Advertisement
ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ಬಿಗಿ ಕಣ್ಗಾವಲಿನಿಂದಾಗಿ ಹಲವು ರೀತಿಯ ಪ್ರಕರಣಗಳು ದಾಖಲಾಗಿದ್ದವು. ಬಂಟ್ವಾಳ ತಾಲೂಕಿನ ಮನೆಯೊಂದರಲ್ಲಿ ಮದುವೆ ಕಾರ್ಯಕ್ರಮ ನಿಮಿತ್ತ ಮದ್ಯ ತಂದಿರಿಸಿದ್ದು, ಪೂರ್ವಾನುಮತಿ ಇರಲಿಲ್ಲ ಎಂಬ ಕಾರಣಕ್ಕೆ ಅಧಿಕಾರಿಗಳು ಮನೆ ಮಾಲಕನನ್ನೇ ಬಂಧಿಸಿದ್ದರು. ಮಾಹಿತಿ, ಅರಿವಿನ ಕೊರತೆಯಿಂದಾಗಿ ಈ ಎಡವಟ್ಟಾಗಿತ್ತು.
Related Articles
ಎಲ್ಲ ರೀತಿಯ ಹಣದ ವ್ಯವಹಾರಗಳ ಬಗ್ಗೆ ಆಯೋಗ ವಿಶೇಷ ಕಣ್ಣಿಡಲಿದೆ. ನಿಗದಿತ ಮೊತ್ತಕ್ಕಿಂತ ಅಧಿಕ ಹಣವನ್ನು ತೆಗೆದುಕೊಂಡು ಹೋಗುವುದಾದರೆ ಸಮರ್ಪಕ ದಾಖಲೆ ಬೇಕೇಬೇಕು. ಇಲ್ಲವಾದರೆ ಅಂಥ ಹಣ ಆಯೋಗದ ವಶವಾಗಲಿದೆ. ಚಿನ್ನ ಖರೀದಿಸುವಾಗಲೂ ಎಚ್ಚರ ವಹಿಸಬೇಕು. ನಿಗದಿಗಿಂತ ಅಧಿಕ ಮೊತ್ತದ ಚಿನ್ನ ಖರೀದಿ ಮಾಡುವುದಾದರೂ ಸೂಕ್ತ ದಾಖಲೆ ನೀಡಬೇಕಾಗುತ್ತದೆ. ಅಡಿಕೆ ಅಥವಾ ಇತರ ಮಾರಾಟ ಮೂಲಗಳಿಂದ ಹಣ ಪಡೆಯುವವರು ಸೂಕ್ತ ದಾಖಲೆ ಇಟ್ಟುಕೊಂಡಿರಬೇಕು.
Advertisement
ಸಭೆ-ಸಮಾರಂಭಕ್ಕೆ ಅನುಮತಿ ಕಡ್ಡಾಯಯಾವುದೇ ಪಕ್ಷವಾಗಲಿ ರಾಜಕೀಯ ವ್ಯಕ್ತಿಗಳಾಗಲಿ; ಧರ್ಮ ಹಾಗೂ ಜಾತಿಗಳ ನಡುವೆ ಸಂಘರ್ಷ ಉಂಟು ಮಾಡುವ ಹೇಳಿಕೆ ನೀಡುವಂತಿಲ್ಲ. ವೈಯಕ್ತಿಕ ನಿಂದನೆ ಮಾಡು ವಂತಿಲ್ಲ. ಧರ್ಮದ ಆಧಾರದಲ್ಲಿ ಮತ ಕೇಳುವಂತಿಲ್ಲ. ದೇವಸ್ಥಾನ, ಮಸೀದಿ, ಚರ್ಚ್‌ಗಳನ್ನು ರಾಜಕೀಯ ಪ್ರಚಾರಕ್ಕಾಗಿ ಬಳಸುವಂತಿಲ್ಲ. ಮತದಾರರಿಗೆ ಹಣದ ಆಮಿಷ, ಪ್ರಭಾವ ಬೀರುವಂತಿಲ್ಲ. ಪಕ್ಷಗಳ ಸಭೆ/ಮೆರವಣಿಗೆ ಸ್ಥಳ, ಸಮಯ, ಸೇರುವ ಜನ, ಬರುವ ರಾಜಕೀಯ ನಾಯಕರು ಸೇರಿದಂತೆ ಎಲ್ಲ ವಿವರಗಳನ್ನು ಪೊಲೀಸರಿಗೆ ಮೊದಲೇ ನೀಡಬೇಕು. ಅವರು ಸೂಚಿಸುವ ನಿಬಂಧನೆಗಳನ್ನು ರಾಜಕೀಯ ಪಕ್ಷಗಳು ಕಡ್ಡಾಯವಾಗಿ ಪಾಲಿಸಬೇಕು. ಧ್ವನಿವರ್ಧಕಗಳ ಬಳಕೆಗೆ ಅನುಮತಿ ಕಡ್ಡಾಯ. ಸಾಮಾಜಿಕ ಜಾಲದ ಮೇಲೂ ಕಣ್ಣು
ಈ ಬಾರಿಯ ಚುನಾವಣೆಯಲ್ಲಿ ಆಯೋಗವು ವ್ಯಾಟ್ಸ್ ಆ್ಯಪ್, ಫೇಸ್‌ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೇಲೂ ಹದ್ದಿನ ಕಣ್ಣು ಇರಿಸಿದೆ. ರಾಜಕೀಯವಾಗಿ ಯಾವುದೇ ಪಕ್ಷ ಅಥವಾ ಅಭ್ಯರ್ಥಿಗಳಿಗೆ ಲಾಭವಾಗುವ ದೃಷ್ಟಿಯಲ್ಲಿ ಬರಹ, ಫೋಟೋ, ವೀಡಿಯೋ ಅಥವಾ ಇನ್ನಿತರ ಮಾಹಿತಿಗಳನ್ನು ಹಾಕುವುದು ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ. ಸರಕಾರಿ ಕಾರು ವಾಪಸ್
ನೀತಿಸಂಹಿತೆ ಹಿನ್ನೆಲೆಯಲ್ಲಿ ಎಲ್ಲ ಜನಪ್ರತಿನಿಧಿಗಳ ಸರಕಾರಿ ಕಾರುಗಳನ್ನು ವಾಪಸ್ ಪಡೆಯಲಾಗುತ್ತದೆ. ಈಗಾಗಲೇ ಆರಂಭವಾಗಿರುವ ಕಾಮಗಾರಿಗಳನ್ನು ಮುಂದುವರಿಸಲು ಆಕ್ಷೇಪವಿಲ್ಲ. ಹೊಸ ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ. ಡಿಸಿ ಸೆಂಥಿಲ್‌ಗೆ ಎರಡನೇ ಚುನಾವಣೆ!
ಚುನಾವಣೆಗೂ ಮುನ್ನ ಅಧಿಕಾರಿಗಳ ವರ್ಗಾವಣೆ ನಡೆಯುತ್ತದೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲೂ ಹಲವು ಅಧಿಕಾರಿಗಳ ವರ್ಗಾವಣೆ ನಡೆದಿದೆ. ಆದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್ ಮುಂದುವರಿದಿದ್ದು, ಅವರು ಎರಡನೇ ಬಾರಿಗೆ ಜಿಲ್ಲೆಯಲ್ಲಿ ಚುನಾವಣಾಧಿಕಾರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವುದು ವಿಶೇಷ. ಕಳೆದ ವಿಧಾನಸಭಾ ಚುನಾವಣೆಯನ್ನು ಶಶಿಕಾಂತ ಸೆಂಥಿಲ್ ಅವರೇ ನಿಭಾಯಿಸಿದ್ದರು. ಅನಧಿಕೃತ ಫಲಕಗಳ ತೆರವು
ನೀತಿಸಂಹಿತೆ ಜಾರಿಗೆ ಬಂದಿರುವ ಕಾರಣ ಎಲ್ಲ ರೀತಿಯ ಹಣಕಾಸು ವ್ಯವಹಾರ, ರಾಜಕೀಯ ಪಕ್ಷಗಳ ಚಟುವಟಿಕೆಗಳ ಬಗ್ಗೆ ಆಯೋಗವು ಕಣ್ಣಿಡಲಿದೆ. ರಾಜಕೀಯ ಬ್ಯಾನರ್, ಫಲಕ ತೆರವು ಮಾಡುವ ಜತೆಗೆ ಅನಧಿಕೃತವಾದ ಎಲ್ಲ ರೀತಿಯ ಬ್ಯಾನರ್, ಹೋರ್ಡಿಂಗ್‌ಗಳನ್ನು ತೆರವು ಮಾಡಲು ಸೂಚಿಸಲಾಗಿದೆ.
– ಶಶಿಕಾಂತ್ ಸೆಂಥಿಲ್, ದ.ಕ. ಜಿಲ್ಲಾಧಿಕಾರಿ