Advertisement
ಕಾರ್ಯಾಗಾರದ ಉದ್ಘಾಟನೆಯನ್ನು ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ಉಪ ಮಹಾನಿರ್ದೇಶಕ ಡಾ|ಎ.ಕೆ.ಸಿಂಗ್ ಮೇ 20ರಂದು ನೆರವೇರಿಸಲಿರುವರು. ಕೊಕ್ಕೋ ತಳಿ ಸಂಶೋಧನೆ, ಕೃಷಿ ವಿಭಾಗ, ಉತ್ಪಾದನೆ, ಸಂಸ್ಕರಣೆ, ಮಾರಾಟ, ರಫ್ತು, ಸಂಬಂಧಿತ ಉದ್ದಿಮೆಗಳ ಪ್ರಮುಖರು ಪಾಲ್ಗೊಳ್ಳುವ ಈ ಕಾರ್ಯಾಗಾರದಲ್ಲಿ ಆಸ್ಟ್ರೇಲಿಯಾ, ಇಂಡೋನೇಷ್ಯಾ, ಮಲೇಶ್ಯಾ, ಫಿಲಿಪೈನ್ಸ್, ವಿಯೆಟ್ನಾಂ, ಅಮೆರಿಕ, ಬೆಲ್ಜಿಯಂ ದೇಶಗಳಿಂದ 13 ಹಾಗೂ ಭಾರತೀಯ 31 ಗಣ್ಯರು ಭಾಗವಹಿಸುವರು.
ಕಾರ್ಯಾಗಾರದಲ್ಲಿ ಭಾಗವಹಿಸುವವ ರಿಗಾಗಿ ವಿಟ್ಲ ಸಿ.ಪಿ.ಸಿ.ಆರ್.ಐ.ಯ ಸಂಶೋಧನಾ ಕ್ಷೇತ್ರ, ಕಿದು ಸಿ.ಪಿ.ಸಿ.ಆರ್.ಐ.ಯ ಕೃಷಿ ಕ್ಷೇತ್ರ ಹಾಗೂ ಕ್ಯಾಂಪ್ಕೋ ಸಂಸ್ಕರಣಾ ಕ್ಷೇತ್ರಗಳಿಗೆ ಭೇಟಿ ಕೂಡ ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ.
Related Articles
Advertisement
ಸಂಪನ್ಮೂಲ ಅಭಿವೃದ್ಧಿವಿಟ್ಲದ ಸಿ.ಪಿ.ಸಿ.ಆರ್.ಐ.ಯಲ್ಲಿ 1969ರಲ್ಲಿ ಕೊಕ್ಕೋ ಸಂಶೋಧನೆ ಆರಂಭ ವಾಗಿ ಈ 50 ವರ್ಷಗಳಲ್ಲಿ ಎಂಟು ತಳಿಗಳ ಅಭಿವೃದ್ಧಿ ನಡೆಸಲಾಗಿದೆ. ಕೊಚ್ಚಿಯ ಗೇರು ಹಾಗೂ ಕೊಕ್ಕೋ ಅಭಿವೃದ್ಧಿ ಮಂಡಳಿ ಬೆಳೆ ವ್ಯಾಪನಕ್ಕಾಗಿ ಪ್ರೋತ್ಸಾಹ ನೀಡುತ್ತಾ ಬಂದಿದೆ. ಸಹಕಾರೀ ಸಂಸ್ಥೆಯಾದ ಕ್ಯಾಂಪ್ಕೋ ಮಾರುಕಟ್ಟೆ ಹಾಗೂ ಸಂಸ್ಕರಣೆಗೆ ಬೆನ್ನೆಲುಬಾಗಿ ನಿಂತಿದೆ. ಖಾಸಗಿ ವಲಯದಲ್ಲಿ ಮೋಂಡೆಲೆಜ್ ಪ್ರವರ್ತಿಸುತ್ತಿರುವುದೂ ಕೊಕ್ಕೋ ವಲಯದ ಸ್ಥಿರತೆಗೆ ಕಾರಣ. ಕೊಕ್ಕೋ ಗ್ರಾಫ್ಟ್ ಗಿಡಗಳ ಅಭಿವೃದ್ಧಿಗಾಗಿ ತಳಿ ಸಂಪನ್ಮೂಲದ ಅಭಿವೃದ್ಧಿ ಕೂಡ ಮಹತ್ವ ಪೂರ್ಣವಾಗಲಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ಕಾರ್ಯಾಗಾರ ಮಹತ್ವ ಪೂರ್ಣವಾಗಿದ್ದು ಮುಂಬರುವ ಕಾರ್ಯಾಚರಣೆಗಾಗಿ ರೂಪುರೇಷೆಗಳತ್ತ ಬೆಳಕು ಚೆಲ್ಲಲಿದೆ.