Advertisement

ಹೃದಯದ ಆರೋಗ್ಯಕ್ಕೆ ತೆಂಗಿನೆಣ್ಣೆ

09:24 PM Sep 16, 2019 | mahesh |

ತೆಂಗಿನೆಣ್ಣೆಯನ್ನು ಅಮೃತವೆಂದೇ ಹೇಳಲಾಗುತ್ತದೆ. ಇದನ್ನು ಕಾಯಿಲೆ ಗುಣ ಪಡಿಸಲು ಮತ್ತು ಶ್ಯಾಂಪೂ, ಕ್ರೀಮ್‌ ಅನೇಕ ರೀತಿಯ ಬ್ಯೂಟಿ ಪ್ರೊಡಕ್ಟ್ಗಳಲ್ಲಿ ಬಳಸಲಾಗುತ್ತದೆ. ತೆಂಗಿನೆಣ್ಣೆಯನ್ನು ಸೇವಿಸುವುದರಿಂದ ಆಗುವ ಉಪಯೋಗಗಳ ಬಗ್ಗೆ ಅಮೆರಿಕನ್‌ ಹಾರ್ಟ್‌ ಅಸೋಸಿಯೇಷನ್‌ ಪ್ರಯೋಗಗಳ ಮೂಲಕ ತಿಳಿಸಿದೆ.

Advertisement

ಇದು ಅನೇಕ ರೀತಿಯ ಸ್ಯಾಚುರೇಟೆಡ್‌ ಕೊಬ್ಬುಗಳನ್ನು ಒಳಗೊಂಡಿರುವುದರಿಂದ ಹೃದಯದ ಆರೋಗ್ಯವನ್ನು ನಿಯಂತ್ರಿಸುತ್ತದೆ. ಅಲ್ಲದೆ ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಕೊಲೆಸ್ಟ್ರಾಲ್‌ಅನ್ನು ಕಡಿಮೆ ಮಾಡುತ್ತದೆ.

ತೆಂಗಿನ ಎಣ್ಣೆ ಮತ್ತು ಹೃದ್ರೋಗ
ತೆಂಗಿನೆಣ್ಣೆಯಿಂದ ಅನೇಕ ರೀತಿಯ ಹೃದ್ರೋಗಗಳನ್ನು ತಡೆಗಟ್ಟಬಹುದು ಎಂದು ವೈಜ್ಞಾನಿಕ ಅಧ್ಯಯನಗಳು ದೃಡೀಕರಿಸುತ್ತವೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮೆದುಳನ್ನು ತೀಕ್ಷ್ಣವಾಗಿಸುತ್ತದೆ. ಕೆಲವು ಅಧ್ಯಯನಗಳ ಪ್ರಕಾರ ಈ ಸ್ಯಾಚುರೇಟೆಡ್‌ ಕೊಬ್ಬು ಅನಾರೋಗ್ಯವನ್ನು ಹೆಚ್ಚಿಸುತ್ತದೆ ಎಂದು ಆದರೆ ಇದನ್ನು ಸುಳ್ಳು ಎಂದು ಹೇಳಲು ಕೆಲವು ಅಧ್ಯಯನಗಳು ನಡೆದಿವೆ. ಇವು ಹೃದಯಾಘಾತ ಮತ್ತು ಕೆಲವು ರಕ್ತನಾಳಗಳ ಜತೆ ಸಂಬಂಧ ಹೊಂದಿದ್ದು ಹೃದಯದಲ್ಲಿ ಆಗುವ ಅನೀರಿಕ್ಷಿತ ಬದಲಾವಣೆಯನ್ನು ತಡೆಯುವಲ್ಲಿ ಸಹಕಾರಿ.

ಇದು ಹೃದಯಕ್ಕೆ ಬರುವ ಕಾಯಿಲೆಗಳನ್ನು ತಡೆಯುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಆಹಾರದಲ್ಲಿರುವ ಹೆಚ್ಚಿನ ಕೊಬ್ಬುಗಳನ್ನು ಟ್ರೈಗ್ಲಿ ಸರೈಡ್ಗಳು ಎಂದು ಕರೆಯಲಾಗುತ್ತದೆ. ಆದರೆ ಅದೇ ತೆಂಗಿನೆಣ್ಣೆಯಲ್ಲಿರುವ ಕೊಬ್ಬನ್ನು ಮಧ್ಯಮ ಸರಪಳಿ ಟ್ರೈಗ್ಲಿ ಸರೈಡ್ಗಳು (ಎಂಸಿಟಿ) ಎಂದು ಕರೆಯಲಾಗುತ್ತದೆ. ಇದರ ಅರ್ಥ ತೆಂಗಿನೆಣ್ಣೆಯಲ್ಲಿ ಕೊಬ್ಬಿನಾಮ್ಲಗಳು ಇತರ ಕೊಬ್ಬುಗಳಿಗಿಂತ ಚಿಕ್ಕದಾಗಿರುತ್ತದೆ. ಇದು ಮುಖ್ಯವಾಗಿ ಮೆದುಳಿಗೆ ಪ್ರಯೋಜನಕಾರಿ. ಅಕಾಲಿಕ ಮರಣವನ್ನು ತಡೆಗಟ್ಟುವಲ್ಲಿ ತೆಂಗಿನೆಣ್ಣೆಯ ಪಾತ್ರ ಬಹು ಮುಖ್ಯವಾಗಿದ್ದು, ಇದು ಕೆಲವು ಪ್ರಾಣಿಗಳ ಮೇಲೆ ನಡೆದ ಅಧ್ಯಯನಗಳಿಂದ ಸಾಬೀತಾಗಿದೆ.

- ಪ್ರೀತಿ ಭಟ್‌ ಗುಣವಂತೆ

Advertisement
Advertisement

Udayavani is now on Telegram. Click here to join our channel and stay updated with the latest news.

Next