ನವ ದೆಹಲಿ : ಅಮೆರಿಕಾ ಮೂಲದ ಐಟಿ ಕಂಪನಿಗಳಲ್ಲಿ ಪ್ರಮುಖ ಸ್ಥಾನದಲ್ಲಿರುವ ಕಾಗ್ನಿಜೆಂಟ್‌ನ ನಿವ್ವಳ ಆದಾಯವು ಮಾರ್ಚ್ 2021 ರ ತ್ರೈಮಾಸಿಕದಲ್ಲಿ ವರ್ಷದಿಂದ ವರ್ಷಕ್ಕೆ 37.6 ರಷ್ಟು ಹೆಚ್ಚಳವಾಗಿದೆ.
ಮಾರ್ಚ್ 2021 ರ ತ್ರೈಮಾಸಿಕದಲ್ಲಿ ಈ ಆದಾಯವು $505 ಮಿಲಿಯನ್ ಗಡಿ ದಾಟಿದ್ದು. 2021 ರ ಆರ್ಥಿಕ ವರ್ಷದಲ್ಲಿ ಕಂಪನಿಯ ಆದಾಯದ ಬೆಳವಣಿಗೆಯು ಶೇಕಡಾ 7 ರಿಂದ 9 ರಷ್ಟು ಹೆಚ್ಚಳವಾಗಲಿದೆ ಕಂಪನಿಯು ನಿರೀಕ್ಷಿಸಿದೆ.
ಓದಿ : ಗೋವಾ ನೂತನ ಲೋಕಾಯುಕ್ತರಾಗಿ ನಿವೃತ್ತ ನ್ಯಾಯಮೂರ್ತಿ ಅಂಬಾದಾಸ್ ಜೋಶಿ ಪ್ರಮಾಣವಚನ ಸ್ವೀಕರ
ಮಾರ್ಚ್ 2020 ರ ತ್ರೈಮಾಸಿಕದಲ್ಲಿ ಕಂಪನಿಯ ಲಾಭವು $367 ಮಿಲಿಯನ್ ಎಂದು ಕಾಗ್ನಿಜಂಟ್ ಪ್ರಕಟಣೆಯಲ್ಲಿ ತಿಳಿಸಿದೆ. ಕಾಗ್ನಿಜೆಂಟ್ ನ ಆದಾಯವು ಮಾರ್ಚ್ ತ್ರೈಮಾಸಿಕದಲ್ಲಿ 4.2 ರಷ್ಟು ಹೆಚ್ಚಳವಾಗಿದ್ದು, ಒಟ್ಟು ವಾರ್ಷಿಕ ಕಂಪನಿಯ ಆದಾಯವು $4.4 ಬಿಲಿಯನ್ ಗೆ ತಲುಪಿದೆ ಎಂದು ತಿಳಿಸಿದೆ.
ಜೂನ್ 2021 ರ ತ್ರೈಮಾಸಿಕದಲ್ಲಿ ಕಂಪನಿಯ ಆದಾಯದ ಬೆಳವಣಿಗೆ 10.5 ರಿಂದ ಶೇಕಡಾ 11.5 ರಷ್ಟಿದೆ ಎಂದು ಕಾಗ್ನಿಜಂಟ್ ತಿಳಿಸಿದೆ. ಮುಂದಿನ ಾರ್ಥಿಕ ವರ್ಷದಲ್ಲಿ 17.8 ಬಿಲಿಯನ್ ಡಾಲರ್ ನಿಂದ 18.1 ಬಿಲಿಯನ್ ಡಾಲರ್ ಗಳವರೆಗೆ ಬೆಳೆಯುವ ನಿರೀಕ್ಷೆಯನ್ನು ಕಂಪೆನಿ ಹೊಂದಿದೆ
ಇನ್ನು, ಕಾಗ್ನಿಜಂಟ್ ಕಂಪನಿಯು ಭಾರತದಲ್ಲಿ 2 ಲಕ್ಷ ಉದ್ಯೋಗಿಗಳನ್ನು ಹೊಂದಿದೆ.
ಓದಿ : ಮಾಜಿ ಭೂಗತ ಪಾತಕಿ ಛೋಟಾ ರಾಜನ್ ಮೃತ ಪಟ್ಟಿಲ್ಲ : ಏಮ್ಸ್