹಿಂದೆ ಅನುಷ್ಠಾನದ ಗುತ್ತಿಗೆ ವಹಿಸಿಕೊಂಡ ಸಂಸ್ಥೆಯ ಅವಧಿ ಮುಕ್ತಾಯಗೊಂಡಿರುವ ಕುರಿತು ಅನುಮಾನ ವ್ಯಕ್ತಪಡಿಸುತ್ತಿದ್ದು, ಖಚಿತ ಮಾಹಿತಿ ಅವರ ಬಳಿ ಇಲ್ಲ.
Advertisement
ಈ ಹಿಂದೆ ಕಾಮಗಾರಿ ಆರಂಭಿಸಿದ ಸಂಸ್ಥೆಯ ಬಳಿ ಕಾಮಗಾರಿ ಮುಂದುವರಿಸುವ ಕುರಿತು ಕೇಳಿದರೆ ಇಂದು ಬರುತ್ತೇವೆ, ನಾಳೆ ಬರುತ್ತೇವೆ ಎಂದು ಸತಾಯಿಸುವ ಕೆಲಸ ಮಾಡಿದ್ದಾರೆ ಎಂದು ಅಧಿಕಾರಿಗಳು ಹೇಳುತ್ತಾರೆ. ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಮುಚ್ಚುವ ಮಾತುಗಳು ಕೇಳಿ ಬರುತ್ತಿದ್ದರೂ ಇಲ್ಲಿ ಮಾತ್ರ ಕ್ಯಾಂಟೀನ್ ಅನುಷ್ಠಾನವೇ ಆಗಿಲ್ಲ.
ಸರಕಾರದಿಂದ ಅನುಷ್ಠಾನಇಂದಿರಾ ಕ್ಯಾಂಟೀನ್‌ನನ್ನು ಅನುಷ್ಠಾನಗೊಳಿಸುವ ಕಾರ್ಯವನ್ನು ಸರಕಾರವೇ ಮಾಡುತ್ತಿದ್ದು, ನಾವು ಆಹಾರ ಪೂರೈಕೆಯ ವ್ಯವಸ್ಥೆಯನ್ನು ಮಾತ್ರ ನೋಡಿಕೊಳ್ಳುತ್ತೇವೆ. ಬೆಳ್ತಂಗಡಿಯಲ್ಲಿ ಇಂದಿರಾ ಕ್ಯಾಂಟೀನ್ ಅನುಷ್ಠಾನಕ್ಕೆ ಈ ಹಿಂದೆಯೇ ಸರಕಾರದಿಂದ ಅನುಮತಿ ದೊರಕಿದ್ದರೂ ಗುತ್ತಿಗೆ ವಹಿಸಿಕೊಂಡ ಸಂಸ್ಥೆ ಇನ್ನೂ ಅದರ ಕಾಮಗಾರಿ ನಡೆಸಿಲ್ಲ.
- ಪ್ರಸನ್ನ ವಿ. ನಗರ ಯೋಜನ ನಿರ್ದೇಶಕರು, ದ.ಕ. ಜಿಲ್ಲೆ ಬಡವರ ಪರ ಯೋಜನೆ
ಇಂದಿರಾ ಕ್ಯಾಂಟೀನ್ ಬಡವರ ಪರ ಯೋಜನೆಯಾಗಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಲೇ ಬೆಳ್ತಂಗಡಿಯಲ್ಲಿ ಅನುಷ್ಠಾನ ವಿಳಂಬವಾಗಿದೆ. ಅವರು ಹಿಂದೆ ಬಿದ್ದು ಕೆಲಸ ಮಾಡಿದ್ದರೆ, ಕ್ಯಾಂಟೀನ್ ಆರಂಭವಾಗುತ್ತಿತ್ತು. ಇದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು.
- ನವೀನ್‌ಕುಮಾರ್ ಕೆ. ಸವಣಾಲು ಸರಕಾರದ ವೈಫಲ್ಯ
ತುಳುನಾಡಿನಲ್ಲಿ ಸೂಕ್ತ ಯೋಜನೆ ಕಾರ್ಯಗತಗೊಳಿಸುವಲ್ಲಿ ಸರಕಾರ ವಿಫಲವಾಗುತ್ತಿದೆ. ಇದಕ್ಕೆ ಬೆಳ್ತಂಗಡಿಯ ಇಂದಿರಾ ಕ್ಯಾಂಟೀನ್ ಕೂಡ ಉತ್ತಮ ಉದಾಹರಣೆ. ಜನಪ್ರತಿನಿಧಿಗಳ ವೈಫಲ್ಯ, ಅಧಿಕಾರಿಗಳ ಪಾಳೆಗಾರಿಕೆ ಧೋರಣೆಯೇ ಇದಕ್ಕೆ ಕಾರಣ ಎನ್ನಬಹುದು.
- ಶೈಲೇಶ್ ಆರ್.ಜೆ. ಸಿವಿಲ್ ಎಂಜಿನಿಯರ್, ಬೆಳ್ತಂಗಡಿ