ನವದೆಹಲಿ: ಡಿಜಿಟಲ್ ಪಾವತಿ (Digital Payment) ವ್ಯವಸ್ಥೆ ದೇಶದ ಮೂಲೆ, ಮೂಲೆಗೂ ತಲುಪಲಾರಂಭಿಸಿವೆ. ಡಿಜಿಟಲ್ ಪಾವತಿ ವಹಿವಾಟು ಜಗಳ ಮುಕ್ತ ಹಾಗೂ ತ್ವರಿತ ಪಾವತಿಗೆ ಹೆಚ್ಚು ಅನುಕೂಲಕರವಾಗಿದೆ. ಏತನ್ಮಧ್ಯೆ ದ್ವಿಚಕ್ರ ವಾಹನದಲ್ಲಿ ಎಳನೀರು ಮಾರಾಟ ಮಾಡುವ ವ್ಯಕ್ತಿಯೊಬ್ಬರು ಕ್ಯೂಆರ್ (QR) ಕೋಡ್ ಅನ್ನು ಬಳಕೆ ಮಾಡುವ ಮೂಲಕ ಗಮನಸೆಳೆದಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:Mangaluru ಅದ್ದೂರಿ ಮೆರವಣಿಗೆ ನಡೆಸಿ ನಾಮಪತ್ರ ಸಲ್ಲಿಸಿದ ವೇದವ್ಯಾಸ ಕಾಮತ್
ಕ್ಯೂಆರ್ ಕೋಡ್ ಬಳಕೆ ಮಾಡುವ ಎಳನೀರು ಮಾರಾಟಗಾರನಿಂದ ಎಳನೀರು ಖರೀದಿಸುತ್ತಿರುವ ಫೋಟೊವನ್ನು ಟ್ವೀಟರ್ ಬಳಕೆದಾರರಾದ ಆರ್ ಕೆ ಮಿಶ್ರಾ ಶೇರ್ ಮಾಡಿದ್ದಾರೆ. ಫೋಟೊದಲ್ಲಿ ವ್ಯಕ್ತಿಯೊಬ್ಬರು ಮೋಟಾರ್ ಸೈಕಲ್ ನಲ್ಲಿ ಎಳನೀರನ್ನು ಇಟ್ಟುಕೊಂಡಿದ್ದು, ಹಿಂಬದಿ ಸೀಟ್ ನಲ್ಲಿ ಕ್ಯೂಆರ್ ಕೋಡ್ ಕಾಣಬಹುದಾಗಿದೆ. ಮಿಶ್ರಾ ಅವರು ಮೋಟಾರ್ ಸೈಕಲ್ ಸಮೀಪ ನಿಂತು ಎಳನೀರು ಖರೀದಿಸುತ್ತಿದ್ದು, ಹಿಂಬದಿಯಲ್ಲಿ ಮಹಿಳೆಯೊಬ್ಬರು ಇವರ ವಹಿವಾಟನ್ನು ವೀಕ್ಷಿಸುತ್ತಿರುವುದನ್ನು ಕಾಣಬಹುದಾಗಿದೆ.
Coconut Man with QR code ಎಂಬ ಕ್ಯಾಪ್ಶನ್ ನೀಡಿರುವ ವಿಡಿಯೋಕ್ಕೆ ಡಿಜಿಟಲ್ ಪಾವತಿಗೆ ಸಂಬಂಧಿಸಿದಂತೆ ಟ್ವೀಟರ್ ಬಳಕೆದಾರರು ಪ್ರತಿಕ್ರಿಯೆ ನೀಡಿ,ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭುವನೇಶ್ವರದಲ್ಲಿ ಇದೊಂದು ಸಾಮಾನ್ಯ ದೃಶ್ಯವಾಗಿದೆ. ರಸ್ತೆ ಸಮೀಪದಲ್ಲಿ ಎಳನೀರು ಮಾರಾಟ ಮಾಡುವ ಬಹುತೇಕ ಮಂದಿ ಯುಪಿಐ ಸ್ವೀಕರಿಸುತ್ತಾರೆಂದು ಟ್ವೀಟರ್ ಬಳಕೆದಾರರೊಬ್ಬರು ತಿಳಿಸಿದ್ದಾರೆ.