Advertisement

“ಗುಣಮಟ್ಟ ಕಾಪಾಡುವತ್ತ ಕಾಫಿ ಬೆಳೆಗಾರರು ಗಮನ ಹರಿಸಿ’

12:17 AM Oct 03, 2019 | Sriram |

ಶನಿವಾರಸಂತೆ: ಕಾಫಿ ಬೆಳೆಯವ ನಾಡಿನಲ್ಲಿ ಪ್ರತಿಯೊಬ್ಬರೂ ಕಾಫಿ ಸೇವನೆ ಮಾಡುವುದ್ದರಿಂದ ಕಾಫಿ ಉದ್ದಿಮೆ ಅಭಿವೃದ್ದಿ ಹೊಂದುತ್ತದೆ ಎಂದು ಹಾಸನ ಕಾಫಿ ಮಂಡಳಿ ಜಂಟಿ ನಿರ್ದೇಶಕ ಗುಡ್ಡೇಗೌಡ ಹೇಳಿದರು.

Advertisement

ಅವರು ಸ್ಥಳೀಯ ಗುಡುಗಳಲೆ ಮಂಜುನಾಥ ಪೆಟ್ರೋಲ್‌ ಬಂಕ್‌ ಬಳಿ ಅಂತಾರಾಷ್ಟ್ರೀಯ ಕಾಫಿ ಡೇ ಅಂಗವಾಗಿ ಕೊಡಗು ಜಿಲ್ಲಾ ಕರ್ನಾಟಕ ಬೆಳೆಗಾರರ ಒಕ್ಕೂಟ, ಶನಿವಾರಸಂತೆ ನಮ್ಮ ಬೆಳೆಗಾರರ ಸ್ವ-ಸಹಾಯ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾಫಿ ಡೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕಾಫಿ ಅಂತಾರಾಷ್ಟ್ರೀಯ ವಾಣಿಜ್ಯ ಬೆಳೆಯ ಉದ್ದೇಮೆಯಾಗಿದ್ದು ಭಾರತದಲ್ಲಿ ಕರ್ನಾಟಕ ರಾಜ್ಯದಲ್ಲಿ ಅತೀ ಹೆಚ್ಚಾಗಿ ಕಾಫಿಯನ್ನು ಬೆಳೆಯಲಾಗುತ್ತಿದ್ದರೂ ಇತ್ತೀಜೆಗಿನ ದಿನಗಳಲ್ಲಿ ಭಾರತದ ಕಾಫಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇಳಿಮುಖವಾಗುತ್ತಿರುವುದು ಬೆಳೆಗಾರರು ಹಾಗೂ ಕಾಫಿ ಉದ್ದೇಮಿಗಳು ಗಂಭೀರವಾಗಿ ಪರಿಗಣಿಸಬೇಕಾಗಿದೆ, ಭಾರತದ ಕಾಫಿಗೆ ಬೇಡಿಕೆ ಹೆಚ್ಚಿಸುವ ಉದ್ದೇಶ, ಕಾಫಿ ಬೆಳೆಗಾರರ ಸಂಕಷ್ಟ ಮುಂತಾದ ವಿಷಯಗಳ ಬಗ್ಗೆ ಜನರಿಗೆ ಮನವರಿಕೆ ಮಾಡುವ ಉದ್ದೇಶದಿಂದ ಕಳೆದ 4 ವರ್ಷಗಳಿಂದ ಅಂತಾರಾಷ್ಟ್ರೀಯ ಕಾಫಿ ದಿನವನ್ನು ಆಚರಿಸಲಾಗುತ್ತಿದೆ ಎಂದರು. ಶತಮಾನಗಳಿಂದ ಕಾಫಿ ಬೆಳೆಯುವ ನಾಡಿನಲ್ಲಿ ಕಾಫಿ ಸೇವನೆ ಮಾಡುವುದು ಕಮ್ಮಿಯಾಗುತ್ತಿದೆ ಗ್ರಾಹಕರು ಚಹಪುಡಿಯನ್ನು ಖರೀದಿಸುತ್ತಾರೆ ಕಾಫಿ ಗುಣಮಟ್ಟದಲ್ಲಿ ವ್ಯತ್ಯಾಸ ಮುಂತಾದವುಗಳಿಂದ ಕ ಬೇಡಿಕೆ ಇಳಿಮುಖವಾಗಲು ಕಾರಣವಾಗುತ್ತಿದೆ ಎಂದರು. ಕಾಫಿ ಬೆಳೆಯನ್ನು ಗುಣಾತ್ಮಕವಾಗಿ ಬೆಳೆಸುವುದು, ಕಾಫಿ ಬೆಳೆ ಮತ್ತು ಕಾಫಿ ಪಾನಿಯ ಸೇವಿಸುವ ಬಗ್ಗೆ ಗ್ರಾಹಕರು, ಸಾರ್ವಜನಿಕರಲ್ಲಿ ಪ್ರೇರೆಪಿಸುವ ಕ್ರಮದಿಂದ ಕಾಫಿ ಉದೇಮೆ ಅಭಿವೃದ್ದಿ ಹೊಂದಲು ಸಾಧ್ಯವಾಗುತ್ತದೆ ಎಂದರು.ಕೆಡಿಎಫ್ ಅಧಿಕಾರಿ ನಂದ ಬೆಳ್ಳಿಯಪ್ಪ, ದಿನೇಶ್‌, ಕಾಫಿ ಬೆಳೆಗಾರರ ಸಂಘದ ಪ್ರಮುಖರಾದ ಎನ್‌.ಬಿ.ನಾಗಪ್ಪ, ಬಿ.ಕೆ.ಚಣ್ಣಪ್ಪ, ಎಸ್‌.ಎಂ.ಉಮಾಶಂಕರ್‌, ಶನಿವಾರಸಂತೆ ಕಾಫಿ ಮಂಡಳಿ ಸಂಪರ್ಕಾಧಿಕಾರಿ ವಿಶ್ವನಾಥ್‌ ಮುಂತಾದವರು ಉಪಸ್ಥಿತರಿದ್ದರು.

ಉಪ-ಉತ್ಪನ್ನ ಮಾಹಿತಿ
ಕೊಡಗು ಜಿಲ್ಲಾ ಕರ್ನಾಟಕ ಬೆಳೆಗಾರರ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಕೆ.ಕೆ.ವಿಶ್ವನಾಥ್‌ ರೈತರ ಉತ್ಪಾದಕ ಸಂಸ್ಥೆ, ಕಾಫಿ ಉದ್ಯಮ ಕುರಿತು ಮಾಹಿತಿ ನೀಡಿದರು. ಕಾಫಿ ಮಂಡಳಿಯಿಂದ ದೊರಕುವ ಸವಲತ್ತುಗಳ ಬಗ್ಗೆ ಮಡಿಕೇರಿ ಕಾಫಿ ಮಂಡಳಿ ಉಪ ನಿರ್ದೇಶಕ ಶಿವಕುಮಾರಸ್ವಾಮಿ, ರೈತರ ಕೃಷಿ ಉತ್ಪಾದಕ ಉಪ-ಉತ್ಪನ್ನಗಳಿಂದ ದಿನ ನಿತ್ಯದ ಪ್ಪಾಸ್ಟಿಕ್‌ ತ್ಯಜಿಸುವ ಕುರಿತು ಸೋಮವಾರಪೇಟೆ ಕಾಫಿ ಮಂಡಳಿ ಎಸ್‌ಎಲ್‌ಒ ಮರುಳೀಧರ್‌ ಮಾಹಿತಿ ನೀಡಿದರು.

ಶನಿವಾರಸಂತೆ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಆರ್‌.ಪಿ.ಲಕ್ಷ್ಮಣ್‌ ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next