Advertisement

ಕಂದಮ್ಮನ ಅಂದ ಹೆಚ್ಚಿಸುವ ತೆಂಗಿನೆಣ್ಣೆ

12:47 AM Nov 05, 2019 | Team Udayavani |

ನಿಮ್ಮ ಮುದ್ದು ಮಗುವಿನ ತ್ವಚೆ ಬೆಣ್ಣೆಯಂತೆ ಮೃದುವಾಗಿ, ನಾಜೂಕಾದ ಚರ್ಮಕ್ಕೆ ಕಿಂಚಿತ್ತೂ ಹಾನಿಯಾಗದಂತೆ ನೋಡಿಕೊಳ್ಳುವ ಬಯಕೆ ಎಲ್ಲ ತಾಯಂದಿರಲ್ಲಿ ಸಾಮಾನ್ಯವಾಗಿ ಇರುತ್ತದೆ. ಈ ಬಯಕೆಯನ್ನು ಈಡೇರಿಸಿಕೊಳ್ಳುವುದಕ್ಕೆ ಮನೆ ಮದ್ದಿನ ಮಾಹಿತಿ ಇಲ್ಲಿದ್ದು, ನಿಮ್ಮ ಮುದ್ದಾದ ಕಂದಮ್ಮನ ಅಂದವನ್ನು ಮತ್ತಷ್ಟು ಹೆಚ್ಚಿಸಿ ಪೋಷಿಸಬಹುದು.

Advertisement

1 ಪುಟ್ಟಮಕ್ಕಳಿಗೂ, ನವಜಾತ ಶಿಶುಗಳಿಗೂ ಕೊಬ್ಬರಿ ಎಣ್ಣೆ ಸೂಕ್ತವಾಗಿದ್ದು, ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿದೆ. ದೇಹದ ಆರೋಗ್ಯ, ಅದರಲ್ಲೂ ಕೂದಲು ಮತ್ತು ಚರ್ಮದ ಆರೈಕೆಯಲ್ಲಿ ಇದರ ಪಾತ್ರ ಮಹತ್ವದ್ದಾಗಿದೆ.

2 ಕೊಬ್ಬರಿ ಎಣ್ಣೆಯಲ್ಲಿ ಸಮೃದ್ಧವಾಗಿರುವ ಪೋಷಕಾಂಶ, ಲಾರಿಕ್‌ ಆಮ್ಲ ಮಕ್ಕಳಲ್ಲಿ ಕಾಣಿಸಿಕೊಳ್ಳುವ ಉರಿತವನ್ನು ನಿಯಂತ್ರಿಸುವುದರೊಂದಿಗೆ ಚರ್ಮದ ತೊಂದರೆಗಳನ್ನು ನಿವಾರಿಸುತ್ತದೆ. ಹಿರಿಯರಿಗೆ ಅಭ್ಯಂಜನಕ್ಕೆ ಕೊಬ್ಬರಿ ಎಣ್ಣೆ ಹೇಗೆ ಸೂಕ್ತವೋ ಹಾಗೆಯೇ ಚಿಕ್ಕಮಕ್ಕಳಿಗೂ ಕೊಬ್ಬರಿ ಎಣ್ಣೆ ಉತ್ತಮವಾಗಿದೆ.

3 ಸಾಮಾನ್ಯವಾಗಿ ಮಕ್ಕಳ ಚರ್ಮದ ತೈಲಗ್ರಂಥಿಗಳು ಹೆಚ್ಚು ಕ್ರಿಯಾಶೀಲವಾಗಿದ್ದು, ಸೂಕ್ಷ್ಮವಾಗಿರುತ್ತದೆ. ಇದರಿಂದ ಚರ್ಮ ಕೆಂಪಾಗುವುದು ಹಾಗೂ ತುರಿಕೆ ಮುಂತಾದ ಸಮಸ್ಯೆಗಳೂ ಎದುರಾಗಲಿದ್ದು, ಅವುಗಳ ನಿವಾರಣೆಗೆ ಕೊಬ್ಬರಿ ಎಣ್ಣೆ ಸಹಕಾರಿಯಾಗಲಿದೆ.

4 ಲಾರಿಕ್‌ ಆಮ್ಲ ಎಂಬ ಪೋಷಕಾಂಶ, ತಾಯಿ ಹಾಲಿನಲ್ಲೂ ಹೇರಳವಾಗಿದ್ದು, ಮಗುವಿನ ಪೋಷಣೆಗೆ ಹೆಚ್ಚು ಸಹಕಾರಿಯಾಗುತ್ತದೆ. ಆದ್ದರಿಂದ ಗರ್ಭಿಣಿಯರು ಹಾಗೂ ಮಗುವಿಗೆ ಹಾಲುಣಿಸುತ್ತಿರುವ ತಾಯಂದಿರು ತಾವು ಸೇವಿಸುವ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆ ಅಂಶ ಇರುವ ಆಹಾರ ಸೇವಿಸುವುದಯ ಒಳಿತು.

Advertisement

5 ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್‌ ಆಮ್ಲದಿಂದ ತಾಯಿ ಹಾಲು ವೃದ್ಧಿಯಾಗುವುದರ ಜತೆಗೆ, ತಾಯಿಯಾಗುವವರ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಸಂಗ್ರಹ ಮತ್ತು ಹೆಚ್ಚು ಹಾಲು ಉತ್ಪತ್ತಿಯಾಗಲು ಸಹಕರಿಸುತ್ತದೆ. ಹೀಗಾಗಿ ಮಗುವಿನ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುತ್ತದೆ.

-  ಸುಶ್ಮಿತಾ ಜೈನ್‌

Advertisement

Udayavani is now on Telegram. Click here to join our channel and stay updated with the latest news.

Next