Advertisement

20 ವರ್ಷದಿಂದ ತೆಂಗಿನ ಕಾಯಿ ವ್ಯಾಪಾರದಲ್ಲಿ ಸೈ ಎನಿಸಿಕೊಂಡ ವಸಂತ ನಾಯ್ಕ

02:06 PM Dec 13, 2021 | Team Udayavani |

ದಾಂಡೇಲಿ: ಅವರು ದಾಂಡೇಲಿಯವರಲ್ಲ. ಆದರೂ ದಾಂಡೇಲಿಯ ಮೂಲೆ ಮೂಲೆಯ ಜನರಿಗೆ ಪರಿಚಿತರು. ನಗರದ ಬಹುತೇಕ ಮನೆಗೆ ಇವರಿಂದ ಖರೀದಿಸಿದ ತೆಂಗಿನ ಕಾಯಿಗಳೆ ಖಾದ್ಯಗಳಿಗೆ ಬಳಕೆಯಾಗುವುದು ಸಾಮಾನ್ಯ.

Advertisement

ಅಂದ ಹಾಗೆ ನಾನಿಂದು ಹೇಳಲು ಹೊರಟಿರುವುದು ದಾಂಡೇಲಿಯ ಸಂಡೆ ಮಾರ್ಕೆಟಿನಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ತೆಂಗಿನ ಕಾಯಿ ರಾಶಿಯ ಜೊತೆಗೆ ಪ್ರತ್ಯಕ್ಷರಾಗುವ ವಸಂತ ನಾಯ್ಕ ಅವರ ಬಗ್ಗೆ. ತೆಂಗಿನ ಕಾಯಿಯಂದ್ರೆ ವಸಂತ ನಾಯ್ಕ, ವಸಂತ ನಾಯ್ಕ ಅಂದ್ರೆ ತೆಂಗಿನ ಕಾಯಿ ಎಂಬಷ್ಟರವರೆಗೆ ಬೆಳೆದಿರುವ ವಸಂತ ನಾಯ್ಕ ಅವರು ಕುಮುಟಾದ ನಿವಾಸಿಯಾಗಿದ್ದಾರೆ. ಕಳೆದ 20 ವರ್ಷಗಳಿಂದ ನಗರದ ಸಂಡೆ ಮಾರ್ಕೆಟಿನಲ್ಲಿ ವಾರದಲ್ಲಿ ಎರಡು ದಿನ ತೆಂಗಿನ ಕಾಯಿ ವ್ಯಾಪಾರ ಮಾಡುತ್ತಾರೆ. ನಗರದ ಬಹುತೇಕ ಹೋಟೆಲ್, ಅಂಗಡಿಗಳ ಮಾಲಕರು ಇವರಿಂದಲೆ ತೆಂಗಿನ ಕಾಯಿ ಖರೀದಿಸಿಕೊಳ್ಳುತ್ತಾರೆ. ನಗರದ ಹೆಚ್ಚಿನ ನಾಗರೀಕರು ಇವರ ಬಳಿ ಬಂದು ವಾರಕ್ಕೆ ಬೇಕಾಗುವಷ್ಟು ತೆಂಗಿನ ಕಾಯಿಗಳನ್ನು ಖರೀದಿಸುತ್ತಾರೆ.

ಮೊದಲೆ ಕುಮುಟಾ ಕಾಯಿ ಅಂದರೆ ಫೇಮಸ್, ಅಂತೆಯೆ ವಸಂತ ಅವರ ಸರಳ ನಡೆ ನುಡಿ, ಗ್ರಾಹಕರೊಂದಿಗಿನ ಅತ್ಯುತ್ತಮ ಬಾಂದವ್ಯ ವಸಂತ ನಾಯ್ಕ ಅವರ ವ್ಯಾಪಾರದ ವರ್ಚಸ್ಸನ್ನು ಪ್ರಗತಿಯೆಡೆಗೆ ಕೊಂಡೊಯ್ದಿದೆ. ಲಾಭವಿದೆ ಹೌದು ಆದರೆ ಅಷ್ಟೆ ಕಷ್ಟದ ಕೆಲಸವೂ ಹೌದು. ಆದರೂ ನಿಷ್ಟೆ ಮತ್ತು ಇಷ್ಟದಿಂದ ಈ ಕಾರ್ಯದಲ್ಲಿ ತೊಡಗಿಕೊಂಡಿರುವ ವಸಂತ ಅವರು ದಾಂಡೇಲಿ ಜನರಿಗೆ ಸಿಗುವುದು ವಾರದ ಸಂತೆಯಲ್ಲಿ ಮಾತ್ರ. ಗುಣಮಟ್ಟದ ತೆಂಗಿನ ಕಾಯಿಯ ವ್ಯಾಪಾರದ ಮೂಲಕ ಗಮನ ಸೆಳೆದ ಸಹೃದಯಿ ಶ್ರಮಜೀವಿಗೆ ನಿಮ್ಮೆಲ್ಲರ ಪ್ರೀತಿಯಿರಲಿ.

Advertisement

Udayavani is now on Telegram. Click here to join our channel and stay updated with the latest news.

Next