Advertisement
ತೆಂಗಿನ ಕಾಯಿ (ಕೊಬ್ಬರಿ ಮಾತ್ರ)ಯನ್ನು ಕನಿಷ್ಠ ಬೆಂಬಲ ಬೆಲೆಯಡಿ ಖರೀದಿ ಮಾಡುವ ವ್ಯವಸ್ಥೆ ಹಿಂದೆ ಜಾರಿಯಲ್ಲಿತ್ತು, ಈಗ ಇಲ್ಲ. ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ನಿಗದಿ ಯಾಗುವ ಬೆಲೆಯಂತೆ ಬೆಳೆಗಾರರು ಕಾಯಿ ಮಾರಾಟ ಮಾಡುತ್ತಾರೆ. ದಕ್ಷಿಣ ಕನ್ನಡ, ಉಡುಪಿ ಯಲ್ಲಿ ಬಹುತೇಕ ತೆಂಗಿನ ಕಾಯಿ ವ್ಯಾಪಾರಿಗಳು ಬೆಳೆ ಗಾರರ ತೋಟಕ್ಕೆ ತೆರಳಿ ತೆಂಗಿನ ಕಾಯಿ ಖರೀದಿಸುತ್ತಾರೆ. ಕೆಲವು ಕಡೆ ಬೆಳೆಗಾರರೇ ನೇರ ವಾಗಿ ಎಪಿಎಂಸಿಗೆ ಮಾರು ತ್ತಾರೆ. ಸಿಪ್ಪೆ ಸಹಿತವಾದ ಒಂದು ಕಾಯಿಗೆ 14ರಿಂದ 16 ರೂ. ಖರೀದಿ ದರವಿದೆ. ಗಾತ್ರ ಚಿಕ್ಕದಿದ್ದರೆ 12 ರೂ. ವರೆಗೂ ಧಾರಣೆ ಇಳಿಯುತ್ತದೆ. ದೊಡ್ಡದಿದ್ದರೆ 18 ರೂ. ವರೆಗೆ ಇರುತ್ತದೆ. ಅದೇ ಸಿಪ್ಪೆ ತೆಗೆದ ಕಾಯಿ ಕೆ.ಜಿ.ಗೆ 30ರಿಂದ 35 ರೂ. ದರ ಇದೆ.
Related Articles
ತೆಂಗಿನ ಕಾಯಿಯ ಬೆಲೆ ಎಂಪಿಎಂಸಿಯಲ್ಲೇ ನಿರ್ಧಾರವಾ ಗುತ್ತದೆ. ತೋಟಗಾರಿಕೆ ಇಲಾಖೆಯು ತೆಂಗಿನಕಾಯಿ ಉತ್ಪತ್ತಿ ಹೆಚ್ಚಿ ಸುವ ಸಂಬಂಧ ಕೃಷಿಕರಿಗೆ ಮಾಹಿತಿ ನೀಡು ವುದು ಅಥವಾ ಅವರಿಗೆ ಗುಣಮಟ್ಟದ ತೆಂಗಿನ ಸಸಿ ಗಳನ್ನು ಒದಗಿಸುವುದು ಇತ್ಯಾದಿ ಮಾಡುತ್ತೇವೆ.
Advertisement
ಕಾಯಿಯ ದರ ನಿಗದಿ ಎಂಪಿಎಂಸಿಯಿಂದಲೇ ಆಗಲಿದೆ. ಎಪಿಎಂಸಿಯಲ್ಲಿ ತೆಂಗಿನ ಕಾಯಿಯ ಪೂರೈಕೆ ಮತ್ತು ಬೇಡಿಕೆಗೆ ಅನುಗುಣವಾಗಿ ಅಂದಿನ ದರ ನಿಗದಿಯಾಗಲಿದೆ ಎಂದು ತೋಟ ಗಾರಿಕೆ ಇಲಾಖೆ ಅಧಿಕಾರಿ ಮತ್ತು ಎಂಪಿಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತೆಂಗಿನ ಎಣ್ಣೆ ದುಬಾರಿಶುದ್ಧ ತೆಂಗಿನ ಎಣ್ಣೆ (ಗಾಣದಿಂದ ಮಾಡಿದ ಎಣ್ಣೆ) ಒಂದು ಲೀಟರ್‌ಗೆ 300ರಿಂದ 350 ರೂ. ಇದೆ. ಸಾಮಾನ್ಯ ತೆಂಗಿನ ಎಣ್ಣೆ 250ರಿಂದ 275 ರೂ.ಗಳ ವರೆಗೂ ಇದೆ. ಶುದ್ಧ ತೆಂಗಿನ ಎಣ್ಣೆಗೆ ಬೇಡಿಕೆ ಹೆಚ್ಚು. ಅದರಲ್ಲೂ ಕರಾವಳಿ ಭಾಗದಲ್ಲಿ ಅಡುಗೆಗೆ ಹೆಚ್ಚಾಗಿ ತೆಂಗಿನ ಎಣ್ಣೆಯನ್ನೇ ಬಳಸು ತ್ತಾರೆ. ತೆಂಗಿನ ಕಾಯಿಗೆ ದರ ಕಡಿಮೆ ಯಾದರೂ ತೆಂಗಿನ ಎಣ್ಣೆಯ ಬೆಲೆ ಮಾತ್ರ ಕಡಿಮೆಯಾಗುವುದಿಲ್ಲ. ಸೋಮ ವಾರ ಜಿಲ್ಲೆಗೆ ಆಗಮಿಸುವ ಮುಖ್ಯ ಮಂತ್ರಿ ಗಳು ಬೆಳೆಗಾರರ ಈ ಸಂಕಷ್ಟಗಳಿಗೆ ಕಿವಿಯಾಗುವರೇ ಎಂದು ಕಾದು ನೋಡಬೇಕಾಗಿದೆ. ತೆಂಗಿನಕಾಯಿ ಬೆಲೆ ಕುಸಿದಿರುವುದು ಗಮನಕ್ಕೆ ಬಂದಿದೆ. ಬೆಂಬಲ ಬೆಲೆಯಡಿ ಇದನ್ನು ಮತ್ತೆ ಸೇರಿಸುವ ಸಂಬಂಧ ಕೇಂದ್ರ ಮತ್ತು ರಾಜ್ಯ ಸರಕಾರಗಳ ಜತೆಗೆ ಮಾತುಕತೆ ನಡೆಸಲಿದ್ದೇವೆ.
-ಎಸ್. ಅಂಗಾರ,
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ -ರಾಜು ಖಾರ್ವಿ ಕೊಡೇರಿ