Advertisement
ಕಳೆದ ಹಲವು ವರ್ಷದಿಂದ ಮಳೆ ಇಲ್ಲದೆ ತಾಲೂಕು ಭೀಕರ ಬರದ ಸುಳಿಗೆ ಸಿಲುಕಿರುವುದರಿಂದ ಇಲ್ಲಿನಪ್ರಮುಖ ವಾಣಿಜ್ಯ ಬೆಳೆಯಾದ ತೆಂಗು ವಿನಾಶ ದಂಚಿಗೆ ತಲುಪಿದೆ. ಅಂತರ್ಜಲ ಸಾವಿರ ಅಡಿಗೂ ಮೀರಿ ಹೋಗಿರುವುದರಿಂದ ತೆಂಗು ಉಳಿಸಿಕೊಳ್ಳಲಾಗದೆ, ಬೆಳೆಗಾರರು ಅತಂತ್ರ ಸ್ಥಿತಿಗೆ ತಲುಪಿದ್ದಾರೆ.
Related Articles
Advertisement
ಕೆರೆಕಟ್ಟೆಗಳಲ್ಲಿ ಹನಿ ನೀರಿಲ್ಲ: ತಾಲೂಕಿನ ಯಾವ ಪಂಚಾಯಿತಿಗಳ ವ್ಯಾಪ್ತಿಯ ಕೆರೆ-ಕಟ್ಟೆಗಳಲ್ಲೂಪಶು-ಪಕ್ಷಿಗಳಿಗೆ ಕುಡಿಯಲು ಹನಿ ನೀರಿಲ್ಲ. ಆಡು, ಕುರಿ, ದನಕರುಗಳಿಗೆ ರೈತರು ಗ್ರಾಮಗಳಲ್ಲಿನ ಕಿರು ನೀರು ಸರಬರಾಜು ಟ್ಯಾಂಕ್‌ಗಳನ್ನೇ ಅವಲಂಬಿಸ ಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ತಾಲೂಕಿನ ಒಳಗಡೆಯೇ ಹೇಮಾವತಿ ನಾಲೆಯಲ್ಲಿ ಸಾಕಷ್ಟು ಕಾಲ ನೀರು ಹರಿದರೂ ತಾಲೂಕು ಆಡಳಿತಮಾತ್ರ ಕೆರೆಕಟ್ಟೆಗಳಿಗೆ ನೀರು ತುಂಬಿಸುವ ಪ್ರಯತ್ನಮಾಡದೆ, ಕೇವಲ ಸಬೂಬು ಹೇಳಿಕೊಂಡು ರೈತರಿಗೆಅನ್ಯಾಯ ಮಾಡುತ್ತಿದೆ. ಇದಕ್ಕೆ ತಾಲೂಕು ಆಡಳಿತದ ಉದಾಸೀನವೆ ಕಾರಣವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬರುತ್ತಿದೆ.
ಜನಪ್ರತಿನಿಧಿಗಳು, ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೆ ತೆಂಗು ಬೆಳೆಗಾರರ ಬದುಕು ಬೆಂಕಿಯಿಂದ ಬಾಣಲೆಗೆ ಎಸೆದಂತಾಗಿದೆ. ನಿರಂತರ ಬರದ ನಡುವೆ ಬದುಕು ಸವೆಸುತ್ತಿರುವ ಬೆಳೆಗಾರರ ಸಂಕಷ್ಟಗಳು, ತೆಂಗು ವಿನಾಶದ ಬಗ್ಗೆ ಸರ್ಕಾರಕ್ಕೆ ಸಮರ್ಪಕ ಮಾಹಿತಿ
ನೀಡಲು ಜನಪ್ರತಿನಿಧಿಗಳು ನಿರ್ಲಕ್ಷ್ಯ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸರ್ಕಾರ ಕಲ್ಪತರು ನಾಡಿನ ತೆಂಗು ಬೆಳೆಗಾರರ ನೆರವಿಗೆ ಬಂದು, ಶೀಘ್ರ ವಿಶೇಷ ಪ್ಯಾಕೇಜ್ ಮೂಲಕ ಪರಿಹಾರ ನೀಡಿ, ವಿನಾಶ ದತ್ತ ಸಾಗಿರುವ ತೆಂಗು ಬೆಳೆ ಹಾಗೂ ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡುವುದೊ ಕಾಯ್ದು ನೋಡಬೇಕಿದೆ.
ಮಳೆ ಬರುವ ವಾತಾವರಣ: ಈ ವರ್ಷ ಮಳೆಗಾಲ ಆರಂಭವಾದಾಗಿನಿಂದಲೂ ಈವರೆಗೆ ವಾತಾವರಣ ದಲ್ಲಿ ನಿತ್ಯವೂ ಮಳೆ ಬರುವಂತಹ ಮೋಡಗಳು ಕಾಣುತ್ತಿರುವುದು ಬಿಟ್ಟರೆ, ಹಳ್ಳಕೊಳ್ಳಗಳಲ್ಲಾದರೂ ನೀರು ಹರಿಯುವಂತಹ ಮಳೆಯೇ ಬಂದಿಲ್ಲ. ಈಗಲೂ ಮಳೆ ಬರುವ ಮೋಡ ಮುಸುಕಿದ ವಾತಾವರಣವನ್ನು ನಿತ್ಯವೂ ರೈತರು ನೋಡುತ್ತಾ ಇವತ್ತುಮಳೆ ಬರಬಹುದು, ನಾಳೆ ಬರಬಹುದು ಎಂಬ ಹತಾಶಾಭಾವದಿಂದ ಆಕಾಶ ದಿಟ್ಟಿಸಿ ನೋಡುತ್ತಾ ಮಳೆರಾಯನ ಕೃಪೆಗಾಗಿ ಕಾಲ ಕಳೆಯುವಂತಾಗಿದೆ.
ರೈತರ ಬದುಕಿನ ಜೀವಾಳ ತೆಂಗು ಬೆಳೆಯಾಗಿದ್ದು, ಲಕ್ಷಾಂತರ ತೆಂಗಿನಮರಗಳು ಬರಗಾಲ, ಅಂತರ್ಜಲ ಕೊರತೆಯಿಂದ ಒಣಗಿ ಹೋಗಿವೆ. ಕೂಡಲೇಸರ್ಕಾರ ತಾಲೂಕನ್ನುಬರ ಪೀಡಿತ ಎಂದು ಘೋಷಿಸಿ, ತೆಂಗು, ಅಡಕೆ ಬೆಳೆಗಾರರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು.ಮುಂದಿನ ದಿನಗಳಲ್ಲಿ ಹೇಮಾವತಿ,ಎತ್ತಿನಹೊಳೆಯಿಂದ ಕೆರೆಕಟ್ಟೆಗಳಿಗೆ ನೀರು ತುಂಬಿಸಿದರೆ ತೆಂಗಿಗೆ ಅನುಕೂಲ.-ಕೆ.ಆರ್. ಅರುಣ್‌ಕುಮಾರ್, ಬೆಳೆಗಾರರು, ಕೊಬ್ಬರಿ ವರ್ತಕರು, ತಿಪಟೂರು
ಸತತ ಬರಗಾಲ, ರೋಗದ ಕಾಟದಿಂದ ಸಾಕಷ್ಟು ತೆಂಗಿನಮರಗಳು ಈಗಾಗಲೇ ಒಣಗುತ್ತಿರುವುದು ಕಂಡು ಬಂದಿದೆ. ಈಗಲೂ ಮಳೆ ಬಂದರೆ ಸಹಾಯವಾಗಲಿದೆ. ಸರ್ಕಾರದಿಂದಯಾವುದೇ ಪರಿಹಾರ ಘೋಷಣೆಯಾಗಿಲ್ಲ. ಇಲಾಖೆಯಿಂದ ಯಾವುದಾದರೂಪರಿಹಾರ ಬಂದಲ್ಲಿ ಬೆಳೆಗಾರರಿಗೆ ತಿಳಿಸಲಾಗುವುದು.-ಜಿ.ವಿಜಯ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ, ತಿಪಟೂರು
-ಬಿ.ರಂಗಸ್ವಾಮಿ