Advertisement
1. ಹಟ್ಟಿ ಕಾಫಿಮಲೆನಾಡಿನ ಕಡೆ ಮಾಡುವ ಬೆಲ್ಲದ ಕಾಫಿಯ ರುಚಿ ನೋಡಬೇಕಿದ್ದರೆ “ಹಟ್ಟಿ ಕಾಫಿ’ ಕಡೆಗೊಮ್ಮೆ ಬನ್ನಿ. ಇಲ್ಲಿ ಗಟ್ಟಿ ಹಾಲು ಹಾಗೂ ಬೆಲ್ಲದಿಂದ ಮಾಡಿದ ಕಾಫಿ ದೊರೆಯುತ್ತದೆ. ಪಕ್ಕಾ ಹಳ್ಳಿ ಪದ್ಧತಿಯಂತೆ ವಾಟೆ ಹಾಗೂ ಬಟ್ಟಲಿನಲ್ಲಿ ಕಾಫಿ ಹಾಕಿ ಕೊಡುತ್ತಾರೆ. ಹೊಗೆಯಾಡುವ ಬಿಸಿ ಕಾಫಿಯನ್ನು ಬಟ್ಟಲಿನಿಂದ ವಾಟೆಗೆ ಸೇರಿಸುತ್ತಾ ನಿಧಾನವಾಗಿ ಕುಡಿದರೆ, ಮತ್ತೂಂದು ಲೋಟ ಕಾಫಿ ಆರ್ಡರ್ ಮಾಡೋಣ ಅನ್ನಿಸುತ್ತದೆ. ಬೆಂಗಳೂರಿನಲ್ಲಿ 10-12 ಶಾಖೆಗಳನ್ನು ಹೊಂದಿರುವ ಹಟ್ಟಿ ಕಾಫಿಯಲ್ಲಿ, ನೀವು ನಿಂತುಕೊಂಡೇ ಕಾಫಿ ಕುಡಿಯಬೇಕು. ಇಲ್ಲಿ ಜೇನುತುಪ್ಪದಿಂದ ಮಾಡಿದ ಕಾಫಿಯೂ ಲಭ್ಯ. ಒಂದು ಲೋಟ
ಎಲ್ಲಿದೆ?: ನಾಗವಾರ, ಮಲ್ಲೇಶ್ವರ, ಹಲಸೂರು, ಜಯನಗರ 4ನೇ ಬಡಾವಣೆ, ಕೋರಮಂಗಲ 5ನೇ ಬಡಾವಣೆ, ಬ್ರಿಗೇಡ್ ರೋಡ್, ರಾಜಾಜಿನಗರ
ದರ: 25-100 ರೂ.
ದೊಡ್ಡ-ದೊಡ್ಡ ಹೋಟೆಲ್‌ಗಳು ಕೇವಲ ತಿಂಡಿ-ತಿನಿಸುಗಳ ಮೇಲೆ ಗಮನ ಹರಿಸಿ ಕಾಫಿಯನ್ನು ನಿರ್ಲಕ್ಷಿಸುತ್ತವೆ. ಆದರೆ ಲಾವೊನ್ನೆ ಹೋಟೆಲ್ ಶುರುವಾಗಿದ್ದೇ ಕಾಫಿ ಪ್ರಿಯರಿಗಾಗಿ. ಇಲ್ಲಿ ಸಿಗುವ ಕಾಫಿಯಲ್ಲಿ ಹಾಲಿನ ಪ್ರಮಾಣ ಕಡಿಮೆಯಿದ್ದು, ಡಿಕಾಕ್ಷನ್ ಹೆಚ್ಚಿರುತ್ತದೆ. ಕಾಫಿ ಕುಡಿದ ನಂತರವೂ ಅದರ ಸ್ವಾದ ಬಾಯಲ್ಲಿ ಉಳಿಯುತ್ತದೆ. ಇಲ್ಲಿನ ಕಾಫಿ ಅಷ್ಟು ಸ್ಟ್ರಾಂಗ್. ಕೇವಲ ಬಿಸಿ ಕಾಫಿಯಷ್ಟೇ ಅಲ್ಲ, ವಿಧವಿಧವಾದ ಕೋಲ್ಡ್ ಕಾಫಿಯೂ ಇಲ್ಲಿ ಲಭ್ಯ.
ಎಲ್ಲಿದೆ?: ದೊಮ್ಮಲೂರು 2ನೇ ಹಂತ, ಇಂದಿರಾನಗರ
ದರ: 30-300 ರೂ. 3. ಕಾಫಿ ರೋಸ್ಟರ್
ಕೆಲವೇ ವರ್ಷಗಳ ಹಿಂದೆ ಸಣ್ಣ ಅಂಗಡಿಯಾಗಿ ಪ್ರಾರಂಭವಾದ ಕಾಫಿ ರೋಸ್ಟರ್, ಈಗ ನಾಲ್ಕು ಶಾಖೆಗಳನ್ನು ಹೊಂದಿದೆ. ಈ ಕಾಫಿಯ ಬೆಲೆ ಸ್ವಲ್ಪ ದುಬಾರಿ. ಇಲ್ಲಿ ನಿಮಗೆ ಯಾವ ಕಾಫಿ ಬೇಕು ಹಾಗೂ ಎಷ್ಟು ಪ್ರತಿಶತ ಸಕ್ಕರೆ ಮತ್ತು ಡಿಕಾಕ್ಷನ್ ಬೇಕು ಎಂದು ಹೇಳಿದರೆ ಸಾಕು. ಮೆಷಿನ್ ಮೂಲಕ ತಯಾರಾದ ಕಾಫಿಯನ್ನು ತಲುಪಿಸಲಾಗುತ್ತದೆ. ಸಕಾಫಿಯ ಜೊತೆಗೆ ಸವಿಯಲು ವಿವಿಧ ರೀತಿಯ ಬಿಸ್ಕೆಟ್‌ಗಳನ್ನೂ ಇಲ್ಲಿ ಕೊಳ್ಳಬಹುದು.
ಎಲ್ಲಿದೆ?: ಕೋರಮಂಗಲ, ಇಂದಿರಾನಗರ, ಸದಾಶಿವನಗರ ಹಾಗೂ ಎಚ್.ಎಸ್.ಆರ್ ಬಡಾವಣೆ
ದರ: 100- 250 ರೂ.
Related Articles
“ಹತ್ರುಪಾಯ್ಗೆ ಚೇಂಜ್ ಕೊಡಿ’, “ಚಿಲ್ರೆ ಇಲ್ಲಾ ಸಾರ್’.. ಇಂಥ ಮಾತುಗಳೆಲ್ಲ ಬೈಟು ಕಾಫಿಯಂಗಡಿಯಲ್ಲಿ ಸಾಮಾನ್ಯ. ಹೆಸರೇ ಸೂಚಿಸುವಂತೆ ಇಲ್ಲಿ ಕೇವಲ ಬೈಟು ಕಾಫಿ ಮಾತ್ರ ಸಿಗುತ್ತದೆ. ಒಂದು ಲೋಟ ತುಂಬಾ ಕಾಫಿ ಬೇಕೆಂದರೆ, ನೀವು ಎರಡು ಕಾಫಿಗೆ ಆರ್ಡರ್ ಮಾಡಬೇಕು. ಸಂಜೆ ಹೊತ್ತಲ್ಲಿ ಕಾಫಿಯ ಜೊತೆಗೆ ಸವಿಯಲು ಕೆಲವು ಬಗೆಯ ತಿನಿಸುಗಳೂ ಲಭ್ಯ. ಲೋಟ ಹಿಡಿದರೆ ಕೈ ಸುಟ್ಟೇ ಹೋಗುವಷ್ಟು ಬಿಸಿಯಾಗಿರುತ್ತದೆ ಇಲ್ಲಿನ ಕಾಫಿ. ಕೇವಲ 10 ರೂ.ಗೆ ಕಾಫಿ ಸಿಗುವುದರಿಂದ, ಇಲ್ಲಿ ರಶ್ ಕೂಡ ಜಾಸ್ತಿಯೇ.
ಎಲ್ಲಿದೆ?: ಜಯನಗರ, ಬಸವನಗುಡಿ, ರಾಜರಾಜೇಶ್ವರಿ ನಗರ, ಮಲ್ಲೇಶ್ವರ, ನಾಗರಬಾವಿ
ದರ: 10 ರೂ.
Advertisement
5. ತಲಸ್ಸೇರಿ ಕಾಫಿಒಂದೇ ಬಗೆಯ ಕಾಫಿ ಕುಡಿದು ಬೇಜಾರಾಗಿದ್ದರೆ, ನಾಲಗೆಗೆ ಬೇರೆ ಸ್ವಾದದ ಕಾಫಿಯ ರುಚಿ ಬೇಕಿದ್ದರೆ, ಎಲೆಕ್ಟ್ರಾನಿಕ್ ಸಿಟಿಯ ಒಂದನೇ ಹಂತದಲ್ಲಿರುವ ತಲಸ್ಸೇರಿ ರೆಸ್ಟೋರೆಂಟ್‌ಗೆ ಬನ್ನಿ. ಬಹುಶಃ ಇಲ್ಲಿ ದೊರೆಯುವ ಕಾಫಿಯ ರುಚಿ ಮತ್ತೆಲ್ಲಿಯೂ ಸಿಗುವುದಿಲ್ಲ. ಯಾಕಂದ್ರೆ, ಇಲ್ಲಿ ಕೇರಳದ ಶೈಲಿಯಲ್ಲಿ ಕಾಫಿ ತಯಾರಿಸುತ್ತಾರೆ. ಕಾಫಿ, ಜಾಸ್ತಿ ಸಿಹಿಯೂ ಇರುವುದಿಲ್ಲ, ಡಿಕಾಕ್ಷನ್ ಕೂಡ ಜಾಸ್ತಿ ಹಾಕುವುದಿಲ್ಲ. ರುಚಿಗೆ ತಕ್ಕಂತೆ ಸಕ್ಕರೆ ಬಳಸುತ್ತಾರೆ. ಕುಳಿತುಕೊಳ್ಳಲು ಸ್ಥಳ ಇರದಿದ್ದರೂ, ಪ್ರತಿದಿನ ಇಲ್ಲಿಗೇ ಬರಬೇಕು ಎನ್ನುವ ಕಾಫಿ ಭಕ್ತರಿದ್ದಾರೆ.
ಎಲ್ಲಿದೆ?: ಎಲೆಕ್ಟ್ರಾನಿಕ್ ಸಿಟಿ 1ನೇ ಮತ್ತು 2ನೇ ಹಂತ
ದರ: 15-50 ರೂ. ಪ್ರಜ್ವಲ್ ಹೂಲಿ