Advertisement
ನಗರದ ಜಿಪಂ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಆರಂಭದಲ್ಲೇ ಮಾತನಾ ಡಿದ ಸಂಸದ ಆರ್.ಧ್ರುವನಾರಾಯಣ, ಡಾ.ಬಿ.ಆರ್.ಅಂಬೇಡ್ಕರ್ ಜನ್ಮ ದಿನವನ್ನು ಉಪಚು ನಾವಣೆ ನೀತಿಸಂಹಿತೆ ಹಿನ್ನೆಲೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಆಚರಿಸಲು ಸಾಧ್ಯವಾಗಲಿಲ್ಲ. ಈ ಬಗ್ಗೆ ಅಸಮಾಧಾನ ವ್ಯಕ್ತವಾಗಿದ್ದು ಎಲ್ಲರ ಅಭಿಪ್ರಾ ಯದಂತೆ ಮತ್ತೂಮ್ಮೆ ಅದ್ಧೂರಿಯಾಗಿ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಅಗತ್ಯವಿರುವ ಸಲಹೆ ನೀಡುವಂತೆ ಸಂಘಸಂಸ್ಥೆ ಮುಖಂಡರಿಗೆ ಮನವಿ ಮಾಡಿದರು.
Related Articles
Advertisement
ಸಮಾರಂಭಕ್ಕೆ ಮೊದಲು ಅಂಬೇಡ್ಕರ್ ಭಾವಚಿತ್ರ ಮೆರವಣಿಗೆ ಮಾಡಲಾ ಗುವುದು. ಏ.27ರಂದು ವಿಚಾರ ಸಂಕಿರಣ ಆಯೋಜಿಸಲಾಗುವುದು ಎಂದರು. ಮೆರವಣಿಗೆಗೆ ಹೆಚ್ಚಿನ ಕಲಾತಂಡಗಳನ್ನು ನಿಯೋಜಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಿಗೆ ಸೂಚಿಸಿದ ಸಂಸದ ಬೇರೆ ಬಗೆಯ ಕಲಾತಂಡಗಳ ಮಾಹಿತಿ ಇದ್ದಲ್ಲಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಗಮನಕ್ಕೆ ತರಬಹುದೆಂದು ತಿಳಿಸಿದರು.
ಮೆರವಣಿಗೆ ಸಾಗುವ ಪ್ರಮುಖ ಬೀದಿರಸ್ತೆಗಳನ್ನು ದುರಸ್ತಿಪಡಿಸಬೇಕು. ಮೆರವಣಿಗೆ ಯು ಸುಗಮವಾಗಿ ಸಾಗಲು ಯಾವುದೇ ಅಡಚಣೆಯಾಗದಂತೆ ಸಿದ್ಧಪಡಿಸುವ ಹೊಣೆಗಾರಿಕೆ ನಗರಸಭೆ ಅಧಿಕಾರಿಗಳ ಮೇಲಿದೆ. ವಿಚಾರ ಸಂಕಿರಣ ಆಯೋಜನೆಯನ್ನು ಜಂಟಿ ಕೃಷಿ ನಿರ್ದೇಶಕರ ಅಧ್ಯಕ್ಷತೆ ಸಮಿತಿ ನಿರ್ವಹಿಸಬೇಕು. ಸಮಾ ರಂಭ ಅತ್ಯಂತ ಯಶಸ್ವಿಯಾಗಿ ನಡೆಸಲು ಪೂರ್ಣ ಪ್ರಮಾಣದಲ್ಲಿ ಕಾರ್ಯೋನ್ಮುಖರಾಗಬೇಕು. ಜಯಂತಿ ಆಚರಣೆಗೆ ಸಂಘಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಬೇಕೆಂದು ಧ್ರುವ ತಿಳಿಸಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಸ್.ಜಯಣ್ಣ, ಜಿಲ್ಲಾಧಿಕಾರಿ ಬಿ.ರಾಮು, ಜಿಪಂ ಸಿಇಒ ಡಾ.ಕೆ.ಹರೀಶ್‌ಕುಮಾರ್, ಎಸ್ಪಿ ಕುಲದೀಪ್ ಕುಮಾರ್ ಜೈನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇ ಶಕ ಕೆ.ಎಚ್.ಸತೀಶ್, ನಗರಸಭಾ ಸದಸ್ಯ ನಂಜುಂಡಸ್ವಾಮಿ, ಮುಖಂಡರಾದ ಕೆ.ಎಂ.ನಾಗರಾಜು, ಸಿ.ಕೆ.ಮಂಜುನಾಥ್, ಸಂಘಸೇನಾ, ಬ್ಯಾಡಮೂಡ್ಲು ಬಸವಣ್ಣ, ಕಂದಹಳ್ಳಿ ನಾರಾಯಣ, ಸೋಮ ಶೇಖರ ಬಿಸಲ್ವಾಡಿ, ಆಲೂರು ನಾಗೇಂದ್ರ, ಮಾಜಿ ನಗರಸಭಾ ಸದಸ್ಯ ನಾಗರಾಜು ಇದ್ದರು.