Advertisement
ಹೌದು, ವೈಭವ ಎಂಬ ಯುವಕನ ಜತೆಗೆ ಪ್ರೀತಿಯಲ್ಲಿದ್ದ ವೈಷ್ಣವಿ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು. ಆಕೆ ನಾಪತ್ತೆಯಾಗಿದ್ದ ದಿನವೇ ಇತ್ತ ವೈಭವ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದ. ಆತನ ಶವವೇನೋ ಸಿಕ್ಕಿತ್ತು ಆದರೆ ವೈಷ್ಣವಿ ಏನಾದಳೆಂಬುದು ತಿಳಿದು ಬಂದಿರಲಿಲ್ಲ. ಬಳಿಕ ಪೊಲೀಸರು ವೈಭವ್ ಮೊಬೈಲ್‌ನಲ್ಲಿದ್ದ ಡೆತ್‌ನೋಟ್ ಗಮನಿಸಿ ದಾಗ ಅದರಲ್ಲಿ “ಎಲ್01-501′ ಎಂಬ ಕೋಡ್ ಇದ್ದದ್ದನ್ನು ಗಮನಿಸಿದ್ದಾರೆ. ಅದರ ಬೆನ್ನು ಹತ್ತಿ ತನಿಖೆ ನಡೆಸಿದಾಗ ಆ ಸಂಖ್ಯೆಯು ಅರಣ್ಯ ಇಲಾಖೆಯು ಮರ ವೊಂದರ ಮೇಲೆ ಬರೆದಿರುವ ಸಂಖ್ಯೆ ಎಂದು ತಿಳಿದುಬಂದಿದ್ದು, ಅದೇ ಮರದ ಕೆಳಗೆ ವೈಷ್ಣವಿಯ ಶವ ಹೂತಿರುವುದು ಪತ್ತೆಯಾಗಿದೆ. Advertisement
lover ಡೆತ್‌ನೋಟ್‌ನಲ್ಲಿ ಕೋಡ್: ಹತ್ಯೆಗೀಡಾದ ಪ್ರೇಯಸಿ ಮೃತದೇಹ ಪತ್ತೆ!
01:15 AM Jan 19, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.