Advertisement

ಕಾಫಿನಾಡು ಈಗ ಮಳೆನಾಡು

03:47 PM Jun 12, 2018 | |

ಕೊಪ್ಪ: ಕೊಪ್ಪ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಬಿರುಸಿನ ಮಳೆ ಸೋಮವಾರವೂ ಮುಂದುವರೆದಿದೆ.  ಗುರುವಾರ ರಾತ್ರಿಯಿಂದ ಆರಂಭಗೊಂಡ ಮಳೆ ಭಾನುವಾರ ರಾತ್ರಿಯವರೆಗೂ ಉತ್ತಮ ಪ್ರಮಾಣದಲ್ಲಿ ಬಂದಿದ್ದು, ಬಳಿಕ ಸ್ವಲ್ಪ ಕಡಿಮೆಯಾಗಿತ್ತು. ಆದರೆ ಸೋಮವಾರ ಮಳೆ ಮತ್ತೆ ಬಿರುಸುಗೊಂಡಿದ್ದು, ಇಡೀ ದಿನ ಬಿರುಸಿನ ಮಳೆಯಾಗಿದೆ.

Advertisement

ಶಾಲಾ ಕಾಲೇಜುಗಳಿಗೂ ಜಿಲ್ಲಾಡಳಿತ ರಜೆ ಘೋಷಣೆಯಾಗಿತ್ತು. ಬಿರುಸಿನ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಪಟ್ಟಣದಲ್ಲಿ ಜನ ಸಂದಣಿ ಕಡಿಮೆಯಾಗಿತ್ತು. ಮಳೆಯ ಪ್ರಮಾಣ ಹೆಚ್ಚಾಗಿರುವುದರಿಂದ ಕೃಷಿ ಚಟುವಟಿಕೆ ನಡೆಸಲು ಸಾಧ್ಯವಾಗುತ್ತಿಲ್ಲ.

ಅಡಕೆ, ಕಾಫಿ ತೋಟಗಳಲ್ಲಿ ಗೊಬ್ಬರ ಹಾಕುವ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಭತ್ತದ ಗದ್ದೆಯ ಕೃಷಿ
ಚಟುವಟಿಕೆಗಳನ್ನು ನೀಡಲು ಸಹ ಹಿನ್ನಡೆಯುಂಟಾಗಿದ್ದು, ಗದ್ದೆಗೆ ಸಗಣಿ ಗೊಬ್ಬರ ಹಾಕಲು, ಭೂಮಿ ಹದಗೊಳಿಸಲು
ಮಳೆ ಬಿಡುವು ನೀಡುತ್ತಿಲ್ಲ. ಒಟ್ಟಾರೆಯಾಗಿ ರೈತಾಪಿ ವರ್ಗಕ್ಕೆ ತಾತ್ಕಾಲಿಕವಾಗಿ ಬಿಡುವು ದೊರೆತಿದೆ.

ತುಂಗಾನದಿ, ಕಪಿಲಾ, ಸೀತಾನದಿಗಳಲ್ಲಿ ನೀರಿನ ಹರಿವು ಹೆಚ್ಚಳಗೊಂಡಿದ್ದು, ಅಪಾಯದ ಅಂಚಿನಲ್ಲಿ ಹರಿಯುತ್ತಿದೆ.
ಹೋಬಳಿಯ ವಿವಿಧೆಡೆ ಗಾಳಿಗೆ ಅಲ್ಲಲ್ಲಿ ಸಣ್ಣಪುಟ್ಟ ಮರಗಳು ಉರುಳಿ ಬಿದ್ದಿದ್ದು, ಯಾವುದೇ ಭಾಗದಲ್ಲೂ ಹಾನಿಯುಂಟಾದ ಬಗ್ಗೆ ವರದಿಯಾಗಿಲ್ಲ. ಗಾಳಿ ಮಳೆಗೆ ಕೆಲವೆಡೆ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಸಂಪರ್ಕ ಕಲ್ಪಿಸಲು ಮೆಸ್ಕಾಂ ಸಿಬ್ಬಂದಿ ನಿರತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next