Advertisement

Automation effect:ಕೊಗ್ನಿಸಾಂಟ್ ನ 6,000 ಐಟಿ ಉದ್ಯೋಗಿಗಳಿಗೆ ಕೊಕ್

04:19 PM Mar 20, 2017 | |

ಹೊಸದಿಲ್ಲಿ : ಐಟಿ ಕ್ಷೇತ್ರದ ಪ್ರಮುಖ ಕಂಪೆನಿಗಳಲ್ಲಿ ಒಂದೆನಿಸಿರುವ ಕೊಗ್ನಿಸಾಂಟ್‌ ಟೆಕ್ನಾಲಜಿ ಸೊಲ್ಯೂಶನ್ಸ್‌ ಸಂಸ್ಥೆಯು ತನ್ನ ಆರು ಸಾವಿರ ಉದ್ಯೋಗಿಗಳನ್ನು ಕೈಬಿಡಲಿದೆ. ಎಂದರೆ ಕಂಪೆನಿಯಲ್ಲಿ ಕೆಲಸಕ್ಕಿರುವವರಲ್ಲಿ ಶೇ2.3ರಷ್ಟು ಮಂದಿ ಮನೆಗೆ ಹೋಗಲಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 

Advertisement

ಕೆಳಮಟ್ಟದ ಐಟಿ ಉದ್ಯೋಗಗಳು ಈಗ ಯಾಂತ್ರೀಕರಣದ (automation) ಪರಿಣಾಮವಾಗಿ ನಿರರ್ಥಕವಾಗಿದ್ದು ಆ ಕಾರಣಕ್ಕಾಗಿ ಕೊಗ್ನಿಸಾಂಟ್‌ ಕಂಪೆನಿಯು ತನ್ನ ತಳಮಟ್ಟದ ಉದ್ಯೋಗದಲ್ಲಿರುವ ಸುಮಾರು ಆರು ಮಂದಿಯನ್ನು ಕೈಬಿಡಲು ಉದ್ದೇಶಿಸಿದೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ. 

2016ರ ಡಿಸೆಂಬರ್‌ ಅಂಕಿ ಅಂಶಗಳ ಪ್ರಕಾರ ಕೊಗ್ನಿಸಾಂಟ್‌ ಕಂಪೆನಿಯಲ್ಲಿ ಒಟ್ಟು 2,60,000 ಮಂದಿ ಉದ್ಯೋಗಿಗಳು ಇದ್ದಾರೆ. ಈ ಪೈಕಿ ಅತೀ ಹೆಚ್ಚು ಮಂದಿ ಭಾರತದಲ್ಲಿ ಉದ್ಯೋಗನಿರತರಾಗಿದ್ದಾರೆ.

ಕಂಪೆನಿಯ ಮ್ಯಾನೇಜರ್‌ಗಳಿಗೆ ತಮ್ಮ ತಂಡದ ಸದಸ್ಯರಿಗೆ ಉದ್ಯೋಗ ನಷ್ಟದ ಬಗ್ಗೆ ಮುನ್ಸೂಚನೆ ನೀಡುವಂತೆ ಕಂಪೆನಿಯು ಈಗಾಗಲೇ ಸೂಚಿಸಿದೆ ಎಂದು ಗೊತ್ತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next